ಈ ಯುವಪೀಳಿಗೆ ಇಂದಿನ ನಾಯಕರು ಮತ್ತು ನಾಳಿನ ಸೃಷ್ಟಿಕರ್ತರಾಗಿದ್ದಾರೆ: ಯೋಗಿ ಆದಿತ್ಯನಾಥ್

|

Updated on: Aug 18, 2023 | 7:50 PM

ಜಿ-20 ಶೃಂಗಸಭೆಗೆ ಸಂಬಂಧಿಸಿದಂತೆ ಹಲವು ಶೃಂಗಸಭೆಗಳನ್ನು ಆಯೋಜಿಸಲು ಯುಪಿಗೆ ಅವಕಾಶ ನೀಡಿದ ಪ್ರಧಾನಿ ಮತ್ತು ವಾರಣಾಸಿ ಸಂಸದ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ. ವೈ-20 ರ ಈ ಶೃಂಗಸಭೆಯು ವಿಶ್ವದ ಯುವಜನರಿಗೆ ಹೊಸ ಸ್ಫೂರ್ತಿಯ ಸಂದೇಶವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಈ ಯುವಪೀಳಿಗೆ ಇಂದಿನ ನಾಯಕರು ಮತ್ತು ನಾಳಿನ ಸೃಷ್ಟಿಕರ್ತರಾಗಿದ್ದಾರೆ: ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ
Follow us on

ವಾರಣಾಸಿ ಆಗಸ್ಟ್ 18: ವಾರಣಾಸಿಯ (Varanasi) ರುದ್ರಾಕ್ಷ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜಿ-20 ಅಡಿಯಲ್ಲಿ ಆಯೋಜಿಸಲಾದ ಯುವ-20 ಶೃಂಗಸಭೆಯ ( Youth 20 Summit) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath), ಯುವಕರ ಪ್ರತಿಭೆಯನ್ನು ಪ್ರಶ್ನಿಸುವ ಪ್ರಯತ್ನ ನಡೆದರೆ ನನಗೆ ಬೇಸರವಾಗುತ್ತದೆ. ಯಾಕೆಂದರೆ ಯುವಕರೇ ತಮ್ಮ ಪ್ರತಿಭೆಯಿಂದ ಸಮಾಜಕ್ಕೆ ಹೊಸ ದಿಶೆಯನ್ನು ನೀಡಿದ್ದಾರೆ. ಅದು ಎಲ್ಲ ಕಾಲದಲ್ಲೂ ಆಗಿತ್ತು ಎಂದಿದ್ದಾರೆ.

ಭಾರತ ಭೂಮಿಯಿಂದ ರಾಕ್ಷಸ ಪ್ರವೃತ್ತಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಶ್ರೀರಾಮನು ಸಿದ್ಧವಾದಾಗ ಆತ ಯುವಕನಾಗಿದ್ದ. ಮಥುರಾವನ್ನು ಕಂಸ ಮತ್ತು ರಾಕ್ಷಸರ ದಬ್ಬಾಳಿಕೆಯಿಂದ ಮುಕ್ತಗೊಳಿಸಿದ ‘ಪರಿತ್ರಾಣಾಯ ಸಾಧುನಾಂ, ವಿನಾಶಾಯ ಚ ದುಸ್ಕೃತಂ’ ಎಂದು ಹೇಳಿದಾಗ ಕೃಷ್ಣ ಕೂಡ ಯುವಕನಾಗಿದ್ದ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.


ಜಿ-20 ಶೃಂಗಸಭೆಗೆ ಸಂಬಂಧಿಸಿದಂತೆ ಹಲವು ಶೃಂಗಸಭೆಗಳನ್ನು ಆಯೋಜಿಸಲು ಯುಪಿಗೆ ಅವಕಾಶ ನೀಡಿದ ಪ್ರಧಾನಿ ಮತ್ತು ವಾರಣಾಸಿ ಸಂಸದ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ. ವೈ-20 ರ ಈ ಶೃಂಗಸಭೆಯು ವಿಶ್ವದ ಯುವಜನರಿಗೆ ಹೊಸ ಸ್ಫೂರ್ತಿಯ ಸಂದೇಶವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯ ಸಂಗಮವು ನಮ್ಮನ್ನು ಅನನ್ಯವಾಗಿಸುತ್ತದೆ.ನಮ್ಮ ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಸದಾ ಹೊಸ ಮತ್ತು ಹಳೆಯ ಸಂಸ್ಕೃತಿಯ ಬಲವಾದ ತಳಹದಿಯ ಮೇಲೆ ಪೂರ್ಣಗೊಳಿಸಿದ್ದು, ಈ ಜಿ-20 ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಯೋಜಿಸುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದರು.

ಯುವಜನರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಧಾನಿ ಮೋದಿ ವೇದಿಕೆಯನ್ನು ನೀಡಿದ್ದಾರೆ. ಸ್ಟಾರ್ಟ್‌ಅಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ, ಅಟಲ್ ಇನ್ನೋವೇಶನ್ ಮಿಷನ್ ಸೇರಿದಂತೆ ಹಲವು ಕಾರ್ಯಕ್ರಮಗಳು ಭಾರತದ ಯುವಜನರಿಗೆ ಕ್ಷೇತ್ರದಲ್ಲಿ ಬೆಳೆಯಲು ಹೊಸ ಅವಕಾಶಗಳನ್ನು ಒದಗಿಸುತ್ತವೆ.

ಇದನ್ನೂ ಓದಿ: RBI: ಸಾಲ ಕಟ್ಟಲು ವಿಳಂಬಿಸುವ ಗ್ರಾಹಕರಿಗೆ ದುಬಾರಿ ದಂಡ ವಿಧಿಸುವಂತಿಲ್ಲ: ಬ್ಯಾಂಕುಗಳಿಗೆ ಆರ್​ಬಿಐ ಅಪ್ಪಣೆ

ನೀವು ಬಿಡುಗಡೆ ಮಾಡುತ್ತಿರುವ ಶ್ವೇತಪತ್ರಿಕೆಯು ವಿಶ್ವದ ಯುವಕರನ್ನು ಸಕಾರಾತ್ಮಕ ಶಕ್ತಿಯಿಂದ ಬಳಸಿಕೊಳ್ಳುತ್ತದೆ ಮತ್ತು ವಿಶ್ವ ಮಾನವೀಯತೆಯೊಂದಿಗೆ ಅವರ ಪ್ರತಿಭೆಯನ್ನು ಬಳಸುತ್ತದೆ. ಯುವಕರು ಇಂದಿನ ನಾಯಕ ಮತ್ತು ನಾಳಿನ ಸೃಷ್ಟಿಕರ್ತರಾಗಿದ್ದಾರೆ. ಆ ಯುವ ಶಕ್ತಿಯ ಪ್ರತಿಭೆಯವನ್ನು ಗೌರವಿಸುವ ಮೂಲಕ ನಾವು ಅವರನ್ನು ಮುಂದೆ ಸಾಗಲು ಪ್ರೇರೇಪಿಸಲು ಸಾಧ್ಯವಾಗುತ್ತದೆ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Fri, 18 August 23