ನ್ಯೂಯಾರ್ಕ್ನಲ್ಲಿ ಜುಲೈ 10ರಿಂದ 14ರವರೆಗೆ ನಡೆಯಲಿರುವ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ(Kishan Reddy)ಯವರನ್ನು ಆಹ್ವಾನಿಸಲಾಗಿದೆ. ವಿಶ್ವಸಂಸ್ಥೆಯ ಎಚ್ಎಲ್ಪಿಎಫ್ನ ಕೊರೊನಾವೈರಸ್ನಿಂದ ಚೇತರಿಕೆ ವೇಗ ಹೆಚ್ಚಿಸುವುದು ಹಾಗೂ ಎಲ್ಲಾ ಹಂತಗಳಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯ ಸಂಪೂರ್ಣ ಅನುಷ್ಠಾನವು ಸಭೆಯ ಥೀಮ್ ಆಗಿರಲಿದೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕಿಶನ್ ರೆಡ್ಡಿ ಅವರ ಭಾಷಣ ಜುಲೈ 13 ಹಾಗೂ 14ರಂದು ಇರಲಿದೆ. ಎಚ್ಎಲ್ಪಿಎಫ್ನಿಂದ ಈ ಆಹ್ವಾನವನ್ನು ಸ್ವೀಕರಿಸಿದ ಮೊದಲ ಪ್ರವಾಸೋದ್ಯಮ ಸಚಿವ ರೆಡ್ಡಿ ಜಿ-20 ಪ್ರವಾಸೋದ್ಯಮ ಅಧ್ಯಕ್ಷರಾಗಿ ಭಾಗವಹಿಸಲಿದ್ದಾರೆ.
ಮತ್ತಷ್ಟು ಓದಿ: G Kishan Reddy: ಜೀವನದ ಅಂತಿಮ ಕ್ಷಣದವರೆಗೂ ಪರಿಸರವನ್ನು ರಕ್ಷಿಸಿ: ಸಚಿವ ಕಿಶನ್ ರೆಡ್ಡಿ
ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಅಪರೂಪದ ಗೌರವ ಸಿಕ್ಕಿದೆ. ಕೇಂದ್ರ ಸಚಿವ ಕಿಶನ್ ರೆಡ್ಡಿ ವಿಶ್ವಸಂಸ್ಥೆಯ ಉನ್ನತ ಮಟ್ಟದ ರಾಜಕೀಯ ವೇದಿಕೆ (ಎಚ್‌ಎಲ್‌ಪಿಎಫ್) ಉದ್ದೇಶಿಸಿ ಮಾತನಾಡಲಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ನಡೆದ ಜಿ20 ಸಭೆಗಳು ಯಶಸ್ವಿಯಾಗಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಸಭೆಗೆ ಮಹತ್ವ ನೀಡಲಾಗಿದೆ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) ಆಶ್ರಯದಲ್ಲಿ ಹೈ ಲೆವೆಲ್ ಪೊಲಿಟಿಕಲ್ ಫೋರಮ್ (HLPF) ನಲ್ಲಿ ಸಭೆಗಳು ನಡೆಯಲಿವೆ. ಗೋವಾ ಮಾರ್ಗ ನಕ್ಷೆ ಅನುಷ್ಠಾನ, ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವುದು ಪ್ರಮುಖ ಗುರಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ