ಏರ್ ಇಂಡಿಯಾ ಹರಾಜು ಪ್ರಕ್ರಿಯೆಗೆ EOI ಸಲ್ಲಿಸಿದ ಟಾಟಾ, ಅಮೆರಿಕಾ ಮೂಲದ ಇಂಟರಪ್ಸ್ ಇನ್ಕ್

| Updated By: ganapathi bhat

Updated on: Apr 07, 2022 | 10:43 AM

ಖಾಸಗೀಕರಣಗೊಳ್ಳದಿದ್ದರೆ ಏರ್ ಇಂಡಿಯಾ ತನ್ನ ಹಾರಾಟ ನಿಲ್ಲಿಸಬೇಕಾಗುತ್ತದೆ ಎಂದು ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಹಿಂದೆ ಹೇಳಿಕೆ ನೀಡಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು.

ಏರ್ ಇಂಡಿಯಾ ಹರಾಜು ಪ್ರಕ್ರಿಯೆಗೆ EOI ಸಲ್ಲಿಸಿದ ಟಾಟಾ, ಅಮೆರಿಕಾ ಮೂಲದ ಇಂಟರಪ್ಸ್ ಇನ್ಕ್
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಸಾರ್ವಜನಿಕ ಸ್ವಾಮ್ಯದ ಪ್ರಸಿದ್ಧ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಖಾಸಗೀಕರಣದತ್ತ ಮುಖ ಮಾಡಿದೆ. ಇಂದು (ಡಿ.15) ನಡೆದ ಏರ್ ಇಂಡಿಯಾ ಹರಾಜು ಪ್ರಕ್ರಿಯೆ ಸಂಜೆಯ ವೇಳೆಗೆ ಮುಕ್ತಾಯಗೊಂಡಿದೆ. ಹರಾಜು ಪ್ರಕ್ರಿಯೆಯಲ್ಲಿ ಅಮೆರಿಕಾ ಮೂಲದ ಇಂಟರಪ್ಸ್ ಇನ್ಕ್ ಸಂಸ್ಥೆ ಏರ್ ಇಂಡಿಯಾ ಕೊಳ್ಳುವ ಮನ ಮಾಡಿದೆ. ದೇಶದ ವಿಮಾನಯಾನ ಸಂಸ್ಥೆಯನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಜೊತೆಗೆ, ಟಾಟಾ ಗ್ರೂಪ್ ಮತ್ತು ಏರ್ ಇಂಡಿಯಾದ 209 ನೌಕರರು ರಚಿಸಿಕೊಂಡಿರುವ ಸಂಸ್ಥೆ ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛೆ ವ್ಯಕ್ತಪಡಿಸಿವೆ.

ಇಂಟರಪ್ಸ್ ಇನ್ಕ್ ಮುಖ್ಯಸ್ಥ ಲಕ್ಷ್ಮೀ ಪ್ರಸಾದ್, ನಮಗೆ ಶುಭ ಹಾರೈಸಿ. ನಾವು ನಮ್ಮ EOI (Expression of Interest) ಸಲ್ಲಿಸುತ್ತಿದ್ದೇವೆ. ಇದು ಭಾರತ ದೇಶಕ್ಕೆ ನಮ್ಮ ಕೊಡುಗೆಯಾಗಲಿದೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು, ತಮ್ಮ ಆಸಕ್ತಿ (EOI) ಸೂಚಿಸಲು ಇಂದು ಕೊನೆಯ ದಿನವಾಗಿತ್ತು. ಆಸಕ್ತರು ಮುದ್ರಿತ ಪ್ರತಿ (Physical Copy) ಸಲ್ಲಿಸಲು ಡಿ.29 ಕೊನೆಯ ದಿನಾಂಕವಾಗಿದೆ. ಬಳಿಕ, ಮುಂದಿನ ಹಂತದ ಹರಾಜು ಪ್ರಕ್ರಿಯೆಗೆ ಆಯ್ಕೆಯಾದವರನ್ನು ಸರ್ಕಾರವು ಜನವರಿ 5, 2020ರ ಒಳಗಾಗಿ ಸೂಚಿಸಲಿದೆ.

ಖಾಸಗೀಕರಣಗೊಳ್ಳದಿದ್ದರೆ ಏರ್ ಇಂಡಿಯಾ ತನ್ನ ಹಾರಾಟ ನಿಲ್ಲಿಸಬೇಕಾಗುತ್ತದೆ ಎಂದು ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಹಿಂದೆ ಹೇಳಿಕೆ ನೀಡಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು.

Inside Story | ಸೆಂಟ್ರಲ್ ವಿಸ್ತಾ ನಂತರ ಟಾಟಾ ಪಾಲಾಗುವುದೇ ಏರ್ ಇಂಡಿಯಾ?

Published On - 9:41 pm, Mon, 14 December 20