ಉತ್ತರ ಪ್ರದೇಶದಲ್ಲಿ ನಾಲ್ಕೂವರೆ ವರ್ಷದ ಬಿಜೆಪಿ ಸರ್ಕಾರ ಉತ್ತಮ ಆಡಳಿತದ ಮೈಲಿಗಲ್ಲು: ಯೋಗಿ ಆದಿತ್ಯನಾಥ

| Updated By: ರಶ್ಮಿ ಕಲ್ಲಕಟ್ಟ

Updated on: Sep 19, 2021 | 1:33 PM

Yogi Adityanath: ಕಳೆದ 54 ತಿಂಗಳುಗಳಲ್ಲಿ ರಾಜ್ಯವು ರಫ್ತು ಕೇಂದ್ರವಾಗಿ ಹೊರಹೊಮ್ಮಿದ್ದು 3 ಲಕ್ಷ ಕೋಟಿ ಮೌಲ್ಯದ ಹೂಡಿಕೆಯನ್ನು ಆಕರ್ಷಿಸಿದೆ."ನಮ್ಮ ಸರ್ಕಾರವು ಮಹಿಳೆಯರು, ಉದ್ಯಮಿಗಳು ಮತ್ತು ಸಾಮಾನ್ಯ ಜನರಿಗೆ ಭದ್ರತೆಯ ವಾತಾವರಣವನ್ನು ಸೃಷ್ಟಿಸಿದೆ" ಎಂದು ಮುಖ್ಯಮಂತ್ರಿ ಆದಿತ್ಯನಾಥ ಹೇಳಿದರು.

ಉತ್ತರ ಪ್ರದೇಶದಲ್ಲಿ ನಾಲ್ಕೂವರೆ ವರ್ಷದ ಬಿಜೆಪಿ ಸರ್ಕಾರ ಉತ್ತಮ ಆಡಳಿತದ ಮೈಲಿಗಲ್ಲು: ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ
Follow us on

ಲಕ್ನೊ: ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ (BJP) ನೇತೃತ್ವದ ಸರ್ಕಾರವು ಉತ್ತಮ ಆಡಳಿತದಲ್ಲಿ ‘ ಮೈಲಿಗಲ್ಲು’ ಸಾಧಿಸಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ(Yogi Adityanath) ಭಾನುವಾರ ಹೇಳಿದ್ದಾರೆ. ಆದಿತ್ಯನಾಥ ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ನಾಲ್ಕೂವರೆ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.  ಈ ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಲು ರಾಜ್ಯ ಆಡಳಿತ ಹಾಗೂ ಸಂಘಟನೆ (ಬಿಜೆಪಿ) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸಂಘಟಿತ ಪ್ರಯತ್ನವನ್ನು ಮಾಡುತ್ತಿದೆ ಎಂದು ಅವರು ಹೇಳಿದರು. ಈ ಅವಧಿಯಲ್ಲಿ ರಾಷ್ಟ್ರೀಯ ಸುಲಲಿತ ವಹಿವಾಟು'(Ease of Doing Business) ಶ್ರೇಯಾಂಕದಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಉತ್ತರ ಪ್ರದೇಶವು ಇಂದು ಸ್ಥಿರ ವೇಗದಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಈ ಹಿಂದೆ ರಾಜ್ಯವು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ರಾಷ್ಟ್ರೀಯ ಸ್ಥಾನದಲ್ಲಿ 14 ನೇ ಸ್ಥಾನದಲ್ಲಿತ್ತು, ಆದರೆ ಈಗ ನಾವು ಎರಡನೇ ಸ್ಥಾನಕ್ಕೆ ತಲುಪಿದ್ದೇವೆ ಎಂದು ಆದಿತ್ಯನಾಥ ಹೇಳಿದರು.


“ಕಳೆದ 54 ತಿಂಗಳುಗಳಲ್ಲಿ ರಾಜ್ಯವು ರಫ್ತು ಕೇಂದ್ರವಾಗಿ ಹೊರಹೊಮ್ಮಿದ್ದು 3 ಲಕ್ಷ ಕೋಟಿ ಮೌಲ್ಯದ ಹೂಡಿಕೆಯನ್ನು ಆಕರ್ಷಿಸಿದೆ.”ನಮ್ಮ ಸರ್ಕಾರವು ಮಹಿಳೆಯರು, ಉದ್ಯಮಿಗಳು ಮತ್ತು ಸಾಮಾನ್ಯ ಜನರಿಗೆ ಭದ್ರತೆಯ ವಾತಾವರಣವನ್ನು ಸೃಷ್ಟಿಸಿದೆ” ಎಂದು ಮುಖ್ಯಮಂತ್ರಿ ಆದಿತ್ಯನಾಥ ಹೇಳಿದರು.
1,800 ಕೋಟಿಗೂ ಅಧಿಕ ಅಕ್ರಮ ಮೌಲ್ಯದ ಕ್ರಿಮಿನಲ್‌ಗಳ ಆಸ್ತಿಗಳನ್ನು ರಾಜ್ಯ ಸರ್ಕಾರ ವಶ ಪಡಿಸಿಕೊಂಡಿದೆ ಎಂದು ಆದಿತ್ಯನಾಥ ಹೇಳಿದರು. “ನಾವು ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳನ್ನು ಅವರ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಕಾನೂನಿನ ಚೌಕಟ್ಟಿನಡಿಯಲ್ಲಿ ಕಠಿಣವಾಗಿ ವ್ಯವಹರಿಸಿದ್ದೇವೆ” ಎಂದು ಆದಿತ್ಯನಾಥ ಹೇಳಿದ್ದಾರೆ.

ಆದಿತ್ಯನಾಥ ಅವರು ತಮ್ಮ ಅವಧಿಯಲ್ಲಿ ಉತ್ತರ ಪ್ರದೇಶವು ಗಲಭೆ ಮತ್ತು ಕೋಮುಗಲಭೆಯಿಂದ ಮುಕ್ತವಾಗಿತ್ತು ಎಂದು ಹೇಳಿಕೊಂಡರು.
“ಉತ್ತರ ಪ್ರದೇಶದ ಗ್ರಹಿಕೆ ದೇಶದಲ್ಲಿ ಬದಲಾಗಿದೆ. ಗಲಭೆಗಳು ಮೊದಲು ಟ್ರೆಂಡ್ ಆಗಿದ್ದ ಇದೇ ರಾಜ್ಯ, ಆದರೆ ಕಳೆದ 4.5 ವರ್ಷಗಳಲ್ಲಿ ರಾಜ್ಯವು ಕೋಮುಗಲಭೆಯಿಂದ ಮುಕ್ತವಾಗಿತ್ತು ಎಂದು ಮುಖ್ಯಮಂತ್ರಿ ಒತ್ತಿ ಹೇಳಿದರು.

2017 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದ 42 ಲಕ್ಷ ಜನರಿಗೆ ಮನೆ ನೀಡಲಾಗಿದೆ.

“ನೇರ ಪ್ರಯೋಜನ ವರ್ಗಾವಣೆ (DBT) ಯೋಜನೆಯಡಿ ನಾವು ಜನರಿಗೆ 5 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಒದಗಿಸಿದ್ದೇವೆ ಆದರೆ ಕಳೆದ 56 ತಿಂಗಳಲ್ಲಿ ರಾಜ್ಯದ 4.5 ಲಕ್ಷ ಯುವಕರು ಉದ್ಯೋಗ ಪಡೆದಿದ್ದಾರೆ. ರಾಜ್ಯದ ನೇಮಕಾತಿ ಮತ್ತು ಕಲ್ಯಾಣ ಯೋಜನೆಗಳಲ್ಲಿ ಪಾರದರ್ಶಕತೆ ಇದೆ, ” ಎಂದು ಆದಿತ್ಯನಾಥ ಹೇಳಿದರು, ನೈಸರ್ಗಿಕ ವಿಪತ್ತುಗಳಿಗೆ ಬಲಿಯಾದವರು 24 ಗಂಟೆಗಳಲ್ಲಿ ಪರಿಹಾರವನ್ನು ಪಡೆದಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ವಿರೋಧ ಪಕ್ಷಗಳನ್ನು ಟೀಕಿಸಿದ, ಆದಿತ್ಯನಾಥ ಅವರು ಹಿಂದಿನ ಸರ್ಕಾರಗಳ ಆಡಳಿತದಲ್ಲಿ ಉತ್ತರ ಪ್ರದೇಶವನ್ನು ದೇಶದ ಅಭಿವೃದ್ಧಿಯನ್ನು ತಡೆಯುವ ರಾಜ್ಯವೆಂದು ಪರಿಗಣಿಸಲಾಗಿದೆ ಎಂದು ಹೇಳಿದರು.

“ಇಂದು ಉತ್ತರ ಪ್ರದೇಶವು ಇತರ ರಾಜ್ಯಗಳಿಗಿಂತ 42 ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದರಲ್ಲಿ ಬಹಳ ಮುಂದಿದೆ” ಎಂದು ಆದಿತ್ಯನಾಥ ಹೇಳಿದರು.

ಬಿಜೆಪಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳುತ್ತಲೇ ಹಿಂದಿನ ಸರ್ಕಾರಗಳು ಹಗರಣಗಳಲ್ಲಿ ಸಿಲುಕಿಕೊಂಡಿವೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

“ಹಿಂದಿನ ಸರ್ಕಾರಗಳ ಅವಧಿಯಲ್ಲಿ ಆಹಾರ ಹಗರಣವಿತ್ತು, ಮತ್ತು ಅದರಿಂದಾಗಿ ಜನರು ಹಸಿವಿನಿಂದ ಸತ್ತರು. ಆದರೆ ಸರ್ಕಾರ ರಚಿಸಿದ ನಂತರ ನಾವು ಬಡ ಜನರಿಗೆ ಪಡಿತರ ಚೀಟಿಗಳನ್ನು ನೀಡಿದ್ದೇವೆ, ನಕಲಿ ಪಡಿತರ ಚೀಟಿಗಳನ್ನು ಪರಿಶೀಲಿಸಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ:  Punjab Politics ಸಿಖ್ ನಾಯಕರೇ ಪಂಜಾಬ್ ಸಿಎಂ ಆಗಬೇಕು; ಮುಖ್ಯಮಂತ್ರಿ ಪ್ರಸ್ತಾಪ ತಿರಸ್ಕರಿಸಿದ ಅಂಬಿಕಾ ಸೋನಿ

(Uttar Pradesh CM Yogi Adityanath claimed BJP government in Uttar Pradesh landmark of good governance)

Published On - 1:22 pm, Sun, 19 September 21