ಮುಂದಿನ ವರ್ಷ 4 ಲಕ್ಷ 25 ಸಾವಿರ ಕೋಟಿ ರೂ ಮೊತ್ತದ ಬಜೆಟ್ ಮಂಡಿಸುವೆ: ಸಿಎಂ ಸಿದ್ದರಾಮಯ್ಯ
600 ಕೋಟಿ ರೂ. ವೆಚ್ಚದಲ್ಲಿ ಹೊಸಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡಲಾಗಿದೆ. ಸಚಿವರಾದ ಜಾರ್ಜ್, ಮುನಿಯಪ್ಪ, ಶಾಸಕ ಶರತ್ ಬಚ್ಚೇಗೌಡ ಉಪಸ್ಥಿತರಿದ್ದರು.
ದೇವನಹಳ್ಳಿ, ಮಾರ್ಚ್ 10: 600 ಕೋಟಿ ರೂ. ವೆಚ್ಚದಲ್ಲಿ ಹೊಸಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯಗೆ ಶರತ್ ಬಚ್ಚೇಗೌಡ ಬೆಳ್ಳಿ ಕಿರೀಟ ಹಾಕಿ ಸನ್ಮಾನಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ಗೂ ಬೆಳ್ಳಿ ಕಿರೀಟ್ ಗಿಫ್ಟ್ ನೀಡಿದ್ದಾರೆ. ಸಚಿವರಾದ ಜಾರ್ಜ್, ಮುನಿಯಪ್ಪ, ಶಾಸಕ ಶರತ್ ಬಚ್ಚೇಗೌಡ ಉಪಸ್ಥಿತರಿದ್ದರು.
ಬಿಜೆಪಿಯವರ ಮನೆ ದೇವರು ಸುಳ್ಳು: ಸಿಎಂ ಸಿದ್ದರಾಮಯ್ಯ
ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಂದಿನ ವರ್ಷ 4,25,000 ಕೋಟಿ ಮೊತ್ತದ ಬಜೆಟ್ ಮಂಡಿಸುವೆ ಎಂದಿದ್ದಾರೆ. ಜೆಡಿಎಸ್ ಅವರು ಪದೇ ಪದೇ ಹೇಳುತ್ತಾರೆ. ಅಭಿವೃದ್ಧಿ ಕೆಲಸ ಮಾಡಲು ಸರ್ಕಾರದಲ್ಲಿ ದುಡಿಲ್ಲ ಖಜಾನೆ ಖಾಲಿಯಾಗಿದೆ ಅಂತಾರೆ. ಆ ಮೂಲಕ ತಪ್ಪು ಮಾಹಿತಿಯನ್ನ ಕೊಡುತ್ತಾರೆ. ಇಂದು ನೀವೆಲ್ಲ ಸಾಕ್ಷಿ. ಶರತ್ ಬಚ್ಚೇಗೌಡ ಮಾಯಮಂತ್ರ ಮಾಡಿಲ್ಲ. 600 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳನ್ನ ಮಾಡಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಸತ್ಯ ಕಕ್ಕಿದ ಸುಳ್ಳುರಾಮಯ್ಯ ಬಿರುದಾಂಕಿತ ಸಿದ್ದರಾಮಯ್ಯ: ಕುಮಾರಸ್ವಾಮಿ ವಾಗ್ದಾಳಿ
ಖಜಾನೆ ಖಾಲಿಯಾಗಿದ್ದರೆ ಈ ಕೆಲಸ ಆಗುತ್ತಿತ್ತಾ. ನಾನು ಅದಕ್ಕೆ ಹೇಳುತ್ತೇನೆ. ಬಿಜೆಪಿಯವರ ಮನೆ ದೇವರು ಸುಳ್ಳು. 24-25 ರ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆ ಸೇರಿ 1 ಲಕ್ಷ 25 ಸಾವಿರ ಕೋಟಿ ರೂ. ಇಟ್ಟಿದ್ದೇವೆ. ನಿಮಗೆ ಸತ್ಯ ಗೋತ್ತಾಗಬೇಕು ಅಂದರೆ ಒಂದೆ ವೇದಿಕೆ ಬನ್ನಿ. ನಾವು ನಮ್ಮ ಸಚಿವರು ಸಿದ್ದರಿದ್ದೇವೆ ಬನ್ನಿ. ಜನರ ಮುಂದೆ ಚರ್ಚೆ ಮಾಡೋಣ. ಯಾಕೆ ಜನರಿಗೆ ಸುಳ್ಳನ್ನ ಹೇಳುತ್ತಿದ್ದೀರಾ ಎಂದು ವಾಗ್ದಾಳಿ ಮಾಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಿಷ್ಟು
ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, 2004ರಲ್ಲಿ ದಳ ಬೇಡ ಕಾಂಗ್ರೆಸ್ಗೆ ಬನ್ನಿ ಎಂದು ಬಚ್ಚೇಗೌಡರನ್ನು ಕರೆದೆ. ಬಚ್ಚೇಗೌಡ ಬರದಿದ್ದರಿಂದ ಎಂಟಿಬಿ ನಾಗರಾಜ್ ಕರೆತಂದು ಬೆಳೆಸಿದ್ದೆವು. ಹೊಸಕೋಟೆಯಲ್ಲಿ ನಾಗರಾಜ್ ಬೆಳೆಸಿದರೂ ಸರಿಯಾಗಿ ಫಲ ಕೊಡಲಿಲ್ಲ. ಈಗ ಶರತ್ ನಮ್ಮ ಜತೆಗಿದ್ದಾರೆ, ಇದೇ ಕೊನೆ, ಬೇರೆಯವರು ಬರುವುದಿಲ್ಲ. ಶರತ್ ಬಚ್ಚೇಗೌಡ ನನ್ನಂತೆ 10 ಬಾರಿ ಹೊಸಕೋಟೆ ಕ್ಷೇತ್ರದಿಂದ ಗೆಲ್ಲುತ್ತಾರೆ. ಶರತ್ ಬಚ್ಚೇಗೌಡನನ್ನು ಗೆಲ್ಲಿಸಿದ ನಿಮಗೆಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಶಂಕಿತ ಉಗ್ರ ಮದರಸದಲ್ಲಿ ತಲೆಮರೆಸಿಕೊಂಡಿರುವ ಶಂಕೆ: VHP
ಎಂಟಿಬಿಯನ್ನು ಹೊಸಕೋಟೆಯಲ್ಲಿ ಭೇಟಿಯಾಗುತ್ತೇನೆ ಅಂತಾ ಹೇಳಿದ್ದೆ. ಹೀಗಾಗಿ ಎಂಟಿಬಿ ನಾಗರಾಜ್ ಭೇಟಿಯಾಗಲು ಬಂದೆ, ಆದರೆ ಅವರಿಲ್ಲ ಎಂದು ಪರೋಕ್ಷವಾಗಿ ಎಂಟಿಬಿ ನಾಗರಾಜ್ ಕಾಲೆಳೆದರು. ವಿಧಾನಸೌಧದಲ್ಲಿ ಎಂಟಿಬಿಗೆ ಅಖಾಡದಲ್ಲಿ ಭೇಟಿಯಾಗೋಣ ಅಂದಿದ್ದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:02 pm, Sun, 10 March 24