ಬಡ ಮಕ್ಕಳ ಶಿಕ್ಷಣಕ್ಕಾಗಿ ಉತ್ತಮ ಸೌಲಭ್ಯಗಳಿರುವ ಅಟಲ್ ವಸತಿ ಶಾಲೆ; ಯೋಗಿ ಆದಿತ್ಯನಾಥ್ ಸರ್ಕಾರದ ಮಹತ್ತರ ಯೋಜನೆ

|

Updated on: Aug 02, 2023 | 6:24 PM

ಅಟಲ್ ವಸತಿ ಶಾಲೆಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಪ್ರಕ್ರಿಯೆಯೂ ಬಹುತೇಕ ಪೂರ್ಣಗೊಂಡಿದೆ. ಇವುಗಳಲ್ಲಿ ಏಪ್ರಿಲ್ 5ಕ್ಕೆ ಪ್ರಾಂಶುಪಾಲರ ನೇಮಕಾತಿ ಪೂರ್ಣಗೊಂಡಿದ್ದು, ಜೂನ್ 22ಕ್ಕೆ ಆಡಳಿತಾಧಿಕಾರಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ.

ಬಡ ಮಕ್ಕಳ ಶಿಕ್ಷಣಕ್ಕಾಗಿ ಉತ್ತಮ ಸೌಲಭ್ಯಗಳಿರುವ ಅಟಲ್ ವಸತಿ ಶಾಲೆ; ಯೋಗಿ ಆದಿತ್ಯನಾಥ್ ಸರ್ಕಾರದ ಮಹತ್ತರ ಯೋಜನೆ
ಯೋಗಿ ಆದಿತ್ಯನಾಥ
Follow us on

ಲಕ್ನೋ ಆಗಸ್ಟ್ 2: ಉತ್ತರ ಪ್ರದೇಶ ಸರ್ಕಾರ(Uttar Pradesh) ಬಡವರು, ಅನಾಥರು ಮತ್ತು ಕಾರ್ಮಿಕರ ಭರವಸೆಯ ಮಕ್ಕಳಿಗೆ ಉತ್ತಮ ಸೌಲಭ್ಯಗಳೊಂದಿಗೆ ವಸತಿ ಶಾಲೆಗಳಲ್ಲಿ ಕಲಿಸುವ ಸಿದ್ಧತೆ ಮಾಡುತ್ತಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಅಟಲ್ ವಸತಿ ಶಾಲೆಗಳನ್ನು (Atal residential schools) ನಡೆಸಲು ಉದ್ದೇಶಿಸಿದ್ದು 16 ಜಿಲ್ಲೆಗಳಲ್ಲಿ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.ಇವುಗಳಲ್ಲಿ ಆಗಸ್ಟ್ ತಿಂಗಳ ಕೊನೆವರೆಗೆ 6ನೇ ತರಗತಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಉಳಿದ 2 ಶಾಲೆಗಳನ್ನು ಈ ವರ್ಷದ ಅಂತ್ಯದೊಳಗೆ ಕಾರ್ಯಗತಗೊಳಿಸಬಹುದು. 1189.88 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ 18 ವಸತಿ ಶಾಲೆಗಳಲ್ಲಿ ಎಲ್ಲ ಉನ್ನತ ಮಟ್ಟದ ಸೌಲಭ್ಯಗಳು ಲಭ್ಯವಾಗಲಿವೆ. ಈ ಶಾಲೆಗಳಲ್ಲಿ 6 ರಿಂದ 12 ನೇ ತರಗತಿಯವರಿಗೆ ಕಲಿಸಲಾಗುತ್ತದೆ.

ಅಟಲ್ ವಸತಿ ಶಾಲೆಗಳನ್ನು ಎಲ್ಲೆಲ್ಲಿ ನಿರ್ಮಿಸಲಾಗಿದೆ?

ಅಜಂಗಢ, ಬಸ್ತಿ, ಲಕ್ನೋ, ಅಯೋಧ್ಯೆ, ಬುಲಂದ್‌ಶಹರ್ (ಮೀರತ್), ಗೊಂಡಾ, ಗೋರಖ್‌ಪುರ, ಲಲಿತ್‌ಪುರ (ಝಾನ್ಸಿ), ಪ್ರಯಾಗ್‌ರಾಜ್, ಸೋನ್‌ಭದ್ರ (ಮಿರ್ಜಾಪುರ), ಮುಜಾಫರ್‌ನಗರ (ಸಹಾರನ್‌ಪುರ), ಬಂಡಾ, ಅಲಿಗಢ್, ಆಗ್ರಾ, ವಾರಣಾಸಿ, ಮೊರಾದ್‌ಬಾದ್‌ನಲ್ಲಿ ಅಟಲ್ ವಸತಿ ಶಾಲೆ ನಿರ್ಮಿಸಲಾಗುತ್ತದೆ

ನೇಮಕಾತಿ ಪ್ರಕ್ರಿಯೆ ಬಹುತೇಕ ಪೂರ್ಣ

ಅಟಲ್ ವಸತಿ ಶಾಲೆಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಪ್ರಕ್ರಿಯೆಯೂ ಬಹುತೇಕ ಪೂರ್ಣಗೊಂಡಿದೆ. ಇವುಗಳಲ್ಲಿ ಏಪ್ರಿಲ್ 5ಕ್ಕೆ ಪ್ರಾಂಶುಪಾಲರ ನೇಮಕಾತಿ ಪೂರ್ಣಗೊಂಡಿದ್ದು, ಜೂನ್ 22ಕ್ಕೆ ಆಡಳಿತಾಧಿಕಾರಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ.
ಜೂನ್ 26ರಂದು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೊಂದೆಡೆ ಬೋಧಕೇತರ ಸಿಬ್ಬಂದಿಯ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಇದರೊಂದಿಗೆ, ಎಲ್ಲಾ ಶಾಲೆಗಳಿಗೆ ಪೀಠೋಪಕರಣಗಳು, ಮೆಸ್ ಸೇವೆ, ಅಧ್ಯಾಪಕರ ನಿರ್ವಹಣೆ, ಸಮವಸ್ತ್ರ ಮತ್ತು ಇತರ ಪರಿಕರಗಳ ಲಭ್ಯತೆಯನ್ನು ಸಹ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಈ ಕಾಮಗಾರಿಯೂ ಅಂತಿಮ ಹಂತದಲ್ಲಿದೆ ಎಂದು ಟಿವಿ9 ಭಾರತ್ ವರ್ಷ್ ವರದಿ ಮಾಡಿದೆ.

ಇದನ್ನೂ ಓದಿ: ತಮಿಳುನಾಡು: ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೆಳ್ಳಿ ಮೊದಲ ಮಹಿಳಾ ಕಾವಾಡಿ ಆಗಿ ನೇಮಕ

ಏನೆಲ್ಲ ಸೌಲಭ್ಯವಿದೆ?

ಈ ಶಾಲೆಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯವಿರುತ್ತದೆ. ಮಕ್ಕಳಿಗಾಗಿ ವಿಶಿಷ್ಟವಾದ ಶೈಕ್ಷಣಿಕ ಪಠ್ಯಕ್ರಮವನ್ನು ಸಹ ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಕಂಪ್ಯೂಟರ್ ಲ್ಯಾಬ್, ಸೈನ್ಸ್ ಲ್ಯಾಬ್, ಗಣಿತ ಲ್ಯಾಬ್, ಸಮಾಜ ವಿಜ್ಞಾನ ಪ್ರಯೋಗಾಲಯ, ಅಟಲ್ ಥಿಂಕಿಂಗ್ ಲ್ಯಾಬ್, ಎಕ್ಸ್‌ಪರಿಮೆಂಟಲ್ ಲ್ಯಾಬ್ ಸೌಲಭ್ಯವೂ ಇಲ್ಲಿ ಇರಲಿದೆ. ಮಕ್ಕಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ