ಜನನಿಬಿಡ ಪ್ರದೇಶದಲ್ಲಿ ಪತ್ನಿಯನ್ನು ಕೊಲೆಗೈದು ಪರಾರಿ, ಪತಿ ಕೊನೆಗೂ ಅರೆಸ್ಟ್​​

ಜನನಿಬಿಡ ಪ್ರದೇಶದಲ್ಲಿ ಪಿಸ್ತೂಲ್​ನಿಂದ ಗುಂಡಿಕ್ಕಿ ಪತ್ನಿಯನ್ನು ಕೊಂದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಗೋರಖ್​ಪುರದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಸ್ಥಳೀಯರು ರಕ್ತಸಿಕ್ತ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಗುಂಡು ಹಾರಿಸಿದ ನಂತರ ಆರೋಪಿ ವಿಶ್ವಕರ್ಮ ಚೌಹಾಣ್ ಸ್ಥಳದಿಂದ ಪರಾರಿಯಾಗಿದ್ದನು ಆದರೆ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಜನನಿಬಿಡ  ಪ್ರದೇಶದಲ್ಲಿ ಪತ್ನಿಯನ್ನು ಕೊಲೆಗೈದು ಪರಾರಿ, ಪತಿ ಕೊನೆಗೂ ಅರೆಸ್ಟ್​​
ಕೊಲೆಯಾದ ಮಹಿಳೆ

Updated on: Sep 04, 2025 | 11:01 AM

ಗೋರಖ್​ಪುರ, ಸೆಪ್ಟೆಂಬರ್ 04: ಗೋರಖ್​ಪುರದ ಫೋಟೊ ಸ್ಟುಡಿಯೋದ ಬಳಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ(Murder) ಮಾಡಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ತಿರುಗಿ ನೋಡದೆ ಅಲ್ಲಿಂದ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಮಹಿಳೆ ಫೋಟೊಗಾಗಿ ಸ್ಟುಡಿಯೋಗೆ ಹೋಗಿದ್ದಾಗ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಸ್ಥಳೀಯರು ರಕ್ತಸಿಕ್ತ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಗುಂಡು ಹಾರಿಸಿದ ನಂತರ ಆರೋಪಿ ವಿಶ್ವಕರ್ಮ ಚೌಹಾಣ್ ಸ್ಥಳದಿಂದ ಪರಾರಿಯಾಗಿದ್ದ ಆದರೆ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ವಿಶ್ವಕರ್ಮ ಮತ್ತು ಅವರ ಪತ್ನಿ ಮಮತಾ ಅಲಿಯಾಸ್ ಮುಕ್ತಿ ಚೌಹಾಣ್ (30) ಮದುವೆಯಾಗಿ ಹಲವು ವರ್ಷಗಳು ಕಳೆದಿತ್ತು ಕಳೆದ ಹತ್ತು ವರ್ಷಗಳಿಂದ ನಿತ್ಯವೂ ಒಂದಲ್ಲಾ ಒಂದು ವಿಚಾರಕ್ಕೆ ಜಗಳವಾಡುತ್ತಿದ್ದರು. ಆಸ್ತಿ ಸಮಸ್ಯೆಯಿಂದಾಗಿ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಪ್ರಿಯಕರನ ಜತೆ ಸೇರಿ ಪತಿಯ ಕೊಲೆ: ಬಳಿಕ ಸಂಭ್ರಮದಿಂದ ನಾಗರ ಪಂಚಮಿ ಆಚರಿಸಿದ ಪತ್ನಿ

ಮಮತಾ ಬ್ಯಾಂಕ್ ರಸ್ತೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು 13 ವರ್ಷದ ಮಗಳಿದ್ದಾಳೆ. ವಿಶ್ವಕರ್ಮ ಜೈಲ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಮಮತಾ ಖಜ್ನಿಗೆ ಸೇರಿದವಳು. ಬುಧವಾರ ಸಂಜೆ, ವಿಶ್ವಕರ್ಮ ಜೈಲ್ ರಸ್ತೆಯಲ್ಲಿರುವ ಫೋಟೋ ಸ್ಟುಡಿಯೋಗೆ ಬಂದಾಗ ಮಮತಾ ಅಲ್ಲಿಯೇ ಇದ್ದರು. ಅವರ ನಡುವೆ ವಾಗ್ವಾದ ನಡೆಯಿತು, ನಂತರ ವಿಶ್ವಕರ್ಮ ದೇಶೀಯ ಪಿಸ್ತೂಲನ್ನು ಹೊರತೆಗೆದು ಆಕೆಯ ಎದೆಗೆ ಗುಂಡು ಹಾರಿಸಿದ ಪರಿಣಾಮ ಮಮತಾ ಸ್ಥಳದಲ್ಲೇ ಕುಸಿದು ಬಿದ್ದರು.

ಅಲ್ಲೇ ಇದ್ದವರು ಆಕೆಯನ್ನು ವಿನಾಯಕ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ