ಗಂಡನ ಸ್ವಂತ ಸಂಪಾದನೆಯ ಆಸ್ತಿ ಮೇಲೆ ಹೆಂಡತಿಗೆ ಎಷ್ಟು ಹಕ್ಕು? ಈ ಕಾನೂನುಗಳು ಗೊತ್ತಿರಲಿ
Rights Of Woman Over Husband's Property: ಗಂಡನ ಪಿತ್ರಾರ್ಜಿತ ಆಸ್ತಿ ಮೇಲೆ ಹೆಂಡತಿಗೆ ಎಷ್ಟು ಹಕ್ಕು? ಗಂಡನ ಸ್ವಂತ ಸಂಪಾದನೆಯ ಆಸ್ತಿ ಮೇಲೆ ಹೆಂಡತಿಗೆ ಎಷ್ಟು ಹಕ್ಕು? ಗಂಡನಿಗೆ ವಿಚ್ಛೇದನ ಕೊಟ್ಟರೆ ಆಸ್ತಿ ಮೇಲೆ ಎಷ್ಟು ಹಕ್ಕು? ಈ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ...
ಭಾರತದಲ್ಲಿ ಮಹಿಳೆಯರ ಆಸ್ತಿ ಹಕ್ಕು (Women’s Property Right) ವಿಚಾರದ ಬಗ್ಗೆ ಬಹಳ ಮಂದಿಗೆ ತಪ್ಪು ಕಲ್ಪನೆಗಳಿವೆ. ಅಪ್ಪನ ಆಸ್ತಿಯಲ್ಲಿ ಗಂಡುಮಕ್ಕಳಂತೆ ಹೆಣ್ಮಕ್ಕಳಿಗೂ ಸಮಾನ ಹಕ್ಕನ್ನು ಒದಗಿಸುತ್ತದೆ ನಮ್ಮ ಕಾನೂನು. ಆದರೆ ನಮ್ಮಲ್ಲಿ ಈಗಲೂ ಕೂಡ ಬಹಳ ಮನೆಗಳಿಗೆ ಹೆಣ್ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡುವುದಿಲ್ಲ. ಹಾಗೆಯೇ, ಪತಿ ಆಸ್ತಿ ಹಕ್ಕು ಎಲ್ಲವೂ ಪತ್ನಿಗೇ ಸೇರಿದ್ದು ಎಂದು ಬಹಳ ಮಂದಿ ಭಾವಿಸಿದ್ದಾರೆ. ಇದು ಪೂರ್ತಿ ಸತ್ಯವಲ್ಲ. ಪತಿಯ ಆಸ್ತಿಯಲ್ಲಿ ಹಕ್ಕು ಇರುವುದು ಪತ್ನಿಯೊಬ್ಬರದ್ದು ಮಾತ್ರವಲ್ಲ. ಈ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ…
ಪತಿ ಸ್ವಂತವಾಗಿ ಆಸ್ತಿ ಸಂಪಾದನೆ ಮಾಡಿದ್ದರೆ ಅದು ಎಲ್ಲವೂ ಪತ್ನಿಗೆ ಹೋಗಬೇಕೆಂದು ಇಲ್ಲ. ಆ ಆಸ್ತಿಗೆ ಆ ವ್ಯಕ್ತಿಯ ತಾಯಿ, ಪತ್ನಿ ಮತ್ತು ಮಕ್ಕಳಿಗೆ ಹಕ್ಕು ಇರುತ್ತದೆ. ಪತಿ ಯಾರಿಗಾದರೂ ವಿಲ್ ಮಾಡಿದ್ದರೆ ಮಾತ್ರವೇ ನಾಮಿನಿಗೆ ಆ ಆಸ್ತಿ ಸಿಗುತ್ತದೆ. ವಿಲ್ ಮಾಡದೇ ಆತ ಸತ್ತಿದ್ದರೆ ಅವರ ಆಸ್ತಿಯು ಪತ್ನಿ, ತಾಯಿ ಮತ್ತು ಮಕ್ಕಳಲ್ಲಿ ಸಮಾನವಾಗಿ ಹಂಚಿಕೆ ಆಗುತ್ತದೆ.
ಇದನ್ನೂ ಓದಿ: ಬೆಂಗಳೂರಿಗನ ಖಾತೆಯಿಂದ 90 ಲಕ್ಷ ಹಣ ಕಾಣದಂತೆ ಮಾಯ; ಖದೀಮರು 2 ವರ್ಷದಲ್ಲಿ5,000 ಬಾರಿ ಕನ್ನ ಹಾಕಿದರೂ ಗೊತ್ತಾಗದೇಹೋಯಿತಾ?
ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಹಕ್ಕು ಎಷ್ಟು?
ಗಂಡನ ಸ್ವಂತ ಸಂಪಾದನೆಯ ಆಸ್ತಿಯಲ್ಲಿ ಪತ್ನಿ, ತಾಯಿ ಮತ್ತು ಮಕ್ಕಳಿಗೆ ಹಕ್ಕು ಇರುತ್ತದೆ. ಆದರೆ, ಗಂಡನಿಗೆ ಪಿತ್ರಾರ್ಜಿತವಾಗಿ ಆಸ್ತಿ ಸಿಕ್ಕಿದ್ದರೆ ಆ ಆಸ್ತಿಯಲ್ಲಿ ಪತ್ನಿಗೆ ಹಕ್ಕು ಇರುವುದಿಲ್ಲ. ಆಕೆಗೆ ಮಗು ಆಗಿದ್ದರೆ ಆ ಆಸ್ತಿಗೆ ಮಗು ಪೂರ್ಣ ವಾರಸುದಾರವಾಗಿರುತ್ತದೆ. ಅಂದರೆ, ಗಂಡನ ಆಸ್ತಿಯ ಪೂರ್ಣ ಹಕ್ಕು ಮಗುವಿಗೆ ಹೋಗುತ್ತದೆ. ಪತಿ ನಿಧನ ಹೊಂದಿದಾಗಲೂ ಹೆಂಡತಿಗೆ ಆತನ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಗಂಡನ ಮನೆಯಲ್ಲಿ ಉಳಿದುಕೊಳ್ಳಲು ಮತ್ತು ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ.
ಇದನ್ನೂ ಓದಿ: RBI UDGAM Portal: ಬ್ಯಾಂಕುಗಳಲ್ಲಿ ನಿಮ್ಮ ಅನ್ಕ್ಲೈಮ್ಡ್ ಡೆಪಾಸಿಟ್ ಹುಡುಕಲು ಆರ್ಬಿಐನಿಂದ ಉಡ್ಗಮ್; ಈ ಪೋರ್ಟಲ್ ಬಳಕೆ ಹೇಗೆ?
ಒಂದು ವೇಳೆ ಆಕೆ ಮರುಮದುವೆ ಆದರೆ ಜೀವನಾಂಶ ಸಿಗುವುದಿಲ್ಲ. ಇನ್ನು, ಗಂಡನಿಗೆ ಆಕೆ ಡಿವೋರ್ಸ್ ಕೊಟ್ಟಿದ್ದರೆ ಆತನ ಆಸ್ತಿಯಲ್ಲಿ ಹಕ್ಕು ಹೊಂದಿರುವುದಿಲ್ಲ. ಡಿವೋರ್ಸ್ ಆದ ಗಂಡನಿಂದ ಮಗುವಾಗಿದ್ದರೆ ಅದಕ್ಕೆ ಅಪ್ಪನ ಆಸ್ತಿಯಲ್ಲಿ ಹಕ್ಕು ಇರುತ್ತದೆ. ಪತ್ನಿ ಜೀವನಾಂಶ ಮಾತ್ರ ಪಡೆಯಬಹುದು ಅಷ್ಟೇ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Fri, 18 August 23