ಕೊವಿಡ್​ 19 2ನೇ ಅಲೆಗೆ ಸಿಲುಕಿರುವ ಭಾರತದೊಂದಿಗೆ ಒಗ್ಗಟ್ಟಿನ ಮಂತ್ರ ಪಠಿಸುತ್ತಿದೆ ಯುಎಸ್​; ಸಂದೇಶ ನೀಡಲಿರುವ ಕಮಲಾ ಹ್ಯಾರಿಸ್​

|

Updated on: May 06, 2021 | 1:28 PM

ಕೊವಿಡ್​ 19 ಎರಡನೇ ಅಲೆ ತೀವ್ರವಾಗಿರುವ ಭಾರತಕ್ಕೆ ಸಹಾಯ ಮಾಡಲು ಸಿದ್ಧ ಎಂದು ಈಗಾಗಲೇ ಅಮೆರಿಕ ತಿಳಿಸಿದೆ. ಆಕ್ಸಿಜನ್​ ಸೇರಿ ಕೆಲವು ವೈದ್ಯಕೀಯ ಉಪಕರಣಗಳನ್ನು ಅಮೆರಿಕಕ್ಕೆ ಕಳಿಸಿದೆ.

ಕೊವಿಡ್​ 19 2ನೇ ಅಲೆಗೆ ಸಿಲುಕಿರುವ ಭಾರತದೊಂದಿಗೆ ಒಗ್ಗಟ್ಟಿನ ಮಂತ್ರ ಪಠಿಸುತ್ತಿದೆ ಯುಎಸ್​; ಸಂದೇಶ ನೀಡಲಿರುವ ಕಮಲಾ ಹ್ಯಾರಿಸ್​
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
Follow us on

ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿರುವ ಭಾರತದೊಂದಿಗೆ ಒಗ್ಗಟ್ಟಾಗಿರಬೇಕು ಎಂಬ ಸಂದೇಶವನ್ನು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಅವರು ಶುಕ್ರವಾರ ( ಮೇ 7)ದಂದು ನೀಡಲಿದ್ದಾರೆ. ಹಾಗೇ, ಕೊರೊನಾ ವೈರಸ್ ಸಾಂಕ್ರಾಮಿಕದ ಅಂತ್ಯಕ್ಕೆ, ಜೀವಗಳ ರಕ್ಷಣೆಗಾಗಿ ಭಾರತದೊಂದಿಗೆ ಅಮೆರಿಕ ಸದಾ ಪಾಲುದಾರನಾಗಿ ಇರುತ್ತದೆ ಎಂಬ ಮಾತನ್ನು ಅವರು ಈ ವೇಳೆ ಆಡಲಿದ್ದಾರೆ.

ಭಾರತದಲ್ಲಿ ಯುಎಸ್​​ನಿಂದ ಕೊವಿಡ್​ ನಿಯಂತ್ರಣಾ ಕ್ರಮಗಳನ್ನು ಹೆಚ್ಚಿಸುವುದು ಎಂಬ ವಿಚಾರದ ಬಗ್ಗೆ ಆನ್​​ಲೈನ್ ಮೂಲಕ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಕಮಲಾ ಹ್ಯಾರಿಸ್ ಮಾತನಾಡಲಿದ್ದಾರೆ. ಈ ವೇಳೆ ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್​ನ್ನು ನಿಯಂತ್ರಿಸಲು ನಮ್ಮ ಸಹಕಾರ ಸಂಪೂರ್ಣವಾಗಿ ಇರಲಿದೆ, ನಿಮ್ಮೊಂದಿಗೆ ಒಗ್ಗಟ್ಟಾಗಿ ಇರುತ್ತೇವೆ ಎಂಬ ಸಂದೇಶವನ್ನು ಅವರು ನೀಡಲಿದ್ದಾರೆ ಎಂದು ಯುಎಸ್​ ರಾಜ್ಯ ಇಲಾಖೆಯ ದಕ್ಷಿಣ ಮತ್ತು ಕೇಂದ್ರ ಏಷ್ಯಾ ಬ್ಯೂರೊ ತಿಳಿಸಿದೆ. ಈ ಕಾರ್ಯಕ್ರಮ ಶುಕ್ರವಾರ ಸಂಜೆ ಹೊತ್ತಿಗೆ ನಡೆಯಲಿದೆ.

ಕೊವಿಡ್​ 19 ಎರಡನೇ ಅಲೆ ತೀವ್ರವಾಗಿರುವ ಭಾರತಕ್ಕೆ ಸಹಾಯ ಮಾಡಲು ಸಿದ್ಧ ಎಂದು ಈಗಾಗಲೇ ಅಮೆರಿಕ ತಿಳಿಸಿದೆ. ಆಕ್ಸಿಜನ್​ ಸೇರಿ ಕೆಲವು ವೈದ್ಯಕೀಯ ಉಪಕರಣಗಳನ್ನು ಅಮೆರಿಕಕ್ಕೆ ಕಳಿಸಿದೆ. ಕೊವಿಡ್ ಮೊದಲ ಅಲೆಯಲ್ಲಿ ಭಾರತ ಅಮೆರಿಕಕ್ಕೆ ಸಹಾಯ ಮಾಡಿತ್ತು. ಜೀವರಕ್ಷಕ ರೆಮ್​ಡೆಸಿವಿರ್​ನ್ನು ಕಳಿಸಿತ್ತು. ಅದನ್ನು ನೆನಪಿಸಿಕೊಂಡ ಜೋ ಬೈಡನ್ ಅವರೂ ಕೂಡ ತಾವು ಭಾರತದ ಪರ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಹೆಚ್ಚಾದ ಕೊರೊನಾ ಸೋಂಕಿತರು; ಎರಡನೇ ಅಲೆಯಲ್ಲಿ ಸೋಂಕಿತರ ಹೆಚ್ಚಳಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ

ಕೊರೊನಾ ವೈರಸ್​ನಿಂದ ಕಾಲಿವುಡ್​ನ ಜನಪ್ರಿಯ ಹಾಸ್ಯ ನಟ ಪಾಂಡು ನಿಧನ