Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: ಸಾಲ ಕಟ್ಟಲು ವಿಳಂಬಿಸುವ ಗ್ರಾಹಕರಿಗೆ ದುಬಾರಿ ದಂಡ ವಿಧಿಸುವಂತಿಲ್ಲ: ಬ್ಯಾಂಕುಗಳಿಗೆ ಆರ್​ಬಿಐ ಅಪ್ಪಣೆ

No High Penal Interest: ಬ್ಯಾಂಕ್ ಗ್ರಾಹಕರಿಗೆ ನಿರಾಳ ತರುವ ಸುದ್ದಿ ಬಂದಿದ್ದು, ಇಎಂಐ ಅನ್ನು ತಡವಾಗಿ ಕಟ್ಟಿದವರಿಗೆ ಹೆಚ್ಚಿನ ಮೊತ್ತದ ದಂಡ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಆರ್​ಬಿಐ ಅಧಿಸೂಚನೆ ಹೊರಡಿಸಿದೆ. ಮುಂದಿನ ವರ್ಷದಿಂದ ಇದು ಜಾರಿಗೆ ಬರಲಿದೆ.

RBI: ಸಾಲ ಕಟ್ಟಲು ವಿಳಂಬಿಸುವ ಗ್ರಾಹಕರಿಗೆ ದುಬಾರಿ ದಂಡ ವಿಧಿಸುವಂತಿಲ್ಲ: ಬ್ಯಾಂಕುಗಳಿಗೆ ಆರ್​ಬಿಐ ಅಪ್ಪಣೆ
ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2023 | 4:46 PM

ನವದೆಹಲಿ, ಆಗಸ್ಟ್ 18: ಬ್ಯಾಂಕುಗಳಲ್ಲಿ ಪಡೆದ ಸಾಲಕ್ಕೆ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟದೇ ಹೋದಾಗ ಪೀನಲ್ ಇಂಟರೆಸ್ಟ್ (Penal Interest) ಹೇರುತ್ತವೆ. ಇದು ಸಾಮಾನ್ಯವಾಗಿ ಹೆಚ್ಚಿನ ಮೊತ್ತವಾಗಿರುತ್ತದೆ. ವರ್ಷಕ್ಕೆ ಶೇ 15ರಿಂದ ಶೇ. 36ರವರೆಗೂ ಬಡ್ಡಿ ವಿಧಿಸಲಾಗುತ್ತದೆ. ಬ್ಯಾಂಕುಗಳಿಗೆ ಇದೇ ಒಂದು ಆದಾಯ ಮೂಲವೂ ಆಗಿಹೋಗಿದೆ. ಈಗ ಇಷ್ಟು ದುಬಾರಿ ದಂಡ ವಿಧಿಸದಿರುವಂತೆ ಆರ್​ಬಿಐ ನಿಯಮ ರೂಪಿಸಿದೆ. ಆರ್​ಬಿಐ ನಿಯಮಾವಳಿ ಪ್ರಕಾರ ಬ್ಯಾಂಕುಗಳ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC) ಪೀನಲ್ ಇಂಟರೆಸ್ಟ್ ವಿಧಿಸುವ ಬದಲು ನ್ಯಾಯಯುತ ಎನಿಸುವ ದಂಡ ಶುಲ್ಕ ಮಾತ್ರ ಗ್ರಾಹಕರಿಂದ ಪಡೆಯಬೇಕು ಎಂದು ಹೇಳಲಾಗಿದೆ. 2024ರ ಜನವರಿ 1ರಿಂದ ಈ ನಿಯಮ ಜಾರಿಗೆ ಬರುತ್ತದೆ.

ದಂಡ ಹೇರಿಕೆಯು ಶಿಸ್ತು ಮೂಡಿಸುವಂತಿರಬೇಕೇ ಹೊರತು ಆದಾಯ ಮೂಲವೆನಿಸಬಾರದು

‘ನ್ಯಾಯಯುತ ಸಾಲ ನೀಡಿಕೆ ಮತ್ತು ದಂಡ’ ಅಡಿಯಲ್ಲಿ ಆರ್​ಬಿಐ ಅಧಿಸೂಚನೆ ಹೊರಡಿಸಿದ್ದು, ‘ಶಿಸ್ತು ಮೂಡಿಸುವ ಉದ್ದೇಶದಿಂದ ಪೀನಲ್ ಇಂಟರೆಸ್ಟ್ ಅಥವಾ ದಂಡ ಶುಲ್ಕಗಳನ್ನು ವಿಧಿಸಲಾಗುತ್ತದೆ. ಇದನ್ನು ಆದಾಯಕ್ಕೆ ಬಳಸಬಾರದು. ಸಾಲ ನೀಡುವಾಗ ನಿಗದಿಯಾಗಿದ್ದ ಬಡ್ಡಿದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ಪಡೆಯಬಾರದು. ಆದರೆ, ಕೆಲವು ಬ್ಯಾಂಕಿಂಗ್ ಸಂಸ್ಥೆಗಳು ಹೆಚ್ಚಿನ ಮೊತ್ತದ ಪೀನಲ್ ಇಂಟರೆಸ್ಟ್ ವಿಧಿಸಿ ಗ್ರಾಹಕರಿಗೆ ತೊಂದರೆ ನೀಡಿರುವುದು ಕಂಡುಬಂದಿದೆ’ ಎಂದು ತಿಳಿಸಿದೆ.

ಇದನ್ನೂ ಓದಿ: SBI ಅಮೃತ್ ಕಳಶ್ ಎಫ್​ಡಿ ಸ್ಕೀಮ್; ಡೆಡ್​ಲೈನ್ ಮತ್ತೆ ವಿಸ್ತರಣೆ, ಡಿ. 31ರವರೆಗೂ ಅವಕಾಶ

ಆದರೆ, ಇದು ಕ್ರೆಡಿಟ್ ಕಾರ್ಡ್​ಗಳ ಸಾಲಕ್ಕೆ ಅನ್ವಯಿಸುವುದಿಲ್ಲ. ಅಂದರೆ ಕ್ರೆಡಿಟ್ ಕಾರ್ಡ್​ನಲ್ಲಿ ಬಿಲ್ ಕಟ್ಟದೇ ಉಳಿದಿರುವ ಬಾಕಿ ಮೊತ್ತಕ್ಕೆ ಶೇ. 36ರಷ್ಟು ವಾರ್ಷಿಕ ಬಡ್ಡಿ ವಿಧಿಸುವುದು ಮುಂದುವರಿಯುತ್ತದೆ. ಆರ್​ಬಿಐ ಅಧಿಸೂಚನೆಯಲ್ಲಿ ಒಳಗೊಂಡಿರುವುದು ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು ನೀಡುವ ಸಾಲದ ವಿಚಾರವಾಗಿ. ಹಾಗೆಯೇ, ಕ್ರೆಡಿಟ್ ಕಾರ್ಡ್ ಮಾತ್ರವಲ್ಲದೇ ಟ್ರೇಡ್ ಕ್ರೆಡಿಟ್​ಗಳಿಗೂ ಇದು ಅನ್ವಯ ಆಗುವುದಿಲ್ಲ.

ವಿಳಂಬ ಪಾವತಿಗೆ ವಿಧಿಸುವ ಅಧಿಕ ದರದ ದಂಡ ಶುಲ್ಕವು ಬ್ಯಾಂಕುಗಳ ಬಡ್ಡಿ ಆದಾಯಕ್ಕೆ ಸೇರಿಕೊಳ್ಳುತ್ತದೆ. ಬ್ಯಾಂಕುಗಳ ಆದಾಯ ಹೆಚ್ಚಳಕ್ಕೂ ಕಾರಣವಾಗುತ್ತದೆ. ಸಾಮಾನ್ಯವಾಗಿ ನಿಗದಿಗ ಬಡ್ಡಿದರಕ್ಕಿಂತ ಶೇ. 2ರಷ್ಟು ಹೆಚ್ಚುವರಿ ಬಡ್ಡಿಯನ್ನು ಕೆಲ ಬ್ಯಾಂಕುಗಳು ದಂಡವಾಗಿ ವಸೂಲಿ ಮಾಡುತ್ತವೆ.

ಇದನ್ನೂ ಓದಿ: ಗಂಡನ ಸ್ವಂತ ಸಂಪಾದನೆಯ ಆಸ್ತಿ ಮೇಲೆ ಹೆಂಡತಿಗೆ ಎಷ್ಟು ಹಕ್ಕು? ಈ ಕಾನೂನುಗಳು ಗೊತ್ತಿರಲಿ

ಈಗ ಆರ್​ಬಿಐ ಮಾಡಿರುವ ಹೊಸ ನಿಯಮಗಳಿಂದ ಬ್ಯಾಂಕುಗಳ ಆದಾಯವನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು. ಆದರೆ, ಗ್ರಾಹಕರ ಮೇಲಿನ ಒತ್ತಡ ಕಡಿಮೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ