ಓಂ ಪ್ರಕಾಶ್ ರಾಜ್‌ಭರ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಸ್ಥಳೀಯ ನಾಯಕಿ ನಂದಿನಿ ರಾಜ್‌ಭರ್ ಅವರನ್ನು ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾನುವಾರ ಅವರ ಮನೆಯಲ್ಲೇ ಕೊಲೆ ನಡೆದಿದೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಐವರನ್ನು ಆರೋಪಿಗಳೆಂದು ಹೆಸರಿಸಿದ್ದು, ಈ ಪೈಕಿ ಮೂವರು – ಆನಂದ್ ಯಾದವ್, ಧ್ರುವ ಚಂದ್ರ ಯಾದವ್ ಮತ್ತು ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ.
ಮಾಹಿತಿ ಪ್ರಕಾರ ನಂದಿನಿ ರಾಜ್‌ಭರ್ ಅವರ ಪತಿಯ ಚಿಕ್ಕಪ್ಪ ಬಾಲಕೃಷ್ಣ ಎಂಬುವರಿಗೆ ಸೇರಿದ ಜಾಗವನ್ನು ಸ್ಥಳೀಯ ಭೂಮಾಫಿಯಾ ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಅದರ ಸಂಪೂರ್ಣ ಹಣವನ್ನು ಪಾವತಿಸದೆ ಅದನ್ನು ನೋಂದಾಯಿಸಿದ್ದರು. ಇದರಿಂದಾಗಿ ಫೆ.29ರಂದು ಬಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮತ್ತಷ್ಟು ಓದಿ: ಕೋಪದಲ್ಲಿ ಮಗನನ್ನು ಹುಚ್ಚ ಎಂದು ಕರೆದಿದ್ದಕ್ಕೆ ತಾಯಿಯನ್ನೇ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ
ಮೂವರು ಭೂ ಮಾಫಿಯಾಗಳಾದ ಶ್ರವಣ್ ಯಾದವ್, ಧ್ರುವ ಚಂದ್ರ ಯಾದವ್ ಮತ್ತು ಪನ್ನೆ ಲಾಲ್ ಯಾದವ್ ಮಾಡಿರುವ ವಂಚನೆಯ ವಿರುದ್ಧ ನಂದಿನಿ ರಾಜ್‌ಭರ್ ಮತ್ತು ಬಾಲಕೃಷ್ಣ ಲಾಬಿ ನಡೆಸುತ್ತಿದ್ದರು.
ಪನ್ನೆ ಲಾಲ್ ಯಾದವ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಕೊಲೆಯಾಗುವ ಮುನ್ನ ನಂದಿನಿ ರಾಜ್‌ಭರ್ ಅವರು ಬಾಲಕೃಷ್ಣ ಅವರ ಜಮೀನನ್ನು ವಶಪಡಿಸಿಕೊಂಡಿರುವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ