ನಕಲಿ ನೋಟು ಮುದ್ರಣ ಜಾಲ ಪತ್ತೆಗೆ ಮದರಸಾಗೆ ನುಗ್ಗಿದ್ದ ಅಧಿಕಾರಿಗಳಿಗೆ ಸಿಕ್ಕಿದ್ದು ಆರ್​ಎಸ್​ಎಸ್​ ಕುರಿತ ವಿವಾದಾತ್ಮಕ ಪುಸ್ತಕ

|

Updated on: Sep 04, 2024 | 10:33 AM

ಉತ್ತರ ಪ್ರದೇಶದಲ್ಲಿನ ಮದರಸಾಗಳ ಭಯೋತ್ಪಾದಕ ಸಂಪರ್ಕದ ಬಗ್ಗೆ ಜನರು ಆಗಾಗ ಆರೋಪಗಳನ್ನು ಮಾಡುತ್ತಿರುತ್ತಾರೆ. ಮದರಸಾವೊಂದರಲ್ಲಿ ನಕಲಿ ನೋಟುಗಳ ಮುದ್ರಣವಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ, ಆಗ ಆರ್​ಎಸ್​ಎಸ್​ ಕುರಿತು ವಿವಾದಾತ್ಮಕ ಪುಸ್ತಕ ಸಿಕ್ಕಿದೆ.

ನಕಲಿ ನೋಟು ಮುದ್ರಣ ಜಾಲ ಪತ್ತೆಗೆ ಮದರಸಾಗೆ ನುಗ್ಗಿದ್ದ ಅಧಿಕಾರಿಗಳಿಗೆ ಸಿಕ್ಕಿದ್ದು ಆರ್​ಎಸ್​ಎಸ್​ ಕುರಿತ ವಿವಾದಾತ್ಮಕ ಪುಸ್ತಕ
ಮದರಸಾ
Follow us on

ನಕಲಿ ನೋಟು ಮುದ್ರಣಕ್ಕೆ ಸಂಬಂಧಿಸಿದಂತೆ ಬಂದ ಮಾಹಿತಿ ಮೇರೆಗೆ ಮದರಸಾಗೆ ಶೋಧಕ್ಕೆಂದು ಹೋಗಿದ್ದ ಅಧಿಕಾರಿಗಳಿಗೆ ಆರ್​ಎಸ್​ಎಸ್​ ಕುರಿತ ವಿವಾದಾತ್ಮಕ ಪುಸ್ತಕ ಸಿಕ್ಕಿದೆ. ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಘಟನೆ ನಡೆದಿದೆ, ಆಗಸ್ಟ್ 28ರಂದು ಅತರ್ಸುಯ್ಯಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ ನಡೆದ ದಾಳಿಯಲ್ಲಿ ನಕಲಿ ನೋಟುಗಳ ಜೊತೆಗೆ, ಪೊಲೀಸರು ಪುಸ್ತಕವನ್ನು ಪತ್ತೆ ಮಾಡಿದರು.

ಆರ್​ಎಸ್​ಎಸ್​ ದಿ ಬಿಗ್ಗೆಸ್ಟ್ ಟೆರರಿಸ್ಟ್​ ಆರ್ಗನೈಸೇಷನ್ ಇನ್​ ದಿ ಕಂಟ್ರಿ(RSS: The Biggest Terrorist Organization in the Country) ಎನ್ನುವ ಪುಸ್ತಕವನ್ನು ಉರ್ದುವಿನಿಂದ ಹಿಂದಿಗೆ ತರ್ಜುಮೆ ಮಾಡಲಾಗಿದೆ. ಈ ಪುಸ್ತಕವನ್ನು ಎಸ್​ಎಂ ಮುಷರಫ್​ ಎಂಬುವವರು ಬರೆದಿದ್ದಾರೆ.

ಮದರಸಾದಲ್ಲಿ ಆರ್​ಎಸ್​ಎಸ್​ ವಿರುದ್ಧ ಮಕ್ಕಳಲ್ಲಿ ವಿಷಬೀಜ ಬಿತ್ತಲು ಮೌಲ್ವಿ ಮೊಹಮ್ಮದ್ ತಫ್ಸೀರುಲ್ ಅರಿಫೀನ್​ ಈ ಪುಸ್ತಕವನ್ನು ಬಳಕೆ ಮಾಡುತ್ತಿರಬಹುದು ಎಂದು ಅನುಮಾನಿಸಲಾಗಿದೆ.

ಮತ್ತಷ್ಟು ಓದಿ: ಮಂಗಳೂರು: ಸಾಲ ಮರುಪಾವತಿ ಮಾಡಲು ನಕಲಿ ಕರೆನ್ಸಿ ನೋಟ್ ಪ್ರಿಂಟ್, ನಾಲ್ವರ ಬಂಧನ

ಅವರ ಲೇಖನ ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿಯೂ ಪ್ರಕಟವಾಗಿದೆ. ಮದರಸಾದಲ್ಲಿ ಈ ಪುಸ್ತಕ ಪತ್ತೆಯಾದ ನಂತರ ಭದ್ರತಾ ಏಜೆನ್ಸಿಗಳು ಎಚ್ಚೆತ್ತಿವೆ.  ಅವರ ಬಳಿಯಿಂದ 1 ಲಕ್ಷ ರೂಪಾಯಿಯ ನಕಲಿ ನೋಟುಗಳು ಮತ್ತು ಮುದ್ರಣಕ್ಕೆ ಬಳಸಲಾದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ