Video: ಮದ್ಯಪಾನ ಮಾಡಿ ಶಾಲೆಗೆ ತೂರಾಡುತ್ತಾ ಬಂದು ಮೇಜಿನಡಿ ಮಲಗಿದ ಶಿಕ್ಷಕ
ಶಿಕ್ಷಕರೊಬ್ಬರು ಶಾಲೆಗೆ ಮದ್ಯಪಾನ ಮಾಡಿ ತೂರಾಡುತ್ತಾ ಬಂದು, ಮೇಜಿನಡಿ ನಿದ್ರೆಗೆ ಜಾರಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಜೈನೂರ್ ಮಂಡಲದ ಸುಕುತ್ಪಲ್ಲಿಯಲ್ಲಿರುವ ಈ ಘಟನೆ ನಡೆದಿದೆ.ಜೆ ವಿಲಾಸ್ ಮದ್ಯದ ಅಮಲಿನಲ್ಲಿ ಬಂದಿದ್ದಾರೆಂದು ವರದಿಯಾಗಿದೆ. ನಂತರ ಅವರು ತರಗತಿಯೊಳಗೆ ಮಲಗಿದ್ದಾರೆ.
ತೆಲಂಗಾಣ, ಆಗಸ್ಟ್ 04: ಮಕ್ಕಳಿಗೆ ಯಾವುದು ತಪ್ಪು, ಯಾವುದು ಸರಿ ಎಂದು ತಿಳಿಸಬೇಕಾದ ಶಿಕ್ಷಕರೊಬ್ಬರು ಶಾಲೆಗೆ ಮದ್ಯಪಾನ ಮಾಡಿ ತೂರಾಡುತ್ತಾ ಬಂದು, ಮೇಜಿನಡಿ ನಿದ್ರೆಗೆ ಜಾರಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಜೈನೂರ್ ಮಂಡಲದ ಸುಕುತ್ಪಲ್ಲಿಯಲ್ಲಿರುವ ಈ ಘಟನೆ ನಡೆದಿದೆ.ಜೆ ವಿಲಾಸ್ ಮದ್ಯದ ಅಮಲಿನಲ್ಲಿ ಬಂದಿದ್ದಾರೆಂದು ವರದಿಯಾಗಿದೆ. ನಂತರ ಅವರು ತರಗತಿಯೊಳಗೆ ಮಲಗಿದ್ದಾರೆ. ಪರಿಸ್ಥಿತಿಯನ್ನು ಕಂಡ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ.ಜಿಲ್ಲಾ ಬುಡಕಟ್ಟು ಕಲ್ಯಾಣ ಇಲಾಖೆ ಉಪನಿರ್ದೇಶಕಿ ರಮಾ ದೇವಿ ಅವರು ಕರ್ತವ್ಯ ನಿರ್ಲಕ್ಷ್ಯ ಮತ್ತು ಸೇವಾ ನಿಯಮಗಳ ಉಲ್ಲಂಘನೆಗಾಗಿ ವಿಲಾಸ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ದೃಢಪಡಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

