ಕೆಫೆ ಕಾಫಿ ಡೇಗೆ ಲಾಭ; ದಿವಾಳಿಯಾಗಿ ಹೋಗುತ್ತೆಂದವರು ಮೂಗು ಮೇಲೆ ಬೆರಳಿಡುವಂತೆ ಮಾಡಿದ ಕಂಪನಿ

Cafe Coffe Day Profit: ದಿವಂಗತ ಸಿದ್ಧಾರ್ಥ್ ಹೆಗ್ಡೆ ಸಂಸ್ಥಾಪಿಸಿದ ಕೆಫೆ ಕಾಫಿ ಡೇ ಸಂಸ್ಥೆ 2023ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ 24.57 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಮುಚ್ಚಿಹೋಗುತ್ತಿದ್ದ ಕಂಪನಿಯನ್ನು ಲಾಭದ ಹಳಿಗೆ ತಂದ ಶ್ರೇಯಸ್ಸು ಮಾಳವಿಕಾ ಹೆಗ್ಡೆಗೆ ಸಲ್ಲಬೇಕು.

ಕೆಫೆ ಕಾಫಿ ಡೇಗೆ ಲಾಭ; ದಿವಾಳಿಯಾಗಿ ಹೋಗುತ್ತೆಂದವರು ಮೂಗು ಮೇಲೆ ಬೆರಳಿಡುವಂತೆ ಮಾಡಿದ ಕಂಪನಿ
ಕೆಫೆ ಕಾಫಿ ಡೇ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 17, 2023 | 7:36 PM

ನವದೆಹಲಿ, ಆಗಸ್ಟ್ 17: ಪ್ರಖ್ಯಾತ ಕೆಫೆ ಕಾಫಿ ಡೇ ಸಂಸ್ಥೆ ಕೊನೆಗೂ ಲಾಭದ ಹಳಿಗೆ ಬಂದಿದೆ. ಕಾಫಿ ಡೇ ಗ್ಲೋಬಲ್ ಲಿಮಿಟೆಡ್ (CDGL) 2023-24ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ 24.57 ಕೋಟಿ ರೂ ನಿವ್ವಳ ಲಾಭ (Net Profit) ಗಳಿಸಿದೆ. ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ಸಂಸ್ಥೆಯ ಆಪರೇಶನ್ಸ್​ಗಳಿಂದ ಬಂದ ಆದಾಯ 223.20 ಕೋಟಿ ರೂ ಇದೆ. ಕಳೆದ ವರ್ಷದಲ್ಲಿ ಇದೇ ಅವಧಿಗೆ ಹೋಲಿಸಿದರೆ ಕಾಫಿ ಡೇ ಸಾಕಷ್ಟು ಚೇತರಿಸಿಕೊಂಡಿದೆ. ಕಳೆದ ವರ್ಷ ಸಮಸ್ಥೆ 11.73 ಕೋಟಿ ರೂ ನಷ್ಟ ಅನುಭವಿಸಿತ್ತು. ಅದರ ಆದಾಯ 189.63 ರೂ ಇತ್ತು.

ಎಸ್ ಎಂ ಕೃಷ್ಣ ಅಳಿಯ ದಿವಂಗತ ಸಿದ್ಧಾರ್ಥ್ ಹೆಗ್ಡೆ ಸ್ಥಾಪಿಸಿದ್ದ ಕೆಫೆ ಕಾಫಿ ಡೇ ಸಂಸ್ಥೆ ಗಮನಾರ್ಹ ರೀತಿಯಲ್ಲಿ ಚೇತರಿಸಿಕೊಂಡಿರುವುದು ವಿಶೇಷ. ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗಡೆ 2019, ಜುಲೈ 29ರಂದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಾಗ ಕೆಫೆ ಕಾಫಿ ಡೇ ಮುಂದೆ ಕರಾಳ ಭವಿಷ್ಯ ಮಡುಗಟ್ಟಿತ್ತು. ಸಿದ್ಧಾರ್ಥ್ ಪತ್ನಿ ಮಾಳವಿಕಾ ಗಟ್ಟಿಯಾಗಿ ನಿಂತು ಎಲ್ಲವನ್ನೂ ನಿಭಾಯಿಸಿ, ಕಾಫಿ ಡೇ ಸಂಸ್ಥೆಯನ್ನು ಜೀವಂತವಾಗಿ ಇರುವಂತೆ ಮಾಡಿದ್ದಾರೆ.

ಕೆಫೆ ಕಾಫಿ ಡೇ ಭಾರತದಾದ್ಯಂತ ಕಾಫಿ ಚೈನ್​ಗಳನ್ನು ಹೊಂದಿದೆ. ಕಳೆದ ವರ್ಷ 493 ಕಾಫಿ ಡೇ ಶಾಪ್​ಗಳಿದ್ದವು. ಅದರ ಸಂಖ್ಯೆ 467ಕ್ಕೆ ಇಳಿದಿದೆ. ವೆಂಡಿಂಗ್ ಮೆಷಿನ್​ಗಳ ಸಂಖ್ಯೆ 46,603ರಿಂದ 50,870ಕ್ಕೆ ಏರಿದೆ. ಹಾಗೆಯೇ, ದಿನದ ಸರಾಸರಿ ಮಾರಾಟ ಪ್ರಮಾಣ (ಎಎಸ್​ಪಿಡಿ) ಕೂಡ 19,537 ರೂನಿಂದ 20,824 ರೂಗೆ ಏರಿದೆ.

ಇದನ್ನೂ ಓದಿ: ಇನ್ಮುಂದೆ ಬಲ್ಕ್ ಸಿಮ್​ಗಳು ಸಿಗಲ್ಲ; ಸಿಮ್ ಡೀಲರ್​ಗಳಿಗೆ ಪೊಲೀಸ್ ವೆರಿಫಿಕೇಶನ್ ಕಡ್ಡಾಯ; 52,000 ಸಿಮ್ ಕನೆಕ್ಷನ್ಸ್ ರದ್ದು

ಕಾಫಿ ಡೇ ಷೇರುಬೆಲೆ ಏರಿಕೆ

ಕೆಫೆ ಕಾಫಿ ಡೇಯನ್ನು ನಿರ್ವಹಿಸುವ ಕಾಫಿ ಡೇ ಗ್ಲೋಬಲ್ ಲಿ ಸಂಸ್ಥೆ ಷೇರುಪೇಟೆಯಲ್ಲಿ ಅನ್​ಲಿಸ್ಟೆಡ್ ಆಗಿದೆ. ಆದರೆ, ಎನ್​ಎಸ್​ಇ ಮತ್ತು ಬಿಎಸ್​ಇಯ ಓವರ್ ದಿ ಕೌಂಟರ್​ನಲ್ಲಿ (ಒಟಿಸಿ) ಅದರ ಷೇರುಗಳ ವಹಿವಾಟು ಆಗುತ್ತದೆ. ಆಗಸ್ಟ್ 16ರಂದು ಕಾಫಿ ಡೇ ಲಾಭದ ವರದಿ ಬಂದ ಬಳಿಕ ಇಂದು ಅದರ ಷೇರುಗಳು ಶೇ. 23ರಷ್ಟು ಅಧಿಕ ಬೆಲೆ ಪಡೆದಿವೆ. 39 ರೂನಿಂದ ಬೆಲೆಯಿಂದ ಆರಂಭವಾದ ಕಾಫಿ ಡೇ ಷೇರು ಒಂದು ಸಂದರ್ಭದಲ್ಲಿ 48 ರೂವರೆಗೂ ಹೋಗಿ ಅಂತಿಮವಾಗಿ 45.65 ರೂಗೆ ನಿಂತಿದೆ.

ಮಾಳವಿಕಾ ಹೆಗಡೆ ಧೈರ್ಯ ಶ್ಲಾಘನೀಯ

ಸಿದ್ಧಾರ್ಥ್ ಹೆಗ್ಡೆ ನಿಧನ ಹೊಂದಿದ್ದಾಗ ಕೆಫೆ ಕಾಫಿ ಡೇ ಸಂಸ್ಥೆಯ ಸಂಕಷ್ಟ ಬೆಳಕಿಗೆ ಬಂದಿತ್ತು. 7,000 ಕೋಟಿ ರೂನಷ್ಟು ಸಾಲದ ಸುಳಿಯಲ್ಲಿ ಕಾಫಿ ಡೇ ಸಿಲುಕಿತ್ತು. ಈ ಸಂದರ್ಭದಲ್ಲಿ ಅವರ ಪತ್ನಿ ಮಾಳವಿಕಾ ಹೆಗ್ಡೆ ಸಂಸ್ಥೆಯ ಚುಕ್ಕಾಣಿ ಹಿಡಿದು ಚಾಣಾಕ್ಷ್ಯತನದಿಂದ ಹಣಕಾಸು ಪರಿಸ್ಥಿತಿ ನಿಭಾಯಿಸಿದ್ದಾರೆ. ಬ್ಲ್ಯಾಕ್​ಸ್ಟೋನ್, ಶ್ರೀರಾಮ್ ಕ್ರೆಡಿಟ್ ಕಂಪನಿಗಳ ಸಹಾಯದಿಂದ ಕೆಫೆ ಕಾಫಿ ಡೇ ಸಂಸ್ಥೆಯ ಬಹುತೇಕ ಸಾಲವನ್ನು ಕಡಿಮೆ ಮಾಡಿದ್ಧಾರೆ. 7,000 ಕೋಟಿ ರೂ ಇದ್ದ ಸಾಲ ಇದೀಗ 500 ಕೋಟಿಗೂ ಕಡಿಮೆಗೆ ಬಂದಿದೆ. ಈಗ ಕಾಫಿ ಡೇ ಲಾಭ ಕೂಡ ಮಾಡಿರುವುದು ಇದೆಲ್ಲದಕ್ಕೂ ಮಾಳವಿಕಾ ಹೆಗಡೆಗೆ ಶಹಬ್ಬಾಸ್ ಹೇಳಬಹುದು.

ಇದನ್ನೂ ಓದಿ: Fake IRCTC App: ಐಆರ್​ಸಿಟಿಸಿ ಆ್ಯಪ್ ಗುರಿ ಮಾಡಿದ ಸೈಬರ್ ಕೇಡಿಗಳು; ಜನಸಾಮಾನ್ಯರ ಬ್ಯಾಂಕ್ ಡೀಟೇಲ್ಸ್ ಲಪಟಾಯಿಸಲು ಹುನ್ನಾರ

ಇದೀಗ ಕೆಫೆ ಕಾಫಿ ಡೇ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಇನ್ಸಾಲ್ವೆನ್ಸಿ ಕ್ರಮಕ್ಕೆ ಆದೇಶ ಹೊರಡಿಸಿದೆ. ಇಂಡಸ್​ಇಂಡ್ ಬ್ಯಾಂಕ್ ಮನವಿ ಮೇರೆಗೆ ಈ ಕ್ರಮಕ್ಕೆ ಮುಂದಾಗಲಾಗಿದೆ. ಆದರೆ, ಮಾಳವಿಕಾ ಹೆಗ್ಡೆ ಈ ಆದೇಶಕ್ಕೆ ತಡೆ ತಂದಿದ್ದು, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ ಮೊರೆ ಹೋಗಿದ್ದಾರೆ. ಮುಂದಿನ ತಿಂಗಳು ಇದು ಈ ಪ್ರಕರಣದಲ್ಲಿ ತೀರ್ಪು ಕೊಡುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ