ಟಿಕೆಟ್ ಘೋಷಣೆಯಾಗದೆ ಮಗ ಪಜ್ವಲ್ ಪರ ಹಾಸನದಲ್ಲಿ ಪ್ರಚಾರ ಶುರುಮಾಡಿದ ಭವಾನಿ ರೇವಣ್ಣ

ಟಿಕೆಟ್ ಘೋಷಣೆಯಾಗದೆ ಮಗ ಪಜ್ವಲ್ ಪರ ಹಾಸನದಲ್ಲಿ ಪ್ರಚಾರ ಶುರುಮಾಡಿದ ಭವಾನಿ ರೇವಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 11, 2024 | 11:49 AM

ಈಗ ಲೋಕಸಭಾ ಚುನಾವಣೆ ಎದುರಾಗಿದೆ ಮತ್ತು ಚುನಾವಣೆಗಾಗೇ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿವೆ. ಹಾಸನ ಲೋಕಸಭಾ ಕ್ಷೇತ್ರದಿಂದ ತಮ್ಮ ಮಗ ಮತ್ತು ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಸಿಗೋದು ಖಾತ್ರಿಯಾದಂತಿದೆ. ಹಾಗಾಗೇ, ಭವಾನಿ ಅವರು ಮಗನ ಪರವಾಗಿ ಪ್ರಚಾರ ಶುರುಮಾಡಿಬಿಟ್ಟಿದ್ದಾರೆ.

ಹಾಸನ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಜೆಡಿಎಸ್ ನಾಯಕಿ ಮತ್ತು ಹೆಚ್ ಡಿ ದೇವೇಗೌಡರ (HD Devegowda) ಹಿರಿಸೊಸೆ ಭವಾನಿ ರೇವಣ್ಣ (Bhavani Revanna) ಹಾಸಕ ಕ್ಷೇತ್ರದಲ್ಲಿ ತಾರಾ ವರ್ಚಸ್ಸಿದೆ, ಅವರಲ್ಲಿ ಮತದಾರರನ್ನು ಸೆಳೆಯುವ ಶಕ್ತಿಯಿದೆ. ಅವರ ನಾಮಬಲ ಮತ್ತು ಪ್ರಚಾರದಿಂದಾಗೇ ಕಳೆದ ವಿಧಾನ ಸಭಾ ಕ್ಷೇತ್ರದಲ್ಲಿ ಹಾಸನ ಕ್ಷೇತ್ರದಿಂದ ಸ್ವರೂಪ್ ಪ್ರಕಾಶ್ (Swaroop Prakash) ಗೆದ್ದರೆನ್ನುವುದು ಸುಳ್ಳಲ್ಲ. ಈಗ ಲೋಕಸಭಾ ಚುನಾವಣೆ ಎದುರಾಗಿದೆ ಮತ್ತು ಚುನಾವಣೆಗಾಗೇ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿವೆ. ಹಾಸನ ಲೋಕಸಭಾ ಕ್ಷೇತ್ರದಿಂದ ತಮ್ಮ ಮಗ ಮತ್ತು ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಸಿಗೋದು ಖಾತ್ರಿಯಾದಂತಿದೆ. ಹಾಗಾಗೇ, ಭವಾನಿ ಅವರು ಮಗನ ಪರವಾಗಿ ಪ್ರಚಾರ ಶುರುಮಾಡಿಬಿಟ್ಟಿದ್ದಾರೆ. ಇಲ್ಲಿನ ಸ್ಟಿಲ್ ಚಿತ್ರಗಳಲ್ಲಿ ಅವರು ಮಾಜಿ ಸಚಿವ ಮತ್ತು ಹಾಲಿ ಶಾಸಕ ಎ ಮಂಜು ಅವರ ಮನೆಗೆ ಭೇಟಿ ನೀಡಿರುವುದನ್ನು ಗಮನಿಸಬಹುದು. ಅರಕಲಗೂಡಿನಲ್ಲಿರುವ ಶಾಸಕ ಮನೆಗೆ ಭವಾನಿ ಮತ್ತು ಪ್ರಜ್ವಲ್ ಭೇಟಿ ನೀಡಿ, ಗೆಲುವಿಗಾಗಿ ಶ್ರಮಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ಜಿಲ್ಲೆಯ ಬೇರೆ ಶಾಸಕರ ಮನೆಗೂ ಭವಾನಿ ಭೇಟಿ ನೀಡಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹಾಸನಾಂಬೆಯ ದರ್ಶನಕ್ಕೆ ಪತಿಯೊಂದಿಗೆ ಆಗಮಿಸಿದ ಭವಾನಿ ರೇವಣ್ಣ ಜನರ ಗಮನ ತಮ್ಮತ್ತ ಸೆಳೆದುಕೊಂಡರು!