ಪ್ರತಿದಿನ ಲಕ್ಷಾಂತರ ಜನರು ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ. ಇದೇ ವೇಳೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಜನಜಂಗುಳಿ ಹೆಚ್ಚಾಗಿದ್ದರಿಂದ ಟಿಕೆಟ್ ಲಭ್ಯವಾಗದೆ, ರೈಲು ತಪ್ಪಿ ಹೋಗುತ್ತದೆ ಎಂಬ ಭಯದಿಂದ ಟಿಕೆಟ್ ಇಲ್ಲದೇ ರೈಲು ಹತ್ತಿಬಿಡುತ್ತಾರೆ. ಆಗ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದರೆ ನಿಮಗೆ ದಂಡ ವಿಧಿಸಬಹುದು. ಈ ಅಪಾಯದಿಂದ ಪಾರಾಗಬಯಸುವಿರಾದರೆ ನೀವು ರೈಲು ಹತ್ತುವುದಕ್ಕೆ ಮುನ್ನ ಕಾಯ್ದಿರಿಸದ ರೈಲು ಟಿಕೆಟ್ (Unreserved Train Ticket) ಅನ್ನು ಬುಕ್ ಮಾಡಬಹುದು. ಆ ವಿಧಾನವನ್ನು ನೀವಿಲ್ಲಿ ತಿಳಿದುಕೊಳ್ಳುವುದು ಒಳ್ಳೆಯದು. UTS ಆಪ್ (Unreserved Ticketing System -UTS): ಟಿಕೆಟ್ ಕಾಯ್ದಿರಿಸದೇ ಇದ್ದರೂ ರೈಲು ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಮೊಬೈಲ್ನಲ್ಲಿ ಆನ್‌ಲೈನ್ ಮೂಲಕ (Mobile Application) ರೈಲ್ವೆ ಯುಟಿಎಸ್ ಅಪ್ಲಿಕೇಶನ್‌ನಲ್ಲಿ ಒದಗಿಸಲಾಗಿದೆ. UTS ಅಪ್ಲಿಕೇಶನ್ ಮೂಲಕ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲು ಹತ್ತುವುದಕ್ಕೆ ಮುನ್ನ ನಿಲ್ದಾಣದಲ್ಲಿದ್ದಾಗ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಮೊಬೈಲ್ ಅಪ್ಲಿಕೇಶನ್ ಯುಟಿಎಸ್ ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಆವೃತ್ತಿಗಳೊಂದಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದೇ ಸಮಯದಲ್ಲಿ ಟಿಕೆಟ್ ಪಾವತಿಯನ್ನು ಆನ್‌ಲೈನ್‌ನಲ್ಲಿ ಮಾತ್ರ ಮಾಡಬಹುದು. ರೈಲ್ವೆ ಇಲಾಖೆ ಒದಗಿಸುವ ಈ ಸೌಲಭ್ಯದೊಂದಿಗೆ ಕಾಯ್ದಿರಿಸದ ಟಿಕೆಟ್‌ಗಳು ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಈಗ ‘ಯುಟಿಎಸ್ ಮೊಬೈಲ್ ಆಪ್’ ಕನ್ನಡದಲ್ಲಿಯೂ ಲಭ್ಯ. ಈ ಕೂಡಲೇ ಡೌನ್ ಲೋಡ್ ಮಾಡಿ.https://t.co/10Ap1ErCj6 #IndianRailways #DigitalIndia #Kannada @SWRRLY pic.twitter.com/2e6hBWUORB
— DRM Mysuru (@DrmMys) January 18, 2023
ಮೊದಲು ಯುಟಿಎಸ್ ಆಪ್ ಗೆ ಹೋಗಿ. ಸಾಮಾನ್ಯ ಬುಕಿಂಗ್ ಆಯ್ಕೆಯನ್ನು ಆರಿಸಿ.
ನಂತರ ನೀವು ತಲುಪಬೇಕಾದ ನಿಲ್ದಾಣದ ಹೆಸರು/ಕೋಡ್ ಅನ್ನು ನಮೂದಿಸಿ.
ಪ್ರಯಾಣಿಕ, ಮೇಲ್ ಅಥವಾ ಎಕ್ಸ್‌ಪ್ರೆಸ್‌ನಂತಹ ಟಿಕೆಟ್ ಪ್ರಕಾರವನ್ನು ಆಯ್ಕೆ ಮಾಡಿಕೊಳಿ.
ಪೇಪರ್, ಪೇಪರ್ಸ್ ಆಯ್ಕೆಯನ್ನು ಆರಿಸಿಕೊಳ್ಳಬೇಕು. ವಾಲೆಟ್ ಅಥವಾ ಇತರ ಆನ್‌ಲೈನ್ ಪಾವತಿ ವಿಧಾನಗಳಿಂದ ಪಾವತಿ ವಿಧಾನವನ್ನು ಆಯ್ಕೆ ಮಾಡಿ.
ಕಾಯ್ದಿರಿಸದ ರೈಲು ಟಿಕೆಟ್‌ಗಳನ್ನು ಖರೀದಿಸಲು
ಯು ಟಿ ಎಸ್ ಆ್ಯಪ್ ಬಳಸಿ…
ರೈಲ್ವೆ ಬುಕಿಂಗ್ ಕೌಂಟರ್ಗಳಲ್ಲಿ ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಿ !
ಆರ್ -ವಾಲೆಟ್ ರಿಚಾರ್ಜ್ ಮೇಲೆ 3% ಬೋನಸ್ ಪಡೆಯಿರಿ.#DigitalIndia #IndianRailways @SWRRLY pic.twitter.com/DnaH3y0k20— DRM Mysuru (@DrmMys) January 18, 2023
ನಿಮ್ಮ ಟಿಕೆಟ್ ಬುಕಿಂಗ್ ಕುರಿತು ಸಂದೇಶವನ್ನು ನೀವು ಪಡೆಯುತ್ತೀರಿ. UTS ಡ್ಯಾಶ್‌ಬೋರ್ಡ್‌ನಲ್ಲಿ ಟಿಕೆಟ್ ಅನ್ನು ವೀಕ್ಷಿಸಬಹುದು.
Published On - 10:47 am, Wed, 31 May 23