Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI ಅಮೃತ್ ಕಳಶ್ ಎಫ್​ಡಿ ಸ್ಕೀಮ್; ಡೆಡ್​ಲೈನ್ ಮತ್ತೆ ವಿಸ್ತರಣೆ, ಡಿ. 31ರವರೆಗೂ ಅವಕಾಶ

Amrit Kalash FD Scheme Deadline: ಎಸ್​ಬಿಐನ ವಿಶೇಷ ನಿಶ್ಚಿತ ಠೇವಣಿ ಯೋಜನೆಯಾದ ಅಮೃತ್ ಕಳಶ್ ಸ್ಕೀಮ್​ನ ಡೆಡ್​ಲೈನ್ ಅನ್ನು 2023 ಡಿಸೆಂಬರ್ 31ಕ್ಕೆ ವಿಸ್ತರಿಸಲಾಗಿದೆ. ಈ ಬ್ಯಾಂಕ್ ಆಫರ್ ಮಾಡುವ ವಿವಿಧ ಎಫ್​ಡಿಗಳ ಪೈಕಿ ಇದು ಗರಿಷ್ಠ ಬಡ್ಡಿ ಒದಗಿಸುತ್ತದೆ.

SBI ಅಮೃತ್ ಕಳಶ್ ಎಫ್​ಡಿ ಸ್ಕೀಮ್; ಡೆಡ್​ಲೈನ್ ಮತ್ತೆ ವಿಸ್ತರಣೆ, ಡಿ. 31ರವರೆಗೂ ಅವಕಾಶ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2023 | 1:07 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫರ್ ಮಾಡಿರುವ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಆದ ಅಮೃತ್ ಕಳಶ್ ಯೋಜನೆಯ (SBI Amrit Kalash FD Scheme) ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಎಸ್​ಬಿಐ ಅಮೃತ್ ಕಳಶ್ ಎಫ್​ಡಿ ಸ್ಕೀಮ್ ಅನ್ನು ಪಡೆಯಲು ಡಿಸೆಂಬರ್ 31ರವರೆಗೂ ಅವಕಾಶ ಕೊಡಲಾಗಿದೆ. ಎಸ್​ಬಿಐನ ಎಫ್​ಡಿ ಪ್ಲಾನ್​ಗಳಲ್ಲಿ ಗರಿಷ್ಠ ಬಡ್ಡಿ ಕೊಡುತ್ತದೆ ಅಮೃತ್ ಕಳಶ್ ಸ್ಕೀಮ್. 2023ರ ಫೆಬ್ರುವರಿ 15ರಂದು ಆರಂಭವಾದ ಎಸ್​ಬಿಐನ ಈ ವಿಶೇಷ ನಿಶ್ಚಿತ ಠೇವಣಿ ಯೋಜನೆಯ ಡೆಡ್​ಲೈನ್ ಹಲವು ಬಾರಿ ವಿಸ್ತರಣೆ ಆಗಿರುವುದು ವಿಶೇಷ. ಈ ಸ್ಕೀಮ್​ನಲ್ಲಿ ಗರಿಷ್ಠ ಶೇ. 7.6ರಷ್ಟು ಬಡ್ಡಿ ಸಿಗುತ್ತದೆ.

ಏನಿದು ಎಸ್​ಬಿಐ ಅಮೃತ್ ಕಳಶ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್?

ಈ ವಿಶೇಷ ನಿಶ್ಚಿತ ಠೇವಣಿ ಯೋಜನೆ 400 ದಿನಗಳ ಅವಧಿಯದ್ದಾಗಿದೆ. ಸಾಮಾನ್ಯ ಎಸ್​​ಬಿಐ ಗ್ರಾಹಕರ ಈ ಠೇವಣಿಗಳಿಗೆ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಾದರೆ ಶೇ. 7.6ರಷ್ಟು ಬಡ್ಡಿ ಸಿಗುತ್ತದೆ. 2023ರ ಏಪ್ರಿಲ್ 12ರಿಂದ ಈ ಸ್ಕೀಮ್ ಜಾರಿಯಲ್ಲಿದೆ. ಈಗ ಡಿಸೆಂಬರ್ 31ರವರೆಗೂ ಈ ಸ್ಕೀಮ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಎಸ್​ಬಿಐ ಗ್ರಾಹಕರು ಹೊಸದಾಗಿ ಈ ಸ್ಕೀಮ್​ನಲ್ಲಿ ಎಫ್​ಡಿ ಇಡಬಹುದು. ಅಥವಾ ಈಗಾಗಲೇ ಬೇರೆ ಅವಧಿಗೆ ಠೇವಣಿ ಇಟ್ಟಿದ್ದು ಅದರ ರಿನಿವಲ್ ಮಾಡಬೇಕಾದಾಗ ಅಮೃತ್ ಕಳಶ್ ಸ್ಕೀಮ್ ಪಡೆಯಬಹುದು.

ಇದನ್ನೂ ಓದಿ: RBI UDGAM Portal: ಬ್ಯಾಂಕುಗಳಲ್ಲಿ ನಿಮ್ಮ ಅನ್​ಕ್ಲೈಮ್ಡ್ ಡೆಪಾಸಿಟ್ ಹುಡುಕಲು ಆರ್​ಬಿಐನಿಂದ ಉಡ್ಗಮ್; ಈ ಪೋರ್ಟಲ್ ಬಳಕೆ ಹೇಗೆ?

ಕುತೂಹಲವೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ವಿವಿಧ ಅವಧಿ ಠೇವಣಿಗಳ ಪೈಕಿ ಅಮೃತ್ ಕಳಶ್​ನಲ್ಲಿ ಗರಿಷ್ಠ ಬಡ್ಡಿ ಸಿಗುತ್ತದೆ. ಇದು ಬಿಟ್ಟರೆ ಹಿರಿಯ ನಾಗರಿಕರಿಗೆ ಎಸ್​ಬಿಐ ನೀಡುವ ಗರಿಷ್ಠ ಬಡ್ಡಿ ದರ ಶೇ 7.5 ಮಾತ್ರ.

ಸಾಮಾನ್ಯ ಗ್ರಾಹಕರ 2ರಿಂದ 3 ವರ್ಷದ ಅವಧಿಯ ಠೇವಣಿಗೆ ಎಸ್​ಬಿಐ ಶೇ. 7ರಷ್ಟು ಬಡ್ಡಿ ನೀಡಿದರೆ, ಹಿರಿಯ ನಾಗರಿಕರಿಗೆ ಶೇ. 7.5ರಷ್ಟು ಇಂಟರೆಸ್ಟ್ ರೇಟ್ ಆಫರ್ ಮಾಡುತ್ತದೆ. ಆದರೆ, 400 ದಿನ, ಅಂದರೆ ಒಂದು ವರ್ಷದ ಮೇಲೆ 35 ದಿನದ ಅವಧಿ ಠೇವಣಿಗೆ 10 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ದೊರೆಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್