ದೆಹಲಿ: ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಅಮೆರಿಕಾದ ಕೆಲ ಸಂಸದರು ದೂರು ನೀಡಿರುವ ಹಿನ್ನೆಲೆಯಲ್ಲಿ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಅಸ್ಟೀನ್ ಭಾರತಕ್ಕೆ ಆಗಮಿಸಿದ್ದಾರೆ. ಅವರಿಗೆ ಬಂದ ದೂರಿನ ಕುರಿತಾಗಿ ಭಾರತ ಸರ್ಕಾರದ ಜೊತೆಗೆ ಅಸ್ಟೀನ್ ಚರ್ಚೆ ನಡೆಸಲು ಯತ್ನಿಸಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಅದಕ್ಕೂ ಮುನ್ನ ರಾತ್ರಿ 7 ಗಂಟೆಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಭಾರತದಲ್ಲಿ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸಲಾಗುತ್ತಿರುವ ರೈತ ಪ್ರತಿಭಟನೆ ಸೇರಿದಂತೆ ಕೆಲ ಘಟನೆಗಳು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿವೆ ಎಂದು ಅಮೆರಿಕಾದ ಕೆಲ ಸಂಸದರು ಲಾಯ್ಡ್ ಜೆ ಅಸ್ಟೀನ್ ಅವರಿಗೆ ತಿಳಿಸಿದ್ದು, ಇದೇ ಹಿನ್ನೆಲೆಯಲ್ಲಿ ಭಾರತ ಸರ್ಕಾರದೊಂದಿಗೆ ಮಾತನಾಡಲು ಅವರು ಆಗಮಿಸಿದ್ದಾರೆ. ಸದ್ಯ ದೆಹಲಿಗೆ ಬಂದಿಳಿದಿರುವ ಲಾಯ್ಡ್ ಜೆ ಅಸ್ಟೀನ್ ಮೊದಲಿಗೆ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ನಂತರ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಿದ್ದಾರೆ.
ಇದನ್ನೂ ಓದಿ:
Explainer | ಸ್ವಾಭಿಮಾನದ ಬಾಳ್ವೆಯ ತಳಹದಿ ಮಾನವ ಹಕ್ಕುಗಳು
World Consumer Day: ವಿಶ್ವ ಗ್ರಾಹಕ ದಿನ; ಗ್ರಾಹಕರೇ ನಿಮ್ಮ ಹಕ್ಕುಗಳ ಬಗ್ಗೆ ನಿಮಗೆ ಅರಿವಿದೆಯೇ?