ಐಟಿ ದಾಳಿ: ಬರೋಬ್ಬರಿ ₹257 ಕೋಟಿ ಜಪ್ತಿ; ಉತ್ತರ ಪ್ರದೇಶದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಬಂಧನ

| Updated By: ganapathi bhat

Updated on: Dec 26, 2021 | 11:07 PM

ಉತ್ತರ ಪ್ರದೇಶದ ಕಾನ್ಪುರದ ಸುಗಂಧದ್ರವ್ಯ ಉದ್ಯಮಿ ಬಳಿಯಿಂದ 257 ಕೋಟಿ ರೂ. ಜಪ್ತಿ ಮಾಡಿರುವ ಅಧಿಕಾರಿಗಳು, ಸೋಮವಾರ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಐಟಿ ದಾಳಿ: ಬರೋಬ್ಬರಿ ₹257 ಕೋಟಿ ಜಪ್ತಿ; ಉತ್ತರ ಪ್ರದೇಶದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಬಂಧನ
ಐಟಿ ದಾಳಿ: ಬರೋಬ್ಬರಿ ₹257 ಕೋಟಿ ಜಪ್ತಿ
Follow us on

ದೆಹಲಿ: ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್‌ ಎಂಬಾತನನ್ನು ಬಂಧಿಸಲಾಗಿದೆ. ಜಿಎಸ್​ಟಿ ಇಂಟೆಲಿಜೆನ್ಸ್ ಅಧಿಕಾರಿಗಳಿಂದ ಉದ್ಯಮಿಯನ್ನು ಸೆರೆ ಹಿಡಿಯಲಾಗಿದೆ. ಉತ್ತರ ಪ್ರದೇಶದ ಕಾನ್ಪುರದ ಸುಗಂಧದ್ರವ್ಯ ಉದ್ಯಮಿ ಬಳಿಯಿಂದ 257 ಕೋಟಿ ರೂ. ಜಪ್ತಿ ಮಾಡಿರುವ ಅಧಿಕಾರಿಗಳು, ಸೋಮವಾರ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಕಾನ್ಪುರದ ಸುಗಂಧ ದ್ರವ್ಯ  ಉದ್ಯಮಿ ಪಿಯೂಷ್ ಜೈನ್ (Piyush Jain) ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಇದುವರೆಗೆ ₹ 180 ಕೋಟಿ ನಗದು ವಶಪಡಿಸಲಾಗಿದೆ ಎಂದು ಐಟಿ ಇಲಾಖೆ (IT department) ಮೂಲಗಳು ಶುಕ್ರವಾರ ಬೆಳಿಗ್ಗೆ ತಿಳಿಸಿತ್ತು. ದಾಳಿಯ ಛಾಯಾಚಿತ್ರಗಳು ಎರಡು ದೊಡ್ಡ ವಾರ್ಡ್‌ರೋಬ್‌ಗಳಲ್ಲಿ ರಾಶಿ ಹಣವನ್ನು ತುಂಬಿರುವುದನ್ನು ತೋರಿಸಿತ್ತು.

ಎಲ್ಲಾ ಕಟ್ಟುಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ಹಳದಿ ಟೇಪ್‌ನಿಂದ ಭದ್ರಪಡಿಸಲಾಗಿದೆ. ಪ್ರತಿ ಫೋಟೋದಲ್ಲಿ 30 ಕ್ಕೂ ಹೆಚ್ಚು ಕಟ್ಟುಗಳು ಗೋಚರಿಸುತ್ತವೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ವಶಪಡಿಸಿಕೊಂಡ ಒಟ್ಟು ಹಣವನ್ನು  ಇನ್ನೂ ಎಣಿಕೆ ಮಾಡಲಾಗುತ್ತಿದೆ. ಗುರುವಾರದಿಂದ ದಾಳಿ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿತ್ತು.

ಉತ್ತರ ಪ್ರದೇಶದ ಕಾನ್ಪುರ, ಮುಂಬೈ ಮತ್ತು ಗುಜರಾತ್‌ನಲ್ಲಿ ದಾಳಿ ನಡೆಯುತ್ತಿದೆ. ತೆರಿಗೆ ವಂಚನೆಗಾಗಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳು ಈ ದಾಳಿಗಳನ್ನು ಪ್ರಾರಂಭಿಸಿದ್ದಾರೆ. ವಿವರಗಳನ್ನು ಪತ್ತೆಹಚ್ಚಿದ ನಂತರ ಐಟಿ ಅಥವಾ ಆದಾಯ ತೆರಿಗೆ ಇಲಾಖೆ ದಾಳಿ ಮಾಡಲಾಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶದ ಸುಗಂಧ ದ್ರವ್ಯ ಉದ್ಯಮಿಯ ನಿವಾಸದ ಮೇಲೆ ಐಟಿ ದಾಳಿ, 180 ಕೋಟಿ, 19 ಕ್ಯಾಶ್​ ಕೌಂಟಿಂಗ್​ ಯಂತ್ರ​ ವಶಕ್ಕೆ

ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ ಸೇರಿದ ಹಲವು ಕಡೆ ಐಟಿ ದಾಳಿ

Published On - 11:05 pm, Sun, 26 December 21