AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಲು ನಿರಾಕರಿಸಿದಕ್ಕೆ ಯುವತಿಯನ್ನು ಅಪಹರಿಸಿದ ಪಾಗಲ್​ಪ್ರೇಮಿ: ವಿದ್ಯಾರ್ಥಿನಿ ರಕ್ಷಿಸಿ ಕರೆತಂದ ಹಾವೇರಿ ಪೊಲೀಸ್​​

ಆ ಯುವತಿ ಜೀವನದಲ್ಲಿ ಹತ್ತಾರು ಕನಸ್ಸು ಕಂಡು ಕಷ್ಟಪಟ್ಟು ಬಿ.ಇಡ್ ಓದುತ್ತಿದ್ದಾಳು ಭಾನುವಾರವಾದರೂ ವಿಶೇಷ ತರಬೇತಿ ಹಿನ್ನಲೆ ಕಾಲೇಜಿಗೆ ತೆರಳುತ್ತಿದ್ದಳು. ಆದರೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಪಾಗಲ್ ಪ್ರೇಮಿ ಹೊತ್ತೋದಿದ್ದಾನೆ. ಮಗಳು ಕಿಡ್ನಾಪ್​​ ಸುದ್ದಿ ತಿಳಿದು ಹೆತ್ತವರು ಗಾಬರಿಯಿಂದ ಪೊಲೀಸ್ ಠಾಣೆಗೆ ಓಡೋಡಿ ಬಂದಿದ್ದಾರೆ. ಪಾಗಲ್ ಪ್ರೇಮಿ ಬೆನ್ನುಹಟ್ಟಿದ ಹಾವೇರಿ ಪೊಲೀಸರು ಯುವತಿಯನ್ನು ಸಿನೀಮಿಯ ರೀತಿ ರಕ್ಷಣೆ ಮಾಡಿದ್ದಾರೆ.

ಪ್ರೀತಿಸಲು ನಿರಾಕರಿಸಿದಕ್ಕೆ ಯುವತಿಯನ್ನು ಅಪಹರಿಸಿದ ಪಾಗಲ್​ಪ್ರೇಮಿ: ವಿದ್ಯಾರ್ಥಿನಿ ರಕ್ಷಿಸಿ ಕರೆತಂದ ಹಾವೇರಿ ಪೊಲೀಸ್​​
ಹಾವೇರಿ ಪೊಲೀಸ ಠಾಣೆ, ಅಪಹರಿಸಿದ ಪಾಗಲ್​ಪ್ರೇಮಿ
TV9 Web
| Edited By: |

Updated on: Mar 10, 2024 | 7:35 PM

Share

ಹಾವೇರಿ, ಮಾರ್ಚ್​ 10: ಪ್ರೀತಿಸಲು ನಿರಾಕರಿಸಿದ B.ed ವಿದ್ಯಾರ್ಥಿನಿಯನ್ನು ಪಾಗಲ್​ಪ್ರೇಮಿಯೊಬ್ಬ ಅಪಹರಿಸಿದ (kidnapped) ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯನ್ನು ರಕ್ಷಿಸಿ ಹಾವೇರಿ ಪೊಲೀಸರು ಕರೆತಂದಿರುವಂತಹ ಘಟನೆ ನಡೆದಿದೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಾಗಿದೆ. ಬೆಳಗ್ಗೆ 9 ಗಂಟೆಗೆ ಕಾಲೇಜಿಗೆ ತೆರಳುತ್ತಿದ್ದ ಬಿ.ಇಡಿ ವಿದ್ಯಾರ್ಥಿನಿಯನ್ನು ಹಾವೇರಿಯ ಓಲ್ಡ್ ಪೋಸ್ಟ್ ಆಫೀಸ್ ಬಳಿ ನೆರೆಮನೆ ನಿವಾಸಿ ವಿಷ್ಣು ತಗಡಿನಮನಿ ಹಾಡಹಗಲೇ ಅಪಹರಿಸಿದ್ದ. ತಕ್ಷಣ ಹಾವೇರಿ ನಗರ ಠಾಣೆ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಯುವತಿಯು ಕಾಲೇಜ್ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆ. ಕಿಡ್ನಾಪ್ ಮಾಡಿದ ಆರೋಪಿಯನ್ನ ವಿಷ್ಣು ತಗಡಿನಮನಿ ಎಂದು ಗುರುತಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಯುವತಿ ರಕ್ಷಣೆಗೆ ಮುಂದಾಗಿದ್ದರು. ಯುವತಿಯನ್ನ ಮೋಟೆಬೆನ್ನೂರು ಬಳಿ ಬಿಟ್ಟು ಆರೋಪಿ‌ ವಿಷ್ಣು ಎಸ್ಕೇಪ್ ಆಗಿದ್ದಾನೆ. ಫೋನ್ ಟ್ರ್ಯಾಕ್ ಮಾಡಿ ಪೊಲೀಸರು ಯುವತಿ ಪತ್ತೆ ಹಚ್ಚಿ ಕರೆತಂದಿದ್ದಾರೆ.ಪೊಲೀಸ್ ಠಾಣೆಗೆ ಯುವತಿಯನ್ನ ಕರೆತರುತ್ತಿದ್ದಂತೆ ತಾಯಿಯನ್ನ ಅಪ್ಪಿ ಯುವತಿ ಗೋಳಾಡಿದ್ಲು. ಈ ವೇಳೆ ಮಗಳ ಜೊತೆ ಪೋಷಕರೂ ಕಣ್ಣೀರು ಹಾಕಿದರು.

ಇದನ್ನೂ ಓದಿ: ಅಕ್ರಮ ಸಂಬಂಧದಿಂದ ಮಗು ಜನನ; ಹುಟ್ಟುತ್ತಲೇ ಕುತ್ತಿಗೆ ಹಿಚುಕಿ ಕೊಂದ‌ ತಂದೆ, ಅಜ್ಜಿ

ಮಗಳನ್ನ ಕಿಡ್ನಾಪ್ ಮಾಡಿದ ಯುವಕನ ಮೇಲೆ ಯುವತಿ ತಂದೆ ದೇವೇಂದ್ರಪ್ಪ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಒಂದು ವರ್ಷದಿಂದ ಯುವತಿಯ ಕಾಲೇಜು ಹೋಗುತ್ತಿದ್ದ ವೇಳೆ, ಹಾಸ್ಟಲ್ ಬಳಿ ಮತ್ತು ಬಸ್ ನಿಲ್ದಾಣದ ಬಂದು ಪಾಗಲ್ ಪ್ರೇಮಿ ಪ್ರೀತಿಸು ಅಂತಾ ಕಾಡುತ್ತಿದ್ದ ಎಂದು ಪೊಷಕರು ಆರೋಪಿಸಿದ್ದಾರೆ.ಇದೇ ವಿಚಾರವಾಗಿ ಒಂದು ವಾರದ ಹಿಂದೆ ರಾಜೀ ಪಂಚಾಯಿತಿಕೂಡಾ ಮಾಡಲಾಗಿತ್ತು ಆಗ ಇನ್ನುಮುಂದೆ ನಿಮ್ಮ ಮಗಳ ತಂಟೆಗೆ ಬರುವುದಿಲ್ಲಾ ಎಂದು ಒಪ್ಪಿಕೊಂಡಿದ್ದಾ ಈಗಾ ಮತ್ತೆ ಹೀಗೆ ಮಾಡಿದ್ದಾನೆ ನಮಗೆ ರಕ್ಷಣೆ ಕೊಡಿ ಎಂದು ಅಂಗಲಾಚಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಬಸವೇಶ್ವರನಗರ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕುಡಿತದ ಚಟ ಬಿಡಸಲಾಗದೆ ಮಗನನ್ನು ಕೊಂದ ತಂದೆ ​

ಪಾಗಲ್ ಪ್ರೇಮಿ ಪ್ರೀತಿ ನೀರಾಕರಿಸಿದಕ್ಕೆ ಯುವತಿ ಕಿಡ್ನಾಪ್ ಪ್ರಕರಣ ಭೇದಿಸಲು ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಇಂಥಾ ಪ್ರಕರಣಗಳು ಜಿಲ್ಲೆಯಲ್ಲಿ ಮರಕಳಿಸ ಬಾರದು. ಇಂತವರಿಗೆ ಕಠಿಣ ಕ್ರಮ ಆಗಬೇಕು ಎಂದು ಪೋಷಕರು ಒತ್ತಾಯಿಸಯತ್ತಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ