ಚಾಮರಾಜಪೇಟೆಯ ಬೋರ್ ವೆಲ್ ನೀರು ಗಿಡಮರಗಳಿಗೆ ಹಾಕಲೂ ಯೋಗ್ಯವಲ್ಲ: ಸ್ಥಳೀಯ ನಿವಾಸಿಗಳು
ಚಾಮರಾಜಪೇಟೆಯಲ್ಲಿ ಒಂದು ಟ್ಯಾಂಕರ್ ನೀರಿನ ಬೆಲೆ ರೂ.1000 ಅಂತೆ, ನರಸಿಂಹ ಹೆಸರಿನ ನಿವಾಸಿಯವರ ಮನೆಗೆ ಪ್ರತಿದಿನ ಒಂದು ಟ್ಯಾಂಕರ್ ನೀರು ಬೇಕಾಗುತ್ತದೆ, ಅಂದರೆ ತಿಂಗಳಿಗೆ ಅವರು ₹ 30,000 ಕೇವಲ ನೀರಿಗಾಗಿ ಖರ್ಚು ಮಾಡಬೇಕು. ಬೋರ್ ವೇಲ್ ನೀರನ್ನು ಸ್ನಾನಕ್ಕೇನಾದರೂ ಬಳಸಿದರೆ, ಚರ್ಮರೋಗಗಳು ಅಡರುತ್ತವೆ. ನೀರಲ್ಲಿ ಕೈ ತೊಳೆದರೂ ಬೇರೆ ನೀರಲ್ಲಿ ಮತ್ತೊಮ್ಮೆ ತೊಳೆಯಲೇಬೇಕು ಎಂದು ಮತ್ತೊಬ್ಬ ನಿವಾಸಿ ಹೇಳುತ್ತಾರೆ.
ಬೆಂಗಳೂರು, ಏಪ್ರಿಲ್ 7: ಮನೆಮುಂದಿನ ಅಥವಾ ಹಿತ್ತಲಿನ ಗಿಡಮರಗಳಿಗೆ ಹಾಕಲು ಯೋಗ್ಯವಲ್ಲದ ನೀರು ಮಾನವ ಬಳಕೆಗೆ ಯೋಗ್ಯವೇ ಎಂದು ನಗರದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿ ನಿವಾಸಿಗಳು (residents of Raghavendra colony) ಸ್ಥಳೀಯ ಸಂಸ್ಥೆಗಳನ್ನು ಮತ್ತು ಸರ್ಕಾರದ ಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇಲ್ಲಿನ ಬೋರ್ವೆಲ್ ಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಪೆಟ್ರೋಲ್ ಮಿಶ್ರಿತ ನೀರು ಬರುತ್ತಿದೆ ಮತ್ತು ಅದು ಯಾವುದೇ ರೀತಿಯ ಬಳಕೆಗೆ ಯೋಗ್ಯವಲ್ಲ ಎಂದು ಸ್ಥಳೀಯರು ತಮ್ಮ ಅಸಮಾಧಾನ ಮತ್ತು ಅಕ್ರೋಶವನ್ನು ಹೊರಹಾಕುತ್ತಿದ್ದಾರೆ. ಪರಿಸರ ಮಂಡಳಿ, ಜಲಮಂಡಳಿ ಮತ್ತು ಬಿಬಿಎಂಪಿಯವರು ಟಿವಿ ಚ್ಯಾನೆಲ್ಗಳಲ್ಲಿ ವರದಿ ಬಿತ್ತರವಾದಾಗ ಒಂದೆರಡು ಬಾರಿ ಬಂದು ಹೋಗುತ್ತಾರಂತೆ, ಅಷ್ಟೇ.
ಇದನ್ನೂ ಓದಿ: ಕೊಳವೆಬಾವಿ ಯೋಜನೆಯಲ್ಲಿ ಭಾರೀ ಅಕ್ರಮ, ಬಿಬಿಎಂಪಿ ಮುಖ್ಯ ಇಂಜಿನೀಯರ್ ಕಚೇರಿ ಮೇಲೆ ಈಡಿ ದಾಳಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ