Watch ಸೊಸೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಯುಪಿ ಪೊಲೀಸ್ ಎತ್ತಂಗಡಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 20, 2022 | 4:19 PM

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ನಾವು ವಿಷಯ ತಿಳಿದುಕೊಂಡಿದ್ದೇವೆ. ಪ್ರಾಥಮಿಕ ತನಿಖೆಯ ನಂತರ ಇನ್ಸ್‌ಪೆಕ್ಟರ್ ಬಿರ್ಜಾ ರಾಮ್ ಸಂತ್ರಸ್ತ ಕುಟುಂಬದೊಂದಿಗೆ ಸೆಪ್ಟೆಂಬರ್ 17 ರಂದು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ...

Watch ಸೊಸೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಯುಪಿ ಪೊಲೀಸ್ ಎತ್ತಂಗಡಿ
ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
Follow us on

ಉತ್ತರ ಪ್ರದೇಶದಲ್ಲಿ (Uttar Pradesh)  ಪೊಲೀಸ್ ಅಧಿಕಾರೊಬ್ಬರು ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆದ ನಂತರ ಬಾಗ್‌ಪತ್‌ನ ಬಿನೌಲಿ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಇನ್ಸ್‌ಪೆಕ್ಟರ್ ಅನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆಯನ್ನು ಆರಂಭಿಸಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಇನ್ಸ್‌ಪೆಕ್ಟರ್ ಬಿರ್ಜಾ ರಾಮ್ ಬಿನೌಲಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ .ಸಂತ್ರಸ್ತ ಮತ್ತು ಅವರ ಕುಟುಂಬವು 4 ದಿನಗಳಿಂದ ಕಾಣೆಯಾಗಿರುವ ತಮ್ಮ ಸೊಸೆ ಬಗ್ಗೆ ದೂರು ನೀಡಲು ಬಿನೌಲಿ ಪೊಲೀಸ್ ಠಾಣೆಯ ಮುಖ್ಯಸ್ಥರನ್ನು ಸಂಪರ್ಕಿಸಿದ್ದರು.ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ನಾವು ವಿಷಯ ತಿಳಿದುಕೊಂಡಿದ್ದೇವೆ. ಪ್ರಾಥಮಿಕ ತನಿಖೆಯ ನಂತರ ಇನ್ಸ್‌ಪೆಕ್ಟರ್ ಬಿರ್ಜಾ ರಾಮ್ ಸಂತ್ರಸ್ತ ಕುಟುಂಬದೊಂದಿಗೆ ಸೆಪ್ಟೆಂಬರ್ 17 ರಂದು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್‌ಸ್ಪೆಕ್ಟರ್ ಬಿರ್ಜಾ ರಾಮ್ ಅವರನ್ನು ಬಿನೌಲಿ ಪೊಲೀಸ್ ಠಾಣೆಯಿಂದ ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದೆ. ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದುಬಾಗ್‌ಪತ್‌ ಎಸ್ಪಿ ನೀರಜ್ ಕುಮಾರ್ ಜದೌನ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.


ನಮ್ಮ ಸೊಸೆ 4 ದಿನಗಳಿಂದ ಕಾಣೆಯಾಗಿದ್ದಾರೆ. ಪ್ರಕರಣದ ಪ್ರಗತಿಯನ್ನು ವಿಚಾರಿಸಲು ನಾವು ಅಲ್ಲಿಗೆ ಹೋಗಿದ್ದೇವೆ. ನಮ್ಮ ಸೊಸೆಯ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಪದೇ ಪದೇ ಕೇಳುತ್ತಿರುವಾಗ, ಪೊಲೀಸ್ ಅಧಿಕಾರಿ ಎಲ್ಲರ ಮುಂದೆ ನನಗೆ ಕಪಾಳಮೋಕ್ಷ ಮಾಡಿದರು ಎಂದು ಸಂತ್ರಸ್ತ ಓಂವೀರ್ ಹೇಳಿದ್ದಾರೆ.

Published On - 3:14 pm, Tue, 20 September 22