ನಟಿ ನೋರಾ ಫತೇಹಿ ರೀತಿ ಕಾಣ್ಬೇಕೆಂದು ನಿತ್ಯ ವ್ಯಾಯಾಮ ಮಾಡಿಸಿ, ಊಟ ಕೊಡದೆ ಪತ್ನಿಗೆ ಪತಿಯಿಂದ ಚಿತ್ರಹಿಂಸೆ
ಪತ್ನಿಯು ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣಬೇಕೆಂದು ಪತಿಯೊಬ್ಬ ಆಕೆಗೆ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಭೀರ ದೂರು ದಾಖಲಿಸಿದ್ದಾರೆ.ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣುವಂತೆ ಮತ್ತು ಹಾಗೆ ಆಗುವಂತೆ ಪತಿ ತನ್ನನ್ನು ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕಾಗಿ, ಅವನು ಪ್ರತಿದಿನ ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡುವಂತೆ ಒತ್ತಾಯಿಸುತ್ತಿದ್ದ,

ಗಾಜಿಯಾಬಾದ್, ಆಗಸ್ಟ್ 21: ಪತ್ನಿಯು ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣಬೇಕೆಂದು ಪತಿಯೊಬ್ಬ ಆಕೆಗೆ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಭೀರ ದೂರು ದಾಖಲಿಸಿದ್ದಾರೆ.ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣುವಂತೆ ಮತ್ತು ಹಾಗೆ ಆಗುವಂತೆ ಪತಿ ತನ್ನನ್ನು ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದಕ್ಕಾಗಿ, ಅವನು ಪ್ರತಿದಿನ ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡುವಂತೆ ಒತ್ತಾಯಿಸುತ್ತಿದ್ದ, ಅವಳು ಹೆಚ್ಚು ವ್ಯಾಯಾಮ ಮಾಡದ ದಿನಗಳಲ್ಲಿ ಊಟ ಕೊಡದೆ ಹಸಿವಿನಿಂದ ಬಳಲುವಂತೆ ಮಾಡಿದ್ದ ಎಂದು ಹೇಳಿದ್ದಾಳೆ. ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ತನ್ನ ಪತಿ ಒಂದಲ್ಲಾ ಒಂದು ಕಾರಣಕ್ಕೆ ನಿತ್ಯ ತನ್ನನ್ನು ತೆಗಳುತ್ತಲೇ ಇರುತ್ತಿದ್ದರು ಎಂದಿದ್ದಾರೆ. ಬಾಲಿವುಡ್ ನಟಿ ನೋರಾ ಫತೇಹಿಯಂತಹ ಸುಂದರ ಮತ್ತು ಆಕರ್ಷಕ ಪತ್ನಿ ಸಿಗಬಹುದಿತ್ತು, ನೀನು ಚೂರೂ ಚೆನ್ನಾಗಿಲ್ಲ ಎಂದು ಹೀಯಾಳಿಸುತ್ತಿರುತ್ತಾರೆ.
ಪತಿ ಈ ರೀತಿ ಮಾತನಾಡುವುದಲ್ಲದೆ, ತನ್ನ ಪತ್ನಿಯ ದೇಹವು ಬಾಲಿವುಡ್ ನಟಯಂತೆ ಕಾಣಬೇಕೆಂದು ಪ್ರತಿದಿನ ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡಲು ಹೇಳುತ್ತಾರೆ. ದೈಹಿಕ ದೌರ್ಬಲ್ಯ, ಆಯಾಸ ಅಥವಾ ಆರೋಗ್ಯ ಕಾರಣಗಳಿಂದ ಮಹಿಳೆ ವ್ಯಾಯಾಮವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದಾಗ, ಹಲವು ದಿನಗಳವರೆಗೆ ಆಹಾರವನ್ನು ಕೂಡ ಕೊಡದೆ ಸತಾಯಿಸುತ್ತಿದ್ದ. ದೂರುದಾರ ಮಹಿಳೆ ಮಾರ್ಚ್ 2025 ರಲ್ಲಿ ಗಾಜಿಯಾಬಾದ್‌ನಲ್ಲಿ ಬಹಳ ಆಡಂಬರದಿಂದ ವಿವಾಹವಾಗಿದ್ದರು. ಮದುವೆಯಲ್ಲಿ ಸುಮಾರು 24 ಲಕ್ಷ ರೂ. ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ ಆಭರಣಗಳು, 10 ಲಕ್ಷ ರೂ. ನಗದು ಮತ್ತು ಇತರ ಉಡುಗೊರೆಗಳು ಸೇರಿವೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: Viral Video: ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಒಟ್ಟಾರೆಯಾಗಿ, ಮದುವೆಗೆ 76 ಲಕ್ಷ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಇದರ ಹೊರತಾಗಿಯೂ, ಮದುವೆಯಾದ ಕೂಡಲೇ, ಅತ್ತೆ-ಮಾವಂದಿರು ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಡಲು ಪ್ರಾರಂಭಿಸಿದರು. ಪತಿ ಮತ್ತು ಅವರ ಕುಟುಂಬವು ನಿರಂತರವಾಗಿ ಭೂಮಿ, ನಗದು ಮತ್ತು ದುಬಾರಿ ವಸ್ತುಗಳನ್ನು ಬೇಡಿಕೆ ಇಟ್ಟಿತ್ತು ಎಂದು ಮಹಿಳೆ ಹೇಳಿದ್ದಾರೆ. ಈ ಬೇಡಿಕೆಗಳನ್ನು ಪೂರೈಸಲು ನಿರಾಕರಿಸಿದಾಗ, ನಿಂದಿಸಲಾಯಿತು ಮತ್ತು ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಕೊಡಲಾಗಿದೆ.
ಮದುವೆಯಾದ ಸ್ವಲ್ಪ ಸಮಯದ ನಂತರ ಮಹಿಳೆ ಗರ್ಭಿಣಿಯಾಗಿದ್ದಳು, ಈ ಸಮಯದಲ್ಲಿಯೂ ಆಕೆಗೆ ಕಿರುಕುಳ ನೀಡಲಾಗುತ್ತಿತ್ತು. ಒಂದು ದಿನ ಏಕಾಏಕಿ ರಕ್ತಸ್ರಾವ ಉಂಟಾಗಿತ್ತು. ನಿರಂತರ ಮಾನಸಿಕ ಒತ್ತಡ, ದೈಹಿಕ ಹಿಂಸೆ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಆಕೆಗೆ ಗರ್ಭಪಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಗರ್ಭಪಾತ ಮತ್ತು ಕಿರುಕುಳದಿಂದ ಬೇಸತ್ತ ಮಹಿಳೆ ತನ್ನ ತಾಯಿಯ ಮನೆಗೆ ಹೋಗಿದ್ದಾಳೆ. ಅಲ್ಲಿ ಇರುವಾಗಲೂ, ಆಕೆಯ ಪತಿ, ಅತ್ತೆ ಮತ್ತು ಅತ್ತಿಗೆಗೆ ವೀಡಿಯೊ ಕರೆ ಮಾಡಿ ನಿಂದಿಸುತ್ತಿದ್ದ ಎಂದು ಹೇಳಿದ್ದಾಳೆ. ಇದೀಗ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
