ವೇದಿಕೆ ಮೇಲೆ ಸಿದ್ದರಾಮಯ್ಯ ಹೊಸಕೋಟೆ ಶಾಸಕನಿಗೆ ನಿನ್ಹೆಸ್ರು ಶರತ್ ಕುಮಾರ್ ಅಲ್ವೇನಯ್ಯ ಅಂದಿದ್ಯಾಕೆ ಗೊತ್ತಾ?

ವೇದಿಕೆ ಮೇಲೆ ಸಿದ್ದರಾಮಯ್ಯ ಹೊಸಕೋಟೆ ಶಾಸಕನಿಗೆ ನಿನ್ಹೆಸ್ರು ಶರತ್ ಕುಮಾರ್ ಅಲ್ವೇನಯ್ಯ ಅಂದಿದ್ಯಾಕೆ ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 11, 2024 | 11:09 AM

ತಮ್ಮ ಬಲಭಾಗದಲ್ಲಿ ನಿಂತಿದ್ದ ಶರತ್ ರನ್ನು ಉದ್ದೇಶಿಸಿ ಸಿದ್ದರಾಮಯ್ಯ, ನಿನ್ನ ಹೆಸರು ಶರತ್ ಬಚ್ಚೇಗೌಡ ಅಲ್ವೇನಯ್ಯ? ಶರತ್ ಕುಮಾರ್ ಬಚ್ಚೇಗೌಡ ಅಂತಿದೆ ಅನ್ನುತ್ತಾರೆ. ಅದಕ್ಕೆ ಶರತ್, ಇಲ್ಲ ಸರ್, ಪೂರ್ತಿ ಹೆಸರು ಶರತ್ ಕುಮಾರ್ ಬಚ್ಚೇಗೌಡ, ಎಲ್ಲರೂ ಶರತ್ ಬಚ್ಚೇಗೌಡ ಅಂತ್ಲೇ ಕರೀತಾತೆ ಅಂದಾಗ ನಸುನಗುವ ಸಿದ್ದರಾಮಯ್ಯ ತಮ್ಮ ಮಾತು ಮುಂದುವರಿಸುತ್ತಾರೆ.

ಹೊಸಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಮಾತೇ ಹಾಗೆ. ತಮ್ಮೊಂದಿಗೆ ವೇದಿಕೆ ಮೇಲಿರುವವರು ಮಾತಾಡುವಾಗ ವಾಕ್ಯದಲ್ಲಿ ವ್ಯಾಕರಣ (grammar) ತಪ್ಪಿದರೆ ಹಾಗಲ್ಲಯ್ಯ ಅಂತ ಎಲ್ಲರೆದುರೇ ತಿದ್ದುತ್ತಾರೆ. ತಾವು ಮಾತಾಡುವಾಗ ಏನಾದರೂ ಅಸಹಜವೆನಿಸಿದರೆ ಅದನ್ನು ಸರಿಪಡಿಸಿಕೊಂಡೇ ಮುಂದೆ ಸಾಗುತ್ತಾರೆ. ಹೊಸಕೋಟೆಯಲ್ಲಿ ರವಿವಾರ ಅವರು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತಾಡುವಾಗ ಕ್ಷೇತ್ರದ ಶಾಸಕ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರತ್ ಬಚ್ಚೇಗೌಡ (Sharath Bache Gowda) ಹೆಸರನ್ನು ಕಾರ್ಡ್ ನಲ್ಲಿ ಮುದ್ರಣಗೊಂಡಿರುವಂತೆ ಶರತ್ ಕುಮಾರ್ ಬಚ್ಚೇಗೌಡ ಎಂದು ಓದುತ್ತಾರೆ. ಶಾಸಕನ ಹೆಸರು ಕೊಂಚ ಅಸಹಜ ಎನಿಸಿದ ಕಾರಣ ತಮ್ಮ ಬಲಭಾಗದಲ್ಲಿ ನಿಂತಿದ್ದ ಶರತ್ ರನ್ನು ಉದ್ದೇಶಿಸಿ ನಿನ್ನ ಹೆಸರು ಶರತ್ ಬಚ್ಚೇಗೌಡ ಅಲ್ವೇನಯ್ಯ? ಶರತ್ ಕುಮಾರ್ ಬಚ್ಚೇಗೌಡ ಅಂತಿದೆ ಅನ್ನುತ್ತಾರೆ. ಅದಕ್ಕೆ ಶರತ್, ಇಲ್ಲ ಸರ್, ಪೂರ್ತಿ ಹೆಸರು ಶರತ್ ಕುಮಾರ್ ಬಚ್ಚೇಗೌಡ, ಎಲ್ಲರೂ ಶರತ್ ಬಚ್ಚೇಗೌಡ ಅಂತ್ಲೇ ಕರೀತಾತೆ ಅಂದಾಗ ನಸುನಗುವ ಸಿದ್ದರಾಮಯ್ಯ ತಮ್ಮ ಮಾತು ಮುಂದುವರಿಸುತ್ತಾರೆ. ಹೊಸಕೋಟೆಯಲ್ಲಿ ಮುಖ್ಯಮಂತ್ರಿಯವರು ರೂ. 600 ಕೋಟಿ ವೆಚ್ಚದ ಅಭುವೃದ್ಧಿ ಕಾಮಗಾರಿಗಳನ್ನು ಉದ್ಧಾಟಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಂದಿನ ವರ್ಷ 4 ಲಕ್ಷ 25 ಸಾವಿರ ಕೋಟಿ ರೂ ಮೊತ್ತದ ಬಜೆಟ್ ಮಂಡಿಸುವೆ: ಸಿಎಂ ಸಿದ್ದರಾಮಯ್ಯ