RBI UDGAM Portal: ಬ್ಯಾಂಕುಗಳಲ್ಲಿ ನಿಮ್ಮ ಅನ್​ಕ್ಲೈಮ್ಡ್ ಡೆಪಾಸಿಟ್ ಹುಡುಕಲು ಆರ್​ಬಿಐನಿಂದ ಉಡ್ಗಮ್; ಈ ಪೋರ್ಟಲ್ ಬಳಕೆ ಹೇಗೆ?

RBI Portal For Unclaimed Deposits: ಬ್ಯಾಂಕುಗಳಲ್ಲಿ ಠೇವಣಿ ಇರಿಸಿ ಕ್ಲೈಮ್ ಆಗದೆ ಉಳಿದಿರುವ ಹಣ ಬಹಳಷ್ಟು ಇದೆ. ಈ ಹಣವನ್ನು ಅದರ ಮಾಲೀಕರಿಗೆ ಒಪ್ಪಿಸಲು ಪ್ರಯತ್ನಿಸುತ್ತಿರುವ ಆರ್​ಬಿಐ, ಇದೀಗ ಕೇಂದ್ರೀಕೃತವಾದ ಉಡ್ಗಮ್ ಎಂಬ ಪೋರ್ಟಲ್ ಅನ್ನು ಆರಂಭಿಸಿದೆ.

RBI UDGAM Portal: ಬ್ಯಾಂಕುಗಳಲ್ಲಿ ನಿಮ್ಮ ಅನ್​ಕ್ಲೈಮ್ಡ್ ಡೆಪಾಸಿಟ್ ಹುಡುಕಲು ಆರ್​ಬಿಐನಿಂದ ಉಡ್ಗಮ್; ಈ ಪೋರ್ಟಲ್ ಬಳಕೆ ಹೇಗೆ?
ಆರ್​​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 18, 2023 | 11:46 AM

ಮುಂಬೈ, ಆಗಸ್ಟ್ 18: ಬ್ಯಾಂಕ್ ಗ್ರಾಹಕರು ತಾವು ಕ್ಲೇಮ್ ಮಾಡದೇ ಉಳಿಸಿರುವ ಠೇವಣಿಗಳನ್ನು ಹುಡುಕಲು ಸಹಾಯವಾಗಲೆಂದು ಭಾರತೀಯ ರಿಸರ್ವ್ ಬ್ಯಾಂಕ್ ಉಡ್ಗಮ್ (UDGAM- Unclaimed Deposit Gateway to Access InforMation) ಎಂಬ ವೆಬ್​ಸೈಟ್ ಅನ್ನು ಆರಂಭಿಸಿದೆ. ವಿವಿಧ ಬ್ಯಾಂಕುಗಳಲ್ಲಿರುವ ತಮ್ಮ ಹಣವನ್ನು ಒಂದೇ ಸ್ಥಳದಲ್ಲಿ ಕಾಣಲು ಗ್ರಾಹಕರಿಗೆ ಸಾಧ್ಯವಾಗಲಿದೆ. ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಇರುವ ಬಹಳ ದೊಡ್ಡ ಮೊತ್ತವೇ ಇದೆ ಎಂದು ಆರ್​ಬಿಐ ಇತ್ತೀಚೆಗೆ ಹೇಳಿತ್ತು. ಈ ಹಣವನ್ನು ಗ್ರಾಹಕರು ಅಥವಾ ಅವರ ವಾರಸುದಾರರಿಗೆ ಮರಳಿಸಲು ಕ್ರಮ ಜಾರಿಗೊಳಿಸಿದೆ. ಇದರ ಭಾಗವಾಗಿ ಆರ್​ಬಿಐ ಈಗ ಉಡ್ಗಮ್ ವೆಬ್​ಸೈಟ್ ಅನ್ನು ಚಾಲನೆಗೊಳಿಸಿದೆ.

ಬಹಳಷ್ಟು ಗ್ರಾಹಕರ ನಿಶ್ಚಿತ ಠೇವಣಿಗಳು ಮೆಚ್ಯೂರ್ ಆದರೂ ಕ್ಲೈಮ್ ಆಗದೇ ಹಾಗೇ ಉಳಿದಿರುವುದು ತಿಳಿದುಬಂದಿದೆ. ಸರಿಯಾದ ಸಮಯಕ್ಕೆ ಹಣವನ್ನು ಗ್ರಾಹಕರು ಹಿಂಪಡೆಯಲು ಆರ್​ಬಿಐ ಆಗಾಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುತ್ತದೆ. ಈಗ ಇಂತಹ ಡೆಪಾಸಿಟ್​ಗಳನ್ನು ಸಾರ್ವಜನಿಕರು ಗುರುತಿಸಲು ಸಾಧ್ಯವಾಗುವಂತೆ ಕೇಂದ್ರೀಕೃತ ವ್ಯವಸ್ಥೆ ಇರುವ ಉಡ್ಗಮ್ ಪೋರ್ಟಲ್ ಅನ್ನು ರೂಪಿಸಲಾಗಿದೆ.

ಈ ಪೋರ್ಟಲ್​ನಲ್ಲಿ ಸದ್ಯ ಏಳು ಬ್ಯಾಂಕುಗಳು ಕೈಜೋಡಿಸಿವೆ. ಸದ್ಯ ಈ ಬ್ಯಾಂಕುಗಳ ಗ್ರಾಹಕರು ತಮ್ಮ ಅನ್​ಕ್ಲೈಮ್ಡ್ ಡೆಪಾಸಿಟ್​​ಗಳನ್ನು ಹುಡುಕಬಹುದು. ಈ ಪೋರ್ಟಲ್​ನಲ್ಲಿನ ಮುಂಬರುವ ದಿನಗಳಲ್ಲಿ ಬೇರೆ ಬ್ಯಾಂಕುಗಳನ್ನೂ ಸೇರಿಸಲಾಗುತ್ತದೆ. ಸದ್ಯ ಈ ಏಳು ಬ್ಯಾಂಕುಗಳ ಪಟ್ಟಿ ಇಲ್ಲಿದೆ:

ಇದನ್ನೂ ಓದಿ: 3D Printed PO: ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಗೆ ಎಷ್ಟು ವೆಚ್ಚ? ಇದನ್ನು ನಿರ್ಮಾಣ ಹೇಗೆ? ಇಲ್ಲಿದೆ ಡೀಟೇಲ್ಸ್

  1. ಎಸ್​ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)
  2. ಪಿಎನ್​ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್)
  3. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  4. ಧನಲಕ್ಷ್ಮಿ ಬ್ಯಾಂಕ್
  5. ಸೌತ್ ಇಂಡಿಯನ್ ಬ್ಯಾಂಕ್
  6. ಡಿಬಿಎಸ್ ಬ್ಯಾಂಕ್
  7. ಸಿಟಿ ಬ್ಯಾಂಕ್

ಇದನ್ನೂ ಓದಿ: ಕೆಫೆ ಕಾಫಿ ಡೇಗೆ ಲಾಭ; ದಿವಾಳಿಯಾಗಿ ಹೋಗುತ್ತೆಂದವರು ಮೂಗು ಮೇಲೆ ಬೆರಳಿಡುವಂತೆ ಮಾಡಿದ ಕಂಪನಿ

ಉಡ್ಗಮ್ ಪೋರ್ಟಲ್ ಬಳಕೆ ಹೇಗೆ?

ಆರ್​​ಬಿಐ ನಿನ್ನೆ UDGAM ಪೋರ್ಟಲ್ ಅನ್ನು ಅನಾವರಣಗೊಳಿಸಿದೆ. ಅದರ ಯುಆರ್​ಎಲ್ ಇಂತಿದೆ: udgam.rbi.org.in/

ಆರ್​ಬಿಐ ಡೊಮೈನ್​ನಲ್ಲಿ ಬರುವ ಈ ಪೋರ್ಟಲ್​ನಲ್ಲಿ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು. ಅದಾದ ಬಳಿಕ ಲಾಗಿನ್ ಆಗಬೇಕು. ಲಾಗಿನ್ ಆದಾಗ ನೀವು ಡೆಪಾಸಿಟ್​ಗಳನ್ನು ಹುಡುಕಲು ಅವಕಾಶ ಇರುತ್ತದೆ.

ಪ್ಯಾನ್ ನಂಬರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ನಂಬರ್, ಪಾಸ್​ಪೋರ್ಟ್ ನಂಬರ್ ಮತ್ತು ಡೇಟ್ ಆಫ್ ಬರ್ತ್ ಇರುತ್ತದೆ. ಇದರಲ್ಲಿ ಕನಿಷ್ಠ ಒಂದರ ವಿವರ ತುಂಬಿ ಸರ್ಚ್ ಮಾಡಬೇಕು. ಜೊತೆಯಲ್ಲಿ ಬ್ಯಾಂಕುಗಳ ಪಟ್ಟಿಯಲ್ಲಿ ಯಾವ ಬ್ಯಾಂಕುಗಳೆಂದು ಆಯ್ಕೆ ಮಾಡಿಕೊಂಡು ಸರ್ಚ್ ಕೊಡಬೇಕು. ಕ್ಲೈಮ್ ಆಗದೇ ಇರುವ ಡೆಪಾಸಿಟ್ ಯಾವುದಾದರೂ ಇದ್ದರೆ ಅದು ಕೆಳಗೆ ಪಟ್ಟಿಯಲ್ಲಿ ಕಾಣಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:44 am, Fri, 18 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ