ಬೆಂಗಳೂರು: ಬಸವೇಶ್ವರನಗರ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕುಡಿತದ ಚಟ ಬಿಡಸಲಾಗದೆ ಮಗನನ್ನು ಕೊಂದ ತಂದೆ
ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದ ಯುವಕ ಯೋಗೇಶ್ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದೆ. ಯೋಗೇಶ್ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತಿದ್ದನು. ಯೋಗೇಶ್ ಮದ್ಯಕ್ಕೆ ದಾಸನಾಗಿದ್ದನು. ಮಗನ ಕುಡಿತದ ಚಟದಿಂದ ತಂದೆ ಪ್ರಕಾಶ್ ಬೇಸತ್ತು ಹೋಗಿದ್ದನು. ಇದೇ ವಿಚಾರವಾಗಿ ತಂದೆ-ಮಗನ ನಡುವೆ ಹಲವು ಬಾರಿ ಜಗಳವಾಗಿದೆ. ಮುಂದೇನಾಯ್ತು ಈ ಸ್ಟೋರಿ ಓದಿ...
ಬೆಂಗಳೂರು, ಮಾರ್ಚ್ 10: ನಗರದ ಬಸವೇಶ್ವರನಗರದಲ್ಲಿ (Basaveshwara Nagar) ನಡೆದ ಯುವಕ ಯೋಗೇಶ್ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದೆ. ಕುಡಿತದ ಚಟ ಬಿಡಿಸಲಾಗದೆ ತಂದೆ ಪ್ರಕಾಶ್ ಮಗ ಯೋಗೇಶ್ನನ್ನು ಕೊಲೆ ಮಾಡಿದ್ದಾನೆ. ಪುತ್ರ ಯೋಗೇಶ್ನನ್ನು ಹತ್ಯೆಗೈದು ಆತ್ಮಹತ್ಯೆ ಅಂತ ತಂದೆ ಪ್ರಕಾಶ್ ಬಿಂಬಿಸಿದ್ದನು. ಪೊಲೀಸರ (Police) ತನಿಖೆಯಲ್ಲಿ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪ್ರಕಾಶ್ನನ್ನು ಬಂಧಿಸಿದ್ದಾರೆ.
ಯೋಗೇಶ್ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತಿದ್ದನು. ಯೋಗೇಶ್ ಮದ್ಯಕ್ಕೆ ದಾಸನಾಗಿದ್ದನು. ಮಗನ ಕುಡಿತದ ಚಟದಿಂದ ತಂದೆ ಪ್ರಕಾಶ್ ಬೇಸತ್ತು ಹೋಗಿದ್ದನು. ಇದೇ ವಿಚಾರವಾಗಿ ತಂದೆ-ಮಗನ ನಡುವೆ ಹಲವು ಬಾರಿ ಜಗಳವಾಗಿದೆ. ಬುಧವಾರ (ಮಾ.06) ರಂದು ಇದೇ ವಿಚಾರವಾಗಿ ತಂದೆ-ಮಗನ ನಡುವೆ ಗಲಾಟೆಯಾಗಿದೆ.
ಜಗಳದ ನಡುವೆ ಆರೋಪಿ ಪ್ರಕಾಶ್ ಮಗ ಯೋಗೇಶ್ನ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ಆರೋಪಿ ಪ್ರಕಾಶ್ ಮಗ ಯೋಗೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ರೀತಿ ಬಿಂಬಿಸಿದ್ದಾನೆ. ಆದರೆ ಸ್ಥಳೀಯರು ಪ್ರಕಾಶ್ ಮೇಲೆ ಅನುಮಾನಗೊಂಡು, ಇದು ಆತ್ಮಹತ್ಯೆಯಲ್ಲ ಕೊಲೆ ಅಂತ ಪೊಲೀಸರ ಎದುರು ಶಂಕೆ ವ್ಯಕ್ತ ಪಡಿಸಿದರು. ಅಲ್ಲದೆ ಯುವಕ ಸಾಯುವ ಹಿಂದಿನ ದಿನ ಮನೆಯಲ್ಲಾಗಿದ್ದ ಗಲಾಟೆ ಬಗ್ಗೆ ಸಹ ತಿಳಿಸಿದ್ದರು.
ಇದನ್ನೂ ಓದಿ: ಕೌಟುಂಬಿಕ ಕಲಹ: ಶಿವರಾತ್ರಿಯಂದೆ ಪತ್ನಿಯ ಬರ್ಬರ ಕೊಲೆ
ವಿಚಾರ ತಿಳಿದು ಪೊಲೀಸರು ಮೃತದೇಹವನ್ನು ಮರಣೊತ್ತರ ಪರಿಕ್ಷೆಗೆ ರವಾನಿಸಿದ್ದರು. ಇತ್ತ ಮನೆ ಪರಿಶೀಲನೆ ವೇಳೆ ಸಹ ನೇಣು ಬಿಗಿದುಕೊಂಡ ಬಗ್ಗೆ ಯಾವುದೇ ಸಾಕ್ಷಿ ಇರಲಿಲ್ಲ. ಈ ನಡುವೆ ಮರಣೋತ್ತರ ಪರಿಕ್ಷಾ ವರದಿ ಪೊಲೀಸರ ಕೈ ಸೇರಿತು. ವರದಿಯಲ್ಲಿ ಆತ್ಮಹತ್ಯೆಯಲ್ಲ ಕೊಲೆ ಎಂದು ಉಲ್ಲೇಖವಾಗಿದೆ.
ಕೂಡಲೆ ಪೊಲೀಸರು ಪ್ರಕಾಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಸಂಗತಿ ಬಯಲಾಗಿದೆ. ಜಗಳದ ವೇಳೆ ಕೋಪದಲ್ಲಾದ ಎಡವಟ್ಟು ಎಂದು ಪೊಲೀಸರ ಎದರು ಪ್ರಕಾಶ್ ಹೇಳಿದ್ದಾನೆ. ಬಸವೇಶ್ವರ ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:30 am, Sun, 10 March 24