ಸ್ನೇಹವೆಂದರೆ ಕೇವಲ ಖುಷಿಯಲ್ಲಿ ಮಾತ್ರ ಜತೆಗಿರುವುದಲ್ಲ ದುಃಖದಲ್ಲೂ ಜತೆಗಿರಬೇಕು ಆಗ ಮಾತ್ರ ನಿಜವಾದ ಸ್ನೇಹವೆನಿಸಿಕೊಳ್ಳುವುದು ಎಂದು ಹೇಳುವುದುಂಟು. ಆದರೆ ಈ ಸ್ನೇಹಿತ ದುಃಖದಲ್ಲಿ ಮಾತ್ರವಲ್ಲ ಸಾವಿನಲ್ಲೂ ಜತೆಯಾಗಿದ್ದಾರೆ. ವ್ಯಕ್ತಿಯೊಬ್ಬ ಕ್ಯಾನ್ಸರ್ನಿಂದಾಗಿ ಮೃತಪಟ್ಟಿದ್ದರು. ಯಮುನಾ ನದಿಯ ತಟದಲ್ಲಿ ಅಂತ್ಯಕ್ರಿಯೆ ನೆರವೇರುತ್ತಿತ್ತು. ಆ ಸಂದರ್ಭದಲ್ಲಿ ದುಃಖ ತಾಳಲಾರದೆ ಅವರ ಸ್ನೇಹಿತ ಕೂಡ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಶೋಕ್(42) ಕ್ಯಾನ್ಸರ್ನಿಂದ ಬಳಲುತ್ತಿದ್ದು, ಕ್ಯಾನ್ಸರ್ನಿಂದಾಗಿ ಶನಿವಾರ ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 11 ಗಂಟೆಯ ಸಮಯದಲ್ಲಿ ಯಮುನಾ ನದಿ ಬಳಿ ಅಂತ್ಯಕ್ರಿಯೆ ನೆರವೇರುತ್ತಿತ್ತು.
ಮತ್ತಷ್ಟು ಓದಿ: Bengaluru News: ಪಿಜಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ
ಆಗ ಮೃತನ ಸ್ನೇಹಿತ ಆನಂದ್(40) ಆಗಮಿಸಿದ್ದರು, ಜನರು ಅಂತ್ಯಕ್ರಿಯೆ ಮಾಡಿದ ಜಾಗದಿಂದ ಹೋಗುತ್ತಿರುವಾಗ ಆತ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಆಗ್ರಾ ಮೆಡಿಕಲ್ ಕಾಲೇಜಿಗೆ ರವಾನಿಸಲಾಯಿತಾದರೂ , ಸುಟ್ಟಗಾಯಗಳು ಹೆಚ್ಚಾಗಿದ್ದರಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ