ಗೂಗಲ್ ತೋರಿಸಿದ ಶಾರ್ಟ್ಕಟ್ ನಂಬಿ ಹೋಗಿ ಕಾರಿನ ಸಮೇತ ಕಾಲುವೆಗೆ ಹಾರಿದ ಚಾಲಕ
ಗೂಗಲ್ ತೋರಿಸಿದ ಶಾರ್ಟ್ಕಟ್ ಮಾರ್ಗವನ್ನು ನಂಬಿ ಹೋಗಿ ವ್ಯಕ್ತಿಯೊಬ್ಬ ಕಾರು ಸಮೇತ ಕಾಲುವೆಗೆ ಹಾರಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗೂಗಲ್ ತೋರಿಸಿದ ಶಾರ್ಟ್ಕಟ್ ನಂಬಿ ಕಾರು ತೆಗೆದುಕೊಂಡು ಹೋಗಿದ್ದ ಚಾಲಕ ಒಣ ಕಾಲುವೆಗೆ ಇಳಿಸಿದ್ದಾರೆ. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
ಗೂಗಲ್ ತೋರಿಸಿದ ಶಾರ್ಟ್ಕಟ್ ಮಾರ್ಗವನ್ನು ನಂಬಿ ಹೋಗಿ ವ್ಯಕ್ತಿಯೊಬ್ಬ ಕಾರು ಸಮೇತ ಕಾಲುವೆಗೆ ಹಾರಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗೂಗಲ್ ತೋರಿಸಿದ ಶಾರ್ಟ್ಕಟ್ ನಂಬಿ ಕಾರು ತೆಗೆದುಕೊಂಡು ಹೋಗಿದ್ದ ಚಾಲಕ ಒಣ ಕಾಲುವೆಗೆ ಇಳಿಸಿದ್ದಾರೆ. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
ಬರೇಲಿಯಿಂದ ಪಿಲಿಭಿತ್‌ಗೆ ಪ್ರಯಾಣಿಸುತ್ತಿದ್ದಾಗ ಕಾಲಾಪುರ ಗ್ರಾಮದ ಬಳಿ ಗೂಗಲ್ ಮ್ಯಾಪ್ ಹಾಕಿದ್ದಾರೆ ಆಗ ಅದು ಶಾರ್ಟ್ ಕಟ್ ಮಾರ್ಗವೊಂದನ್ನು ತೋರಿಸಿತ್ತು. ಅದರ ಮೂಲಕ ಹೋಗಿ ನೇರವಾಗಿ ಕಾಲುವೆಗೆ ಹಾರಿದ್ದಾರೆ. ಗ್ರಾಮಸ್ಥರು ಅವರನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿದಾಗ ಅವರನ್ನು ರಕ್ಷಿಸಲಾಯಿತು. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರ್ಯಾಣದ ನೋಂದಣಿ ಇರುವ ಕಾರನ್ನು ಟ್ರ್ಯಾಕ್ಟರ್ ಸಹಾಯದಿಂದ ಕಾಲುವೆಯಿಂದ ಹೊರತೆಗೆಯಲಾಯಿತು.
10 ದಿನಗಳಲ್ಲಿ ಗೂಗಲ್ಗೆ ಸಂಬಂಧಿಸಿದ ಎರಡನೇ ಅಪಘಾತವಿದು ಕಳೆದ ತಿಂಗಳು ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ಕಾರು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದರು.
ಮತ್ತಷ್ಟು ಓದಿ: ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆ ಮೇಲೆ ಹೋಗಿ ಜೀವ ಕಳೆದುಕೊಂಡ ದುರ್ದೈವಿಗಳು
ನವೆಂಬರ್ 24ರಂದು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್ಗೆ ಪ್ರಯಾಣಿಸುತ್ತಿದ್ದಾಗ ಕಾರು ಚಾಲಕ ಗೂಗಲ್ ನೋಡಿಕೊಂಡು ಬಂದಿದ್ದರು, ನಿರ್ಮಾಣ ಹಂತದಲ್ಲಿರುವ ಸೇತುವೆ ಏರಿದ್ದರು, ಅರ್ಧದಲ್ಲೇ ಸೇತುವೆ ಕಡಿತಗೊಂಡಿದ್ದ ಕಾರಣ ಫರೀದ್‌ಪುರದಲ್ಲಿ 50 ಅಡಿ ಕೆಳಗೆ ಹರಿಯುವ ರಾಮಗಂಗಾ ನದಿಗೆ ಕಾರು ಬಿದ್ದಿತ್ತು.
ಈ ವರ್ಷದ ಆರಮಭದಲ್ಲಿ ಭಾರಿ ಮಳೆಯಿಂದಾಗಿ ಸೇತುವೆ ಭಾಗಶಃ ಕುಸಿದಿತ್ತು, ಅದರ ಪುನರ್ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ಈ ಸೇತುವೆ ಅಸುರಕ್ಷಿತ ಎಂಬುದು ಅವರಿಗೆ ತಿಳಿದಿರಲಿಲ್ಲ.
ಇದು ನಿರ್ಮಾಣ ಹಂತದಲ್ಲಿರುವ ಸೇತುವೆ ಎಂದು ತೋರಿಸಲು ಯಾವುದೇ ಬ್ಯಾರಿಕೇಡ್ಗಳಾಗಲಿ ಅಥವಾ ಸೂಚನಾ ಫಲಕಗಳನ್ನಾಗಲಿ ಅಲ್ಲಿ ಅಳವಡಿಸಿರಲಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ