ದೆಹಲಿ, ಆ.8: ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿಸಿದ್ದಕ್ಕಾಗಿ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ (Derek O’Brien) ಅವರನ್ನು ಅಧಿವೇಶದಿಂದ ಅಮಾನತು ಮಾಡಲಾಗಿದೆ. ಸಭಾನಾಯಕ ಪಿಯೂಷ್ ಗೋಯಲ್ ಅವರು, ಸದನದ ಕಲಾಪಗಳಿಗೆ ನಿರಂತರವಾಗಿ ತೊಂದರೆ ನೀಡಿದ್ದಕ್ಕಾಗಿ, ಸಭಾಪತಿಗೆ ಅವಿಧೇಯತೆ ಮತ್ತು ಸದನದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದರು. ಸಭಾಧ್ಯಕ್ಷ ಜಗದೀಪ್ ಧನಕರ್ ಅಮಾನತು ಆದೇಶದ ನಂತರ ಭಾರೀ ಗದ್ದಲದ ನಡುವೆ ಅಧಿವೇಶವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.
ಸದನವು ಪಟ್ಟಿಮಾಡಿದ ಕಾರ್ಯಸೂಚಿಯನ್ನು ಕೈಗೆತ್ತಿಕೊಂಡ ನಂತರ, ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳ ಬೇಡಿಕೆಯನ್ನು ಇಟ್ಟಿದೆ. ಆದರೆ ಸಭಾಧ್ಯಕ್ಷ ಜಗದೀಪ್ ಧನಕರ್ ಅವರು ಅದು ಕಾರ್ಯಸೂಚಿಯಲ್ಲಿದೆ, ಆದರೆ ಈಗ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಸಭಾನಾಯಕ ಪಿಯೂಷ್ ಗೋಯಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯಸಭೆಗೆ ಬಂದ ನಂತರ ಚರ್ಚೆ ನಡೆಸಬಹುದು ಎಂದರು. ಈ ಬಗ್ಗೆ ಚರ್ಚೆ ನಡೆಸಲು ವಿರೋಧ ಪಕ್ಷದ ಸದಸ್ಯರು ಸಿದ್ಧರಿದ್ದರೆ, ಮಧ್ಯಾಹ್ನ 12 ಗಂಟೆ ನಂತರ ಚರ್ಚೆ ನಡೆಸಬಹುದು ಎಂದು ಹೇಳಿದ್ದಾರೆ.
ಮಣಿಪುರದ ಪರಿಸ್ಥಿತಿಯ ಕುರಿತು ಚರ್ಚೆಯು ಎರಡೂವರೆ ಗಂಟೆಗಳಿಗಿಂತ ಹೆಚ್ಚು ಕಾಲ ಬೇಕು. ಈ ಚರ್ಚೆಗೆ ಸರ್ಕಾರ ಮತ್ತು ಗೃಹ ಸಚಿವರು ತಮ್ಮ ಸಮ್ಮತಿಯನ್ನು ಸೂಚಿಸಿದ್ದಾರೆ ಎಂದು ಸಭಾಧ್ಯಕ್ಷ ಜಗದೀಪ್ ಧನಕರ್ ಹೇಳಿದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಒ’ಬ್ರೇನ್ ಅವರು ಎದ್ದು ನಿಂತು ಸದನದ ಬಾವಿಗೆ ಬಂದು ಪ್ರತಿಭಟಿಸಿದರು, ಸಂಸದರ ಈ ವರ್ತನೆಯಿಂದ ಕೋಪಗೊಂಡ ಸಭಾಧ್ಯಕ್ಷ ಜಗದೀಪ್ ಧನಕರ್ ಅವರು ನಾನು ಮಾತನಾಡುವ ಮುನ್ನ ನೀವು ಎದ್ದು ನಿಲ್ಲಬೇಡಿ ಎಂದರು, ಆದರೆ ಇದಕ್ಕೆ ಗಮನ ನೀಡದ ಡೆರೆಕ್ ಒ’ಬ್ರಿಯಾನ್ ಅವರು ಜಗದೀಪ್ ಧನಕರ್ ಮಾತಿನ ಮಧ್ಯೆ ಎಂದು ನಿಂತು ಕೂಗಾಡುತ್ತಿದ್ದರು, ಇದರಿಂದ ಕೋಪಗೊಂಡ ಸಭಾಪತಿ ಡೆರೆಕ್ ಒ’ಬ್ರಿಯಾನ್ ಹೆಸರು ಎತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಸದಸ್ಯರು ನಿಯಮ 267 ರ ಅಡಿಯಲ್ಲಿ ಚರ್ಚೆಗೆ ವಿರೋಧ ಪಕ್ಷಗಳು ನೀಡಿದ ಸೂಚನೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಂಗಾರು ಅಧಿವೇಶನದ ಉಳಿದ ಅವಧಿಗೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅಮಾನತು
ಈ ಸಮಯದಲ್ಲಿ ಗೋಯಲ್ ಅವರಿಗೆ ಅಮಾನತುಗೊಳಿಸುವ ಪ್ರಸ್ತಾಪವನ್ನು ಸಲ್ಲಿಸುವಂತೆ ತಿಳಿಸಿದರು. ಮುಂಗಾರು ಅಧಿವೇಶನ ಮುಗಿಯುವರೆಗೆ ಟಿಎಂಸಿ ಸಂಸದರನ್ನು ಅಧಿವೇಶನದಿಂದ ಅಮಾನತುಗೊಳಿಸುವ ಪ್ರಸ್ತಾಪವನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ. ಒ’ಬ್ರಿಯಾನ್ ಅವರು ತನ್ನ ಸ್ಥಳದಿಂದ ಎಂದು ಸಭಾಪತಿಗೆ ಅಗೌರವ ತೋರಿಸಿದ್ದಾರೆ ಎಂದು ಅಮಾನತು ಪ್ರಸ್ತಾಪವನ್ನು ಅಂಗೀಕರಿಸುವಂತೆ ಸಭಾಪತಿಗೆ ಕೇಳಿಕೊಂಡಿದ್ದಾರೆ. ಇದಕ್ಕೆ ಸಭಾಧ್ಯಕ್ಷ ಜಗದೀಪ್ ಧನಕರ್ ಒಪ್ಪಿಗೆ ಸೂಚಿಸಿ ಅಮಾನತು ಆದೇಶವನ್ನು ನೀಡಿದ್ದಾರೆ.
ಇದಕ್ಕೂ ಮುನ್ನ ಸಭಾಪತಿ ಜಗದೀಪ್ ಧನಕರ್ ಮತ್ತು ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ನಡುವೆ ಭಾರೀ ವಾಗ್ವಾದ ನಡೆದಿದೆ. ಈ ಕುರಿತು ಸದನದಲ್ಲಿ ಸಂಸದರು ಅಶಿಸ್ತಿನಿಂದ ವರ್ತಿಸಿದ್ದಾರೆ ಅವರನ್ನು ಅಮಾನತು ಮಾಡಬೇಕು ಎಂದು ಸಭಾನಾಯಕ ಪಿಯೂಷ್ ಗೋಯಲ್ ಹೇಳಿದರು, ಇದಕ್ಕೆ ಸಭ್ಯಾಧ್ಯಕ್ಷ ಜಗದೀಪ್ ಧನಕರ್ ಒಪ್ಪಿಗೆ ನೀಡಿ ಅಧಿವೇಶನ ಮುಗಿಯುವರೆಗೂ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶವನ್ನು ನೀಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:37 am, Tue, 8 August 23