Viral Video: ಅದ್ಹೇಗೆ ಇಲಿಯನ್ನು ಸುಟ್ಟು ತಿನ್ನುತ್ತಿದ್ದಾರೆ ನೋಡಿ ಈ ಆದಿವಾಸಿಗಳು!

Viral Video: ಅದ್ಹೇಗೆ ಇಲಿಯನ್ನು ಸುಟ್ಟು ತಿನ್ನುತ್ತಿದ್ದಾರೆ ನೋಡಿ ಈ ಆದಿವಾಸಿಗಳು!

Ganapathi Sharma
|

Updated on: Mar 11, 2024 | 12:59 PM

ಆಂಧ್ರ ಪ್ರದೇಶದ ಭದ್ರಾಚಲಂನ ಕೆಲವು ಆದಿವಾಸಿಗಳು ಇಲಿ ಮಾಂಸವನ್ನು ಆಹಾರವಾಗಿ ಪರಿಗಣಿಸುವುದಲ್ಲದೆ, ಅದನ್ನು ಬಹಳ ಇಷ್ಟಪಡುತ್ತಾರೆ. ಇದು ತುಂಬಾ ರುಚಿಕರವಾಗಿದ್ದು, ಲವಲವಿಕೆಯೊಂದಿಗೆ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ ಎಂದು ಅವರು ಹೇಳುತ್ತಾರೆ. ಈ ಮಾಂಸ ತಿಂದರೆ ದೇಹಕ್ಕೆ ಉತ್ತೇಜನ ಸಿಗುತ್ತದೆ ಎಂಬುದನ್ನೂ ಆದಿವಾಸಿಗಳು ವಿವರಿಸುತ್ತಾರೆ. ಆದಿವಾಸಿಗಳು ಇಲಿಯನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವ ವಿಡಿಯೋ ಇಲ್ಲಿದೆ.

ತಿಂದರೆ ಇಲಿಯನ್ನು (Rat) ತಿನ್ನಬೇಕು, ಆ ರುಚಿಯನ್ನು ಅನುಭವಿಸಬೇಕು ಎನ್ನುತ್ತಾರೆ ಆಂಧ್ರ ಪ್ರದೇಶದ ಭದ್ರಾಚಲಂನ (Bhadrachalam) ಈ ಆದಿವಾಸಿಗಳು. ಇಲಿ ಮಾಂಸದ (Rat Meat) ರುಚಿ ಹೇಗಿರುತ್ತದೆ? ಅದು ಹೇಗೆ ಅವರ ಆರೋಗ್ಯದ ಗುಟ್ಟು ಎಂಬುದನ್ನೂ ವಿವರಿಸುತ್ತಾರವರು. ಭದ್ರಾಚಲಂ ಪ್ರದೇಶದ ಕೆಲವು ಆದಿವಾಸಿಗಳು ಇಲಿ ಮಾಂಸವನ್ನು ಆಹಾರವಾಗಿ ಇಷ್ಟಪಡುತ್ತಾರೆ. ಇದು ತುಂಬಾ ರುಚಿಕರವಾಗಿದ್ದು, ಇದನ್ನು ತಿನ್ನುವುದರಿಂದ ಮನಸ್ಸು ಲವಲವಿಕೆಯಿಂದ ಇರುತ್ತದೆ. ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ ಎಂದು ಅವರು ಹೇಳುತ್ತಾರೆ. ಈ ಮಾಂಸ ತಿಂದರೆ ದೇಹಕ್ಕೆ ಉತ್ತೇಜನ ಸಿಗುತ್ತದೆ ಎನ್ನುತ್ತಾರೆ ಆದಿವಾಸಿಗಳು. ಐವರು ಆದಿವಾಸಿಗಳು ಗುಂಪು ಕಟ್ಟಿಕೊಂಡು ಇಲಿಗಳು ಓಡಾಡುವ ಪ್ರದೇಶವನ್ನು ಗುರುತಿಸಿದ್ದು, ಎಷ್ಟೇ ದೊಡ್ಡ ಇಲಿಗಳು ಇರಲಿ ಹಿಡಿದು ತಿನ್ನುತ್ತಾರಂತೆ!

ಕಾಡು ಮತ್ತು ಬೆಟ್ಟದ ತೊಗಟೆಗಳಲ್ಲಿ ಅಡಗಿ ಕುಳಿತಿರುವ ಇಲಿಗಳನ್ನು ಹಿಡಿದು ಬೆಂಕಿಯಲ್ಲಿ ಸುಟ್ಟು ತಮಗೆ ಇಷ್ಟವಾದ ರೀತಿಯಲ್ಲಿ ತಿನ್ನುತ್ತಾರೆ. ಮೊದಲಿಗೆ, ಇಡೀ ಬೇಟೆಯ ತಂಡವು ನೆಲದ ಮೇಲೆ ಕುಳಿತು ಅರಿಶಿನ, ಮೆಣಸಿನಕಾಯಿ ಮತ್ತು ಉಪ್ಪಿನೊಂದಿಗೆ ಬೇಯಿಸಿದ ಸೂಪ್ ಅನ್ನು ಕುಡಿಯುತ್ತದೆ. ಅದರ ನಂತರ, ಅವರು ಉಳಿದ ಇಲಿ ಮಾಂಸವನ್ನು ತಿನ್ನುತ್ತಾರೆ.

ಇದನ್ನೂ ಓದಿ: ಬೆಂಗಳೂರು: ಹೆದ್ದಾರಿಯಲ್ಲಿ ವೀಲಿಂಗ್ ಮಾಡ್ತಿದ್ದ 6ಜನ ಪುಂಡರ ಬಂಧನ; 13 ಬೈಕ್ ಜಪ್ತಿ

ಇಲಿ ಮಾಂಸದ ರುಚಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಎಂದು ಅವರು ಹೇಳುತ್ತಾರೆ. ವರ್ಷಕ್ಕೆ ಎರಡು ಬಾರಿಯಾದರೂ ಇಲಿ ಬೇಟೆಗೆ ಹೋಗುತ್ತೇವೆ ಎನ್ನುತ್ತಾರೆ ಆದಿವಾಸಿಗಳು. ಇಲಿ ಮಾಂಸವು ಅನೇಕ ರೋಗಗಳಿಗೆ ಔಷಧವಾಗಿದೆ ಮತ್ತು ಆರೋಗ್ಯಕರವಾಗಿದೆ. ದೇಹದ ಬಲವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳುತ್ತಾರೆ. ಇಲಿಗಳ ಮಾಂಸವನ್ನು ತಲೆಮಾರುಗಳಿಂದ ಸೇವಿಸುತ್ತಿದ್ದೇವೆ ಎನ್ನುತ್ತಾರೆ ಈ ಆದಿವಾಸಿಗಳು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ