ಕೇವಲ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡರೆ ನಗರಗಳ ಅಭಿವೃದ್ಧಿ ಅಸಾಧ್ಯ; ಬಿಜೆಪಿ ಮೇಯರ್​ಗಳಿಗೆ ಪ್ರಧಾನಿ ಮೋದಿ ಕಿವಿಮಾತು

ಚುನಾಯಿತ ಪ್ರತಿನಿಧಿಗಳು ಕೇವಲ ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಯೋಚಿಸಬಾರದು. ಚುನಾವಣಾ ಕೇಂದ್ರಿತ ವಿಧಾನದಿಂದ ನಿಮ್ಮ ನಗರವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಮೇಯರ್‌ಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇವಲ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡರೆ ನಗರಗಳ ಅಭಿವೃದ್ಧಿ ಅಸಾಧ್ಯ; ಬಿಜೆಪಿ ಮೇಯರ್​ಗಳಿಗೆ ಪ್ರಧಾನಿ ಮೋದಿ ಕಿವಿಮಾತು
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 20, 2022 | 1:55 PM

ಗಾಂಧಿನಗರ: ನಗರಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಬಿಜೆಪಿ ಮೇಯರ್‌ಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸೂಚಿಸಿದ್ದು, ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ನಗರಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲದ ಕಾರಣ ಚುನಾಯಿತ ಪ್ರತಿನಿಧಿಗಳು ಚುನಾವಣೆಯಲ್ಲಿ (Elections) ಗೆಲ್ಲುವ ದೃಷ್ಟಿಯಿಂದ ಮಾತ್ರ ಯೋಚಿಸಬಾರದು ಎಂದು ಹೇಳಿದ್ದಾರೆ.

“ಚುನಾಯಿತ ಪ್ರತಿನಿಧಿಗಳು ಕೇವಲ ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಯೋಚಿಸಬಾರದು. ಚುನಾವಣಾ ಕೇಂದ್ರಿತ ವಿಧಾನದಿಂದ ನಿಮ್ಮ ನಗರವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ” ಎಂದು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಬಿಜೆಪಿ ಮೇಯರ್‌ಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‌ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಜೆಪಿಯ ಮೇಯರ್‌ಗಳು ಮತ್ತು ಉಪಮೇಯರ್‌ಗಳ ಕೌನ್ಸಿಲ್ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ಇದನ್ನೂ ಓದಿ: Ujjain Mahakal Corridor: ಸಿದ್ಧವಾಗಿದೆ ಉಜ್ಜಯಿನಿ ಮಹಾಕಾಲ್ ಕಾರಿಡಾರ್​: ಅ 11ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಲೋಕಾರ್ಪಣೆ

2014ರಲ್ಲಿ ಭಾರತದ ವಿವಿಧ ನಗರಗಳಲ್ಲಿ ಮೆಟ್ರೋ ರೈಲು ಜಾಲವು 250 ಕಿಮೀಗಿಂತ ಕಡಿಮೆಯಿತ್ತು. ಅದು ಈಗ 750 ಕಿ.ಮೀ.ಗಿಂತ ಹೆಚ್ಚಿದೆ. ಆದರೆ ಇನ್ನೂ 1,000 ಕಿಮೀ ಕೆಲಸ ನಡೆಯುತ್ತಿದೆ. ನಗರಗಳಲ್ಲಿ ಹಳೆ ಕಟ್ಟಡಗಳ ಕುಸಿತ, ಕಟ್ಟಡಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಬಹಳ ಆತಂಕಕಾರಿಯಾಗಿದೆ. ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಇಂತಹ ಅವಘಡಗಳನ್ನು ತಪ್ಪಿಸಬಹುದು ಎಂದು ಮೋದಿ ಹೇಳಿದ್ದಾರೆ.

ಈ ವರ್ಷದ ಬಜೆಟ್‌ನಲ್ಲಿ ನಗರ ಯೋಜನೆಗೆ ಒತ್ತು ನೀಡಲಾಗಿದೆ. ನಗರ ಯೋಜನೆ ವಿಕೇಂದ್ರೀಕರಣವಾಗುವುದು ಅವಶ್ಯ. ರಾಜ್ಯಮಟ್ಟದಲ್ಲಿ ನಗರ ಯೋಜನೆಯಾಗಲಿ, ದೆಹಲಿಯಿಂದ ಎಲ್ಲವೂ ಆಗುವುದಿಲ್ಲ. ದೊಡ್ಡ ನಗರಗಳ ಸುತ್ತ ಅಭಿವೃದ್ಧಿ ಹೊಂದುತ್ತಿರುವ ಹಲವಾರು ಸ್ಯಾಟಲೈಟ್ ಟೌನ್​ಗಳು ​​ದೇಶದಲ್ಲಿವೆ. ಸ್ಯಾಟಲೈಟ್ ಟೌನ್​ಗಳನ್ನು ಆಯಕಟ್ಟಿನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕು. ಆಗ ಮಾತ್ರ ನಗರಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Cheetah: ಚೀತಾಗಳು ಮತ್ತೆ ಭಾರತದ ನೆಲಕ್ಕೆ ಬಂದಿವೆ, 1952ರಲ್ಲಿ ಕಳಚಿದ್ದ ಕೊಂಡಿ ಈಗ ಬೆಸೆದಿದೆ: ಮೋದಿ

ನಮ್ಮ ದೇಶದ ಜನರು ಬಿಜೆಪಿಯನ್ನು ನಂಬುತ್ತಾರೆ. ತಳಮಟ್ಟದಿಂದ ಕೆಲಸ ಮಾಡುವುದು ಎಲ್ಲಾ ಮೇಯರ್‌ಗಳ ಜವಾಬ್ದಾರಿಯಾಗಿದೆ. ಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಬೆಳವಣಿಗೆಯನ್ನು ಉತ್ತಮವಾಗಿ ಯೋಜಿಸಬೇಕು ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ