ಮೇಲುಕೋಟೆಯಲ್ಲಿ ಇಂದು ವಿಶ್ವಪ್ರಸಿದ್ಧ ಬ್ರಹ್ಮೋತ್ಸವ, ಸಿದ್ಧತೆಗಳ ಬಗ್ಗೆ ವಿವರಣೆ ನೀಡಿದ ಜಿಲ್ಲಾಧಿಕಾರಿ
ಗರುಢಾರೂಢ ಚಲುವನಾರಾಯಣಸ್ವಾಮಿ ಇಂದು ಭಕ್ತರಿಗೆ ದರ್ಶನ ನೀಡಲಿದ್ದು ಸುಮಾರು ಒಂದೂವರೆ ಲಕ್ಷ ಜನ ಭಕ್ತಾದಿಗಳು ಬ್ರಹ್ಮೋತ್ಸವದಲ್ಲಿ ಭಾಗಿಯಾಗಲಿರುವರೆಂದು ಮಂಡ್ಯ ಜಿಲ್ಲಾಧಿಕಾರಿ ಹೇಳುತ್ತಾರೆ. ಮೊದಲ ಬಾರಿಗೆ ಭಕ್ತಾದಿಗಳಿಗೆಂದು ದಾಸೋಹ ವ್ಯವಸ್ಥೆಯನ್ನು ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 7 ಗಂಟೆಯವರಗೆ ಮಾಡಲಾಗಿದೆ, ಯಾವುದೇ ಅಹಿತಕರ ಘಟನೆ ಜರುಗದಂತೆ ಸುಮಾರು 1,200ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮಂಡ್ಯ, ಏಪ್ರಿಲ್ 7: ಜಿಲ್ಲೆಯ ಮೇಲುಕೋಟೆಯಲ್ಲಿ ವಿಶ್ವಪ್ರಸಿದ್ಧ ವೈರಮುಡಿ ಬ್ರಹ್ಮೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಮಂಡ್ಯದ ಜಿಲ್ಲಾಧಿಕಾರಿ ಡಾ ಕುಮಾರ್ (Mandya DC Dr Kumar) ಹೇಳುವ ಪ್ರಕಾರ ಶ್ರೀದೇವಿ ಮತ್ತು ಭೂದೇವಿ ದೇವತೆಗಳು ಇಂದು ಧರಸಿ ಭಕ್ತಾದಿಗಳಿಗೆ ದರ್ಶನ ನೀಡುವ ವಜ್ರಖಚಿತ ರಾಜಮುಡಿ ಮತ್ತು ವೈರಮುಡಿ ಆಭರಣಗಳನ್ನು ಖಜಾನೆ ಕಚೇರಿಯಿಂದ ಸ್ಥಳೀಯರ ಸಮ್ಮುಖದಲ್ಲಿ ಬೆಳಗ್ಗೆ ಮೆರವಣಿಗೆಯಲ್ಲಿ ಕಳಿಸಲಾಗಿದ್ದು ಅವು ಸಾಯಂಕಾಲ 8.30 ರ ಸುಮಾರಿಗೆ ಚಲುವನಾರಾಯಣಸ್ವಾಮಿ ದೇವಸ್ಥಾನ ತಲುಪಲಿವೆ. ಅದಾದ ಬಳಿಕ ಬ್ರಹ್ಮೋತ್ಸವ ಶುರುವಾಗಲಿದೆ ಎಂದ ಜಿಲ್ಲಾಧಿಕಾರಿ ಹೇಳಿದರು.
ಇದನ್ನೂ ಓದಿ: ಅದ್ದೂರಿಯಾಗಿ ನೆರವೇರಿದ ಮೇಲುಕೋಟೆ ವೈರಮುಡಿ ಉತ್ಸವ; ದೇವರಿಗೆ ಚಿನ್ನಲೇಪಿತ ಛತ್ರಿ ನೀಡಿದ ಸಚಿವ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ