ದೆಹಲಿ: ‘ಕೋವಿಡ್ ಪಾಸಿಟಿವ್ ಆಗಿರುವ ವ್ಯಕ್ತಿಯೊಬ್ಬರಿಗೆ ಸಹಾಯಬೇಕು. ಉತ್ತರಪ್ರದೇಶದ ಗಾಜಿಯಾಬಾದ್‌ನ ಯಾವುದೇ ಆಸ್ಪತ್ರೆಯಲ್ಲಿ ಹಾಸಿಗೆ ಸಿಗುತ್ತಿಲ್ಲ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ವಿಜಯ್ ಕುಮಾರ್ ಸಿಂಗ್ (ವಿ.ಕೆ.ಸಿಂಗ್) ಭಾನುವಾರ ಟ್ವೀಟ್ ಮಾಡಿದ್ದು, ಈ ಟ್ವೀಟ್ ವೈರಲ್ ಆಗಿದೆ. ಟ್ವೀಟ್ನಲ್ಲಿ ನನ್ನ ಸಹೋದರನಿಗೆ ಸಹಾಯ ಬೇಕು ಎಂದು ಬರೆದಿದ್ದ ಕಾರಣ ಸಾಮಾಜಿಕ ಮಾಧ್ಯಮಗಳಲ್ಲಿ ಈ ಟ್ವೀಟ್ ಸಂಚಲನವುಂಟು ಮಾಡಿದೆ. ಸಚಿವರ ಸಹೋದರನಿಗೂ ಬೆಡ್ ಸಿಗುತ್ತಿಲ್ಲವೇ ಎಂದು ಹಲವಾರು ಟ್ಟೀಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದು ಇನ್ನು ಕೆಲವರು ಸಚಿವರ ಸಹಾಯಕ್ಕೆ ಮುಂದೆ ಬಂದು, ಹೆಚ್ಚಿನ ಮಾಹಿತಿಗಳನ್ನು ನೀಡುವಂತೆ ಒತ್ತಾಯಿಸಿದ್ದರು.
ಟ್ವೀಟ್ ನೋಡಿ ಹಲವಾರು ನೆಟ್ಟಿಗರು ಸಹಾಯಕ್ಕಾಗಿ ಮುಂದೆ ಬಂದಾಗ ಸಚಿವರು ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಟ್ವೀಟ್ ಡಿಲೀಟ್ ಮಾಡಿದ ನಂತರ ಸ್ಪಷ್ಟೀಕರಣ ನೀಡಿದ ವಿ.ಕೆ.ಸಿಂಗ್, ನಾನು ಟ್ವೀಟ್ನಲ್ಲಿ ಹೇಳಿರುವ ವ್ಯಕ್ತಿ ನನ್ನ ರಕ್ತ ಸಂಬಂಧಿ ಅಲ್ಲ. ಸೋಂಕಿತ ವ್ಯಕ್ತಿಗೆ ಸಹಾಯ ಮಾಡಲು ಜಿಲ್ಲಾಡಳಿತಕ್ಕೆ ಮಾಹಿತಿ ತಲುಪಿಸುವುದಕ್ಕೋಸ್ಕರ ನಾನು ಈ ಟ್ವೀಟ್ ಮಾಡಿದ್ದೇನೆ ಎಂದಿದ್ದಾರೆ.
ಗಾಜಿಯಾಬಾದ್ ಸಂಸದರೂ ಆಗಿರುವ ವಿ.ಕೆ. ಸಿಂಗ್ ಅವರ ಟ್ವೀಟ್ ಹೀಗಿದೆ-‘ಸ್ಪಷ್ಟೀಕರಣ: ಜಿಲ್ಲಾಡಳಿತವು ನೆರವು ಅಗತ್ಯವಿರುವ ವ್ಯಕ್ತಿಯನ್ನು ತಲುಪಲು ಮತ್ತು ಅವನ ಸಹೋದರನಿಗೆ ಅಗತ್ಯವಿರುವ ವೈದ್ಯಕೀಯ ಆರೈಕೆಯನ್ನು ಒದಗಿಸುವುದಕ್ಕಾಗಿ ನಾನು ಆ ಟ್ವೀಟ್ ನಲ್ಲಿ ಮನವಿ ಮಾಡಿದ್ದೆ. ಅವನು ಸಂಬಂಧದಿಂದ ನನ್ನ ಸಹೋದರನಲ್ಲ, ಆದರೆ ಮಾನವೀಯತೆಯ ಸಂಬಂಧದಿಂದ ಸಹೋದರ. ಇದು ಕೆಲವರಿಗೆ ಅನ್ಯಗ್ರಹ ಜೀವಿಯ ಪರಿಕಲ್ಪನೆ ಆಗಿರಬಹುದು’ ಎಂದಿದ್ದಾರೆ.
ಸೇನಾಪಡೆಯ ಮಾಜಿ ಮುಖ್ಯಸ್ಥರೂ ಆಗಿರುವ ವಿ.ಕೆ.ಸಿಂಗ್ ಅವರ ಟ್ವೀಟ್ನ್ನು ಕೆಲವರು ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್, ಕೊರೊನಾ ರೋಗಿಗೆ ಅಗತ್ಯವಾಗಿರುವ ಬೆಡ್ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಮತ್ತು ಮುಖ್ಯಮಂತ್ರಿಯವರ ಕಚೇರಿ ಒದಗಿಸಿದೆ. ವೇಗವಾಗಿ ಹರಡುವ ವಾಹಕಗಳ ಬುದ್ಧಿವಂತಿಕೆಯ ಮಟ್ಟ (IQ)ವನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ. ಜಿಲ್ಲಾ ಮೆಜಿಸ್ಟ್ರೇಟ್ ಅವರಿಗೆ ಬಂದ ಫಾರ್ವರ್ಡ್ ಟ್ವೀಟ್ ಅದಾಗಿತ್ತು, ಈ ಬಗ್ಗೆ ಗಮನಿಸಿ ಎಂದು ಬರೆದಿತ್ತು. ಫಾರ್ವರ್ಡ್ ಆಗಿ ಬಂದ ಟ್ವೀಟ್ ಹಿಂದಿಯಲ್ಲಿತ್ತು. ಹಾಸಿಗೆಯ ಅವಶ್ಯಕತೆಯನ್ನು ಜಿಲ್ಲಾ ಮೆಜಿಸ್ಟ್ರೇಟರ್ ಮತ್ತು ಮುಖ್ಯಮಂತ್ರಿಯವರ ಕಚೇರಿ ಪೂರೈಸಿದೆ ಎಂದು ಬರೆದಿದ್ದಾರೆ.
Am amazed at IQ level of trawls and fastest finger channels. Tweet was forward of a tweet to DM and says “please look into this”. Forwarded tweet is in hindi. Bed needs have been sorted out by DM & CMO , hence to DM. Suggest correct your understanding. https://t.co/BVZyZgQoDG
— Vijay Kumar Singh (@Gen_VKSingh) April 18, 2021
ಕೊವಿಡ್ ಎರಡನೇ ಅಲೆಯಿಂದ ದೇಶವು ತತ್ತರಿಸುತ್ತಿರುವ ಸಮಯದಲ್ಲಿಯೇ ವಿ.ಕೆ ಸಿಂಗ್ ಅವರ ಪೋಸ್ಟ್ ವೈರಲ್ ಆಗಿದೆ. ಪ್ರತಿದಿನ ಸುಮಾರು 79ರಷ್ಟು ಹೊಸ ಕೊವಿಡ್ ಪ್ರಕರಣಗಳು ವರದಿಯಾಗುವ 10 ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಸೇರಿದೆ. ಶನಿವಾರ ರಾಜ್ಯದಲ್ಲಿ 27,426 ಹೊಸ ಪ್ರಕರಣಗಳು ಇಲ್ಲಿ ವರದಿ ಆಗಿದೆ.
ಉತ್ತರ ಪ್ರದೇಶದಲ್ಲಿ ವಾರಾಂತ್ಯ ಲಾಕ್‌ಡೌನ್‌ಗೆ ಆರಂಭವಾಗಿದ್ದು ಮೇ 15 ರವರೆಗೆ ಇದು ಮುಂದುವರಿಯಲಿದೆ. ಎರಡು ಮೂರು ವಾರಗಳವರೆಗೆ ಸಂಪೂರ್ಣ ಲಾಕ್‌ಡೌನ್ ತರಹದ ಕ್ರಮಗಳನ್ನು ಎರಡು ಮೂರು ವಾರಗಳವರೆಗೆ ವಿಧಿಸುವ ಬಗ್ಗೆ ಯೋಚಿಸಿ ಎಂದು ಅಲಹಾಬಾದ್ ಹೈಕೋರ್ಟ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಹೇಳಿದೆ.
ಇದನ್ನೂ ಓದಿ: ಕೊರೊನಾ ಶಂಕಿತ ರೋಗಿಗಳಿಗೆ ಸಂಭಾವ್ಯ ಕೊವಿಡ್ ರೋಗಿಗಳು ಎಂದು ಪರಿಗಣಿಸಿ ಚಿಕಿತ್ಸೆ ನೀಡಲಿದೆ ಉತ್ತರ ಪ್ರದೇಶ ಸರ್ಕಾರ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ಗೆ ಕೊರೊನಾ ಸೋಂಕು ದೃಢ