AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶವೇ ನಾಚಿಕೆ ಪಡುವಂತಾಗಿದೆ; ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರ ಟೀಕೆ

ದೆಹಲಿಯಲ್ಲಿ ಆಯೋಜಿಸಲಾಗಿದ್ದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ 'ಶರ್ಟ್‌ಲೆಸ್' ಪ್ರತಿಭಟನೆ ನಡೆಸಿದ್ದ ಯುವ ಕಾಂಗ್ರೆಸ್ ಕಾರ್ಯರ್ತರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಎಲ್ಲಾ ಕೋನಗಳಿಂದಲೂ ತನಿಖೆ ಮುಂದುವರೆದಿದ್ದು, ಈ ಘಟನೆಯಲ್ಲಿ ಭಾಗಿಯಾಗಿರುವ ಇತರ ತಲೆಮರೆಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಕಾರಣರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶವೇ ನಾಚಿಕೆ ಪಡುವಂತಾಗಿದೆ; ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರ ಟೀಕೆ
Youth Congress Protest In Ai Summit
ಸುಷ್ಮಾ ಚಕ್ರೆ
|

Updated on: Feb 21, 2026 | 4:08 PM

Share

ನವದೆಹಲಿ, ಫೆಬ್ರವರಿ 21: ನವದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ (AI Impact Summit) ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಟಾಪ್‌ಲೆಸ್ ಪ್ರತಿಭಟನೆ ನಡೆಸಿದ ನಂತರ ರಾಜಕೀಯ ವಿವಾದ ಭುಗಿಲೆದ್ದಿದೆ. ಇಡೀ ಜಗತ್ತಿನ ನಾಯಕರು ಆಗಮಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಕೇಂದ್ರೀಕರಿಸಿದ ಅಂತಾರಾಷ್ಟ್ರೀಯ ಸಭೆಯಲ್ಲಿ ಕಾಂಗ್ರೆಸ್​ ನಾಯಕರ ಇಂತಹ ವರ್ತನೆ ಸೂಕ್ತವಲ್ಲ ಎಂದು ಹಲವಾರು ವಿಪಕ್ಷ ನಾಯಕರು ಟೀಕಿಸಿದ್ದಾರೆ.

ಭಾರತ ಮತ್ತು ವಿದೇಶಗಳಿಂದ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದ ಎಐ ಶೃಂಗಸಭೆಯು ಹೊಸ ತಂತ್ರಜ್ಞಾನಗಳಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿತ್ತು. ಆದರೆ, ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಿಂದಾಗಿ ದೇಶದ ಇಮೇಜ್ ಹಾಳಾಗಿದೆ. ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಲು ಅದು ಸೂಕ್ತವಾದ ವೇದಿಕೆಯಾಗಿರಲಿಲ್ಲ ಎಂದು ಹಲವು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ.

“ನಿನ್ನೆ ನಡೆದ AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ನಮ್ಮೆಲ್ಲರನ್ನೂ ತಲೆ ತಗ್ಗುವಂತೆ ಮಾಡಿತು. ನಮ್ಮ ರಾಜಕೀಯ ಎಲ್ಲಿಗೆ ಹೋಗುತ್ತಿದೆ! ಯಾರೂ ನಮ್ಮ ದೇಶವನ್ನು ಎಂದಿಗೂ ಕೀಳಾಗಿ ನೋಡಬಾರದು. ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ನಾವು ಯಾವಾಗಲೂ ಜಗತ್ತಿಗೆ ಒಗ್ಗಟ್ಟಿನ ಮುಖವನ್ನು ತೋರಿಸಬೇಕು” ಎಂದು ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ದೇಶವೇ ತಲೆತಗ್ಗಿಸುವ ಕೆಲಸ; ಎಐ ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಆಕ್ರೋಶ

ಈ ಘಟನೆಯನ್ನು ಅತ್ಯಂತ ಆಕ್ಷೇಪಾರ್ಹ ಎಂದು ಕರೆದ ಬಿಎಸ್​ಪಿ ನಾಯಕಿ ಮಾಯಾವತಿ, “ನವದೆಹಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಗೆ ಭಾರತ ಮತ್ತು ವಿದೇಶಗಳಿಂದ ಅನೇಕ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಇದು ಅಂತಾರಾಷ್ಟ್ರೀಯ ಗಮನ ಸೆಳೆದಿತ್ತು. ಕಾಂಗ್ರೆಸ್ ಯುವ ಕಾರ್ಯಕರ್ತರು ಈ ವೇಳೆ ಶೃಂಗಸಭೆಯ ಆವರಣದೊಳಗೆ ಅರೆನಗ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದು ಅತ್ಯಂತ ಅಸಭ್ಯ ಮತ್ತು ಖಂಡನೀಯ. ಈ ಶೃಂಗಸಭೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿಲ್ಲದಿದ್ದರೆ ವಿಷಯ ವಿಭಿನ್ನವಾಗಿರುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಶೃಂಗಸಭೆಯ ಸಮಯದಲ್ಲಿ ಇಂತಹ ನಡವಳಿಕೆಯು ಕಳವಳಕಾರಿ ವಿಷಯವಾಗಿದೆ. ಇದು ದೇಶದ ಘನತೆ ಮತ್ತು ಇಮೇಜ್‌ಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ.

“ಯುವ ಕಾಂಗ್ರೆಸ್ ಸದಸ್ಯರು AI ಇಂಪ್ಯಾಕ್ಟ್ ಶೃಂಗಸಭೆಯನ್ನು ರಾಜಕೀಯ ನಾಟಕಗಳಿಗೆ ಬಳಸಿಕೊಳ್ಳುತ್ತಿರುವುದು ಶೋಚನೀಯ. ಪ್ರತಿಭಟನೆಗಳಿಗೆ ಇಂತಹ ಜಾಗತಿಕ ವೇದಿಕೆಯನ್ನು ಬಳಸುವುದರಿಂದ ನಮ್ಮ ಮಹಾನ್ ರಾಷ್ಟ್ರ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿತವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯತ್ಯಾಸ ಸಹಜವಾದರೂ ಎಲ್ಲಿ ಮತ್ತು ಹೇಗೆ ಪ್ರತಿಭಟಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ರಾಜಕೀಯ ಭಿನ್ನಾಭಿಪ್ರಾಯಕ್ಕೆ ಒಂದು ಸಮಯ ಮತ್ತು ಸ್ಥಳ ಎಂಬುದು ಇರುತ್ತದೆ. ಅಂತಾರಾಷ್ಟ್ರೀಯ ಶೃಂಗಸಭೆಯನ್ನು ಇದಕ್ಕಾಗಿ ಬಳಸಿಕೊಳ್ಳುವುದು ಖಂಡಿತವಾಗಿಯೂ ಸರಿಯಲ್ಲ” ಎಂದು ಬಿಆರ್‌ಎಸ್ ಹಿರಿಯ ನಾಯಕ ಕೆ.ಟಿ. ರಾಮರಾವ್ ಹೇಳಿದ್ದಾರೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್​​ನಿಂದ ಅರೆಬೆತ್ತಲೆ ಪ್ರತಿಭಟನೆ; ಬಂಧಿತ 4 ಆರೋಪಿಗಳು 5 ದಿನ ಪೊಲೀಸ್ ವಶಕ್ಕೆ

“ನಿನ್ನೆ ನಡೆದ AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ನಿಂದ ಉಂಟಾದ ಅಡಚಣೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ. ಈ ಜಾಗತಿಕ ವೇದಿಕೆಯು AI ಸೂಪರ್ ಪವರ್ ಆಗಿ ಭಾರತದ ಬೆಳೆಯುತ್ತಿರುವ ನಾಯಕತ್ವವನ್ನು ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಭಾರತವು ಇದಕ್ಕಿಂತ ಉತ್ತಮವಾದುದಕ್ಕೆ ಅರ್ಹವಾಗಿದೆ. ನಾವು ಕ್ಷುಲ್ಲಕ ರಾಜಕೀಯವನ್ನು ಮೀರಿ ನಾವೀನ್ಯತೆ ಮತ್ತು ಶ್ರೇಷ್ಠತೆಯ ಮೂಲಕ ರಾಷ್ಟ್ರ ನಿರ್ಮಾಣದತ್ತ ಗಮನಹರಿಸೋಣ” ಎಂದು ಸಚಿವ ನಾರಾ ಲೋಕೇಶ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?