ಮಗಳ ನಡತೆ ಬಗ್ಗೆ ಅನುಮಾನ, ಅಪ್ರಾಪ್ತ ಮಗಳ ಕೊಂದು ಹೂತು ಹಾಕಿದ್ದ ಮಹಿಳೆಗೆ ಜೀವಾವಧಿ ಶಿಕ್ಷೆ

ಮಗಳ ನಡತೆ ಮೇಲೆ ಶಂಕೆ ವ್ಯಕ್ತಪಡಿಸಿ ತಾಯಿಯೊಬ್ಬಳು ಮಗಳನ್ನು ಹತ್ಯೆಗೈದು ಮನೆಯ ಹಿಂಭಾಗ ಹೂತುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿಗೆ ಉತ್ತರ ಪ್ರದೇಶ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಹಳ್ಳಿಯ ಹೊರಗೆ ಕೂಲಿ ಕೆಲಸ ಮಾಡುವ ಬಾಲಕಿಯ ತಂದೆಗೂ ಆಕೆಯ ಬಗ್ಗೆ ತಿಳಿದಿರಲಿಲ್ಲ. ತೀವ್ರ ತನಿಖೆ ಬಳಿಕ ಪೊಲೀಸರು ಮೇ 4, 2020ರಂದು ಬಾಲಕಿಯ ಶವವನ್ನು ಆಕೆಯ ಮನೆಯ ಹಿಂಭಾಗದ ಹಿತ್ತಲಲ್ಲಿ ಪತ್ತೆ ಮಾಡಿದ್ದಾರೆ. ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಯಲ್ಲಿ ಸಮಾಧಿ ಮಾಡಲಾಯಿತು.

ಮಗಳ ನಡತೆ ಬಗ್ಗೆ ಅನುಮಾನ, ಅಪ್ರಾಪ್ತ ಮಗಳ ಕೊಂದು  ಹೂತು ಹಾಕಿದ್ದ ಮಹಿಳೆಗೆ ಜೀವಾವಧಿ ಶಿಕ್ಷೆ
ಶಿಕ್ಷೆ
Image Credit source: ipleaders

Updated on: Apr 18, 2025 | 9:16 AM

ಉತ್ತರ ಪ್ರದೇಶ, ಏಪ್ರಿಲ್ 18: ಮಕ್ಕಳು ತಪ್ಪು ಮಾಡಿದಾಗ ತಿದ್ದಿ, ಸರಿದಾರಿಯಲ್ಲಿ ನಡೆಸುವ ತಾಯಿಯೇ ಮಗಳನ್ನು ಕೊಂದು ಮನೆಯ ಹಿಂಭಾಗ ಹೂತುಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಮಹಿಳೆಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಕೊಲೆ(Murder)ಯ ಜೊತೆಗೆ, ನ್ಯಾಯಾಲಯವು ಅಪರಾಧಿಗೆ 10,000 ರೂ. ದಂಡವನ್ನೂ ವಿಧಿಸಿದೆ.

ಏಪ್ರಿಲ್ 2020ರಲ್ಲಿ ವ್ಯಕ್ತಿಯೊಬ್ಬರು ತನ್ನ 14 ವರ್ಷದ ಸಂಬಂಧಿಯೊಬ್ಬರು ಹಲವು ದಿನಗಳಿಂದ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಳ್ಳಿಯ ಹೊರಗೆ ಕೂಲಿ ಕೆಲಸ ಮಾಡುವ ಬಾಲಕಿಯ ತಂದೆಗೂ ಆಕೆಯ ಬಗ್ಗೆ ತಿಳಿದಿರಲಿಲ್ಲ. ತೀವ್ರ ತನಿಖೆ ಬಳಿಕ ಪೊಲೀಸರು ಮೇ 4, 2020ರಂದು ಬಾಲಕಿಯ ಶವವನ್ನು ಆಕೆಯ ಮನೆಯ ಹಿಂಭಾಗದ ಹಿತ್ತಲಲ್ಲಿ ಪತ್ತೆ ಮಾಡಿದ್ದಾರೆ.

ಮ್ಯಾಜಿಸ್ಟ್ರೇಟ್ ಮೇಲ್ವಿಚಾರಣೆಯಲ್ಲಿ ಸಮಾಧಿ ಮಾಡಲಾಯಿತು. ಬಾಲಕಿಯ ದೇಹ ವಶಪಡಿಸಿಕೊಂಡ ಬಳಿಕ ಪೊಲೀಸರು ಆಕೆಯ ತಾಯಿಯನ್ನು ತೀವ್ರವಾಗಿ ವಿಚಾರಿಸಿದರು. ಆಕೆ ತನ್ನ ಮಗಳ ನಡತೆ ಮೇಲೆ ಅನುಮಾನವಿತ್ತು ಹೀಗಾಗಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ
ಪ್ರೀತಿ-ಪ್ರೇಮವೆಂದು ಸುತ್ತಾಡಿ ಕೈಕೊಟ್ಟ ಪ್ರೇಯಸಿ:ಪ್ರಾಣಕಳೆದುಕೊಂಡ ಪ್ರಿಯಕರ
ತನ್ನ ಕುಟುಂಬ ಸದಸ್ಯರು, ಪ್ರೇಯಸಿ ಸೇರಿ ಐವರನ್ನು ಕೊಂದ ಅಫಾನ್
ಪ್ರಿಯಕರ ಬೇರೊಬ್ಬಳ ಜತೆ ಮಾತನಾಡಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆ
ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಪ್ರಿಯಕರ ದುರಂತ ಸಾವು!

ಮತ್ತಷ್ಟು ಓದಿ: ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪದಲ್ಲಿ ನಾದಿನಿಯ ಕೊಂದ ವ್ಯಕ್ತಿ

ಅಪರಾಧವನ್ನು ಮರೆಮಾಚಲು ಶವವನ್ನು ಹೂತು ಹಾಕಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಅದು ಸಹಜ ಸಾವಲ್ಲ ಕೊಲೆ ಎಂಬುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು, ತಾಯಿ ಮಗಳ ನಡತೆ ಶಂಕಿಸಿ ಆಕೆಯನ್ನು ಕೊಂದಿದ್ದಾಳೆ ಎಂದು ಪ್ರಾಸಿಕ್ಯೂಷನ್ ವಕೀಲರು ಹೇಳಿದ್ದಾರೆ.

ಸುದೀರ್ಘ ವಿಚಾರಣೆಯಲ್ಲಿ ಮೂವರು ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. 50 ಕ್ಕೂ ಹೆಚ್ಚು ವಿಚಾರಣೆಗಳು ನಡೆದವು ಮತ್ತು ಪ್ರಾಸಿಕ್ಯೂಷನ್‌ನಿಂದ ಏಳು ಸಾಕ್ಷಿಗಳನ್ನು ಹಾಜರುಪಡಿಸಲಾಯಿತು. ಘಟನೆ ವರದಿಯಾದಾಗಿನಿಂದ ಶಿಕ್ಷೆಗೊಳಗಾದ ತಾಯಿ ಬಂಧನದಲ್ಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:15 am, Fri, 18 April 25