ಅವನ ವಯಸ್ಸು 76.. ಅವಳ ವಯಸ್ಸು 47 -ಹಾಗಾದರೆ ಗಂಜಾಂನಲ್ಲಿ ಅವರಿಬ್ಬರ ಮಧ್ಯೆ ನಡೆದಿದ್ದೇನು ಗೊತ್ತಾ?
Unique Love Marriage : ಅಂತಿಮವಾಗಿ ಜುಲೈ 19 ರಂದು ರಾಮಚಂದ್ರ ಮತ್ತು ಸುರೇಖಾ ಅವರು ಭಂಜನಗರ ನ್ಯಾಯಾಲಯದಲ್ಲಿ ವಿವಾಹವಾದರು. ಇದಾದ ಬಳಿಕ ದೇವಸ್ಥಾನದಲ್ಲಿ ವಿಧಿವಿಧಾನಗಳ ಪ್ರಕಾರ ಮತ್ತೆ ವಿವಾಹವಾದರು.
ಗಂಜಾಂ, ಒಡಿಶಾ ಜುಲೈ 28: ವಯಸ್ಸು ಅನ್ನೋದು ಜಸ್ಟು ನಂಬರು ಬಾಸು! ಇನ್ನು ಆಕೆಯ ವಯಸ್ಸು 47.. ಆತನ ವಯಸ್ಸೋ 76.. ಇಂತಹ ಇಳಿವಯಸ್ಸಿನಲ್ಲಿ ಅರಳಿದ ಅಪ್ಪಟ ಪ್ರೀತಿ ಅದು.. ಪ್ರೀತಿಗೂ-ವಯಸ್ಸಿಗೂ ಸಂಬಂಧವಿಲ್ಲ.. ಎರಡು ಮನಸ್ಸುಗಳು ಬೆರೆತರೆ ಸಾಕು ಎಂದು ಇವರಿಬ್ಬರೂ ಮಗದೊಮ್ಮೆ ಸಾಬೀತು ಮಾಡಿದ್ದಾರೆ. ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರು ಕೊನೆಗೂ ಮದುವೆಯಾಗಿ ಒಂದಾದರು. 76ರ ಹರೆಯದಲ್ಲಿ 47ರ ಹರೆಯದ ಮಹಿಳೆಯನ್ನು ಪ್ರೀತಿಸಿದ ಮುದುಕನೊಬ್ಬ ವೈರಲ್ ಆಗಿದ್ದಾನೆ. ತಡವಾಗಿ ಬಯಲಾದ ಈ ಪ್ರೇಮದ ಸಂಗತಿ ಒಡಿಶಾದ ಗಂಜಾಂ ಜಿಲ್ಲೆಯ ಶಂಖಮುಂಡಿ ಮಂಡಲದ ಅಡ್ಡಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಮಚಂದ್ರ ಸಾಹು (76) ಎಂಬ ವೃದ್ಧನಿಗೆ ಹಲವು ವರ್ಷಗಳ ಹಿಂದೆ ವಿವಾಹವಾಗಿತ್ತು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆ ಮಾಡಿದ್ದಾರೆ. ಈ ಮಧ್ಯೆ ರಾಮಚಂದ್ರರ ಪತ್ನಿ ಸಾವನ್ನಪ್ಪಿದ್ದಾಳೆ. ಪರಿಸ್ಥಿತಿ ಹೀಗಿರುವಾಗ ಸುಮಾರು 18 ವರ್ಷಗಳಿಂದ ಒಂಟಿ ಜೀವನ ಸಾಗಿಸುತ್ತಿದ್ದರು. ಕಳೆದ ಎಂಟು ವರ್ಷಗಳ ಹಿಂದೆ ಅವರಿಗೆ ಮತ್ತೆ ಮದುವೆಯಾಗುವ ಆಸೆ ಚಿಗುರಿದೆ. ಈ ಮಧ್ಯೆ.. ಭಂಜ್ ನಗರ ಕುಳಾಗರ್ ಗ್ರಾಮದ ತ್ರಿನಾಥ್ ಸಾಹು ಅವರ ಪುತ್ರಿ ಸುರೇಖಾ (46) ಅವರನ್ನೊಮ್ಮೆ ರಾಮಚಂದ್ರ ನೋಡಿದ್ದಾರೆ. ಅಷ್ಟೇ… ಖಚಿತವಾಗಿ ಮರುಮದುವೆ ಆಗಲೇಬೇಕು ಎಂದು ಅವರು ನಿರ್ಧರಿಸಿದ್ದಾರೆ.
ಮೊದಲ ನೋಟದಲ್ಲೇ ಸುರೇಖಾರನ್ನು ಮದುವೆಯಾಗಲು ನಿರ್ಧರಿಸಿದ ರಾಮಚಂದ್ರ, ತಮ್ಮ ಪ್ರೀತಿಯನ್ನು ಅರುಹಿದ್ದಾರೆ. ರಾಮಚಂದ್ರ ಮಾತಿಗೆ ಸುರೇಖಾ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಇತ್ತೀಚೆಗೆ ಇಬ್ಬರೂ ಫೋನ್‌ನಲ್ಲಿ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು.
ಅಂತಿಮವಾಗಿ ಜುಲೈ 19 ರಂದು ರಾಮಚಂದ್ರ ಮತ್ತು ಸುರೇಖಾ ಅವರು ಭಂಜನಗರ ನ್ಯಾಯಾಲಯದಲ್ಲಿ ವಿವಾಹವಾದರು. ಇದಾದ ಬಳಿಕ ದೇವಸ್ಥಾನದಲ್ಲಿ ವಿಧಿವಿಧಾನಗಳ ಪ್ರಕಾರ ಮತ್ತೆ ವಿವಾಹವಾದರು. ಇನ್ನು, ಈ ವಯಸ್ಸಿನಲ್ಲಿ ತಮ್ಮ ಪ್ರೇಮ ವಿವಾಹವನ್ನು ನಿಲ್ಲಿಸದಂತೆ ಕುಟುಂಬಸ್ಥರು ದೊಡ್ಡ ಹೃದಯದಿಂದ ಯೋಚಿಸಬೇಕು ಎಂದು ಇಬ್ಬರೂ ಮನವಿ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:17 am, Fri, 28 July 23