AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಅಪಘಾತ ಮಾಡಿ ಕಾರಿನಲ್ಲಿ ಬೈಕ್ ಸವಾರನನ್ನು 30ಕಿ.ಮೀ ಎಳೆದೊಯ್ದ ಸರ್ಕಾರಿ ನೌಕರ

ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿದೆ, ಸರ್ಕಾರಿ ನೌಕರರೊಬ್ಬರು ಬೈಕ್​ಗೆ ಡಿಕ್ಕಿ ಹೊಡೆದು ಬೈಕ್ ಸವಾರನನ್ನು ಕಾರಿನಲ್ಲಿ 30 ಕಿ.ಮೀ ಎಳೆದೊಯ್ದಿರುವ ಘಟನೆ ನಡೆದಿದೆ. ಪಯಾಗ್​ಪುರ್ ಪೊಲಿಸ್ ಠಾಣೆ ವ್ಯಾಪ್ತಿಯ ಕೃಷ್ಣ ನಗರ ಕಾಲೊನಿಯಲ್ಲಿ ಹಲ್ದಾರ್ ವಾಸವಾಗಿದ್ದರು. ಆದರೆ ಅಪಘಾತವಾಗಿರುವ ಬಗ್ಗೆ ತಿಳಿಯದೇ ಇರುವುದು ಆಶ್ಚರ್ಯ ಮೂಡಿಸಿದೆ. ಟೋಲ್ ಪ್ಲಾಜಾ ಸೇರದಂತೆ ಎಲ್ಲೆಡೆ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಲಾಗುತ್ತಿದೆ. ಎಫ್​ಐಆರ್ ದಾಖಲಿಸಲಾಗಿದೆ.

ಉತ್ತರ ಪ್ರದೇಶ: ಅಪಘಾತ ಮಾಡಿ ಕಾರಿನಲ್ಲಿ ಬೈಕ್ ಸವಾರನನ್ನು 30ಕಿ.ಮೀ ಎಳೆದೊಯ್ದ ಸರ್ಕಾರಿ ನೌಕರ
ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on: Dec 21, 2024 | 11:17 AM

Share

ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಸರ್ಕಾರಿ ನೌಕರರೊಬ್ಬರು ಕಾರಿನಲ್ಲಿ 30 ಕಿ.ಮೀ ಎಳದೊಯ್ದ ಘಟನೆ ಉತ್ತರ ಪ್ರದೇಶದ ಬಹ್ರೈಚ್​ನಲ್ಲಿ ನಡೆದಿದೆ. ಅವರು ತಮ್ಮ ಕಚೇರಿಗೆ ತಲುಪಿದಾಗ ಅಲ್ಲಿದ್ದವರು ಅವರ ಕಾರಿನೆದುರು ಶವವನ್ನು ಕಂಡಿದ್ದಾರೆ, ಆದರೆ ಆ ವ್ಯಕ್ತಿ ಮಾತ್ರ ತನಗೆ ಇದ್ಯಾವುದೂ ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾರೆ. ಅಪಘಾತ ನಡೆದ ಸ್ಥಳದಿಂದ 30 ಕಿ.ಮೀ ದೂರದಲ್ಲಿರುವ ತಹಸಿಲ್​ ಕಚೇರಿಗೆ ವಾಹನ ತಲುಪಿದಾಗ ಕಾರಿನ ಕೆಳಗೆ ನರೇಂದ್ರ ಕುಮಾರ್ ಹಲ್ದಾರ್ ಎಂದು ಗುರುತಿಸಲಾದ ವ್ಯಕ್ತಿಯ ಶವ ಇತ್ತು. ಚಾಲಕ ಕಾರನ್ನು ರಿವರ್ಸ್​ ತೆಗೆಯುವಾಗ ಶವ ಕಂಡಿದೆ.

ಸರ್ಕಾರಿ ವಾಹನದಲ್ಲಿದ್ದಾಗಲೇ ಅಪಘಾತ ಮಾಡಿದ್ದು, ನಾಯಬ್ ತಹಸೀಲ್ದಾರ್​ನನ್ನು ಕೆಲಸದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಕಚೇರಿಯ ಕೆಲಸಗಳಿಗಾಗಿ ನಾಯಬ್ ತಹಸೀಲ್ದಾರ್ ಶೈಲೇಶ್ ಕುಮಾರ್ ಅವಸ್ಥಿ ಸರ್ಕಾರಿ ಕಾರು ತೆಗೆದುಕೊಂಡು ಹೋಗಿದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ಹೇಳಿದ್ದಾರೆ.

ಆದರೆ ಅಪಘಾತವಾಗಿದ್ದಾಗಲೀ ಶವ ಕಾರಿನ ಕೆಳಗೆ ಹೇಗೆ ಬಂತು ಎಂಬುದರ ಕುರಿತು ಯಾವುದೇ ಮಾಹಿತಿ ಶೈಲೇಶ್​ಗೆ ಇಲ್ಲ. ಗುರುವಾರ ಅಪಘಾತವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು, ಆದರೆ ಪೊಲೀಸರು ಅಲ್ಲಿಗೆ ಹೋದಾಗ ಸ್ಥಳದಲ್ಲಿ ಬೈಕ್ ಹಾಗೂ ಚಪ್ಪಲಿ ಮಾತ್ರ ಇತ್ತು ವ್ಯಕ್ತಿ ಕಂಡುಬರಲಿಲ್ಲ.

ಮತ್ತಷ್ಟು ಓದಿ: Video: ಸಣ್ಣ ವಿವಾದ, ಬೈಕ್ ಸವಾರನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಚಾಲಕ

ಪೊಲೀಸರ ತಂಡವು ರಸ್ತೆಯಲ್ಲಿ ರಕ್ತದ ಗುರುತುಗಳನ್ನು ಕಂಡುಕೊಂಡರು, ವಾಹನದ ಕೆಳಗೆ ಶವ ಸಿಲುಕಿರಬಹುದು ಎಂದು ಅಂದಾಜಿಸಿದರು. ಅಕ್ಕಪಕ್ಕದಲ್ಲಿರುವ ಎಲ್ಲಾ ಪೊಲೀಸ್​ ಠಾಣೆಗಳಿಗೂ ಮಾಹಿತಿ ನೀಡಲಾಯಿತು.

ಪಯಾಗ್​ಪುರ್ ಪೊಲಿಸ್ ಠಾಣೆ ವ್ಯಾಪ್ತಿಯ ಕೃಷ್ಣ ನಗರ ಕಾಲೊನಿಯಲ್ಲಿ ಹಲ್ದಾರ್ ವಾಸವಾಗಿದ್ದರು. ಆದರೆ ಅಪಘಾತವಾಗಿರುವ ಬಗ್ಗೆ ತಿಳಿಯದೇ ಇರುವುದು ಆಶ್ಚರ್ಯ ಮೂಡಿಸಿದೆ. ಟೋಲ್ ಪ್ಲಾಜಾ ಸೇರದಂತೆ ಎಲ್ಲೆಡೆ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಲಾಗುತ್ತಿದೆ. ಎಫ್​ಐಆರ್ ದಾಖಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ