
ನವದೆಹಲಿ, ಡಿಸೆಂಬರ್ 5: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಯನ್ನು ಪ್ರೀತಿಸಲು ಆರಂಭಿಸಿದ. ಅವರಿಬ್ಬರೂ ಮದುವೆಯಾಗಲು ಕೂಡ ನಿರ್ಧರಿಸಿದ್ದರು. ದಿನಾಂಕವೂ ನಿಗದಿಯಾಗಿತ್ತು. ಮದುವೆಯ (Wedding) ಮುಂಚಿನ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡವು. ಯುವಕನಿಗೆ ಅರಿಶಿನ ಶಾಸ್ತ್ರ ನಡೆಸಿ, ಆತನನ್ನು ಕುದುರೆಯ ಮೇಲೆ ಮದುವೆ ಮಂಟಪಕ್ಕೆ ಕರೆತರಲಾಗಿತ್ತು. ಆದರೆ ಮದುವೆಯ ದಿನವೇ ಆ ವಧು ಯುವಕನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಿದಳು.
ಮದುವೆ ಮಂಟಪದಲ್ಲಿ ಆ ವರ ಯುವತಿಗೆ ಫೋನ್ ಮಾಡುತ್ತಲೇ ಇದ್ದ. ಆದರೆ, ಅವಳು ಫೋನ್ ರಿಸೀವ್ ಮಾಡಲೇ ಇಲ್ಲ. ಇದರಿಂದಾಗಿ ಅವನು ಮದುವೆ ಮೆರವಣಿಗೆಯೊಂದಿಗೆ ವಾಪಾಸ್ ಬರಬೇಕಾಯಿತು. ಈ ಮೋಸದಿಂದಾಗಿ ಆತ ಆಘಾತಕ್ಕೊಳಗಾದನು. ಈ ವಿಷಯವು ಇಡೀ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ.
ಇದನ್ನೂ ಓದಿ: Video: ಮದುವೆಯಲ್ಲಿ ರಸಗುಲ್ಲಾ ಸಿಗಲಿಲ್ಲವೆಂದು ಕುರ್ಚಿಗಳ ಮುರಿದು ವರನ ಕಡೆಯವರಿಂದ ರಾದ್ಧಾಂತ
ಉತ್ತರ ಪ್ರದೇಶದ ಸಹರಾನ್‌ಪುರದ ಬದ್ಗಾಂವ್ ಪ್ರದೇಶದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಬರೇಲಿಯ ಹುಡುಗಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಕೆಲವೇ ದಿನಗಳಲ್ಲಿ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಡಿಸೆಂಬರ್ 2ರಂದು ಫೋನ್ ಮೂಲಕವೇ ಇಬ್ಬರ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು.
ಆ ಯುವಕನ ಕುಟುಂಬವು ಉತ್ಸಾಹದಿಂದ ಮದುವೆಗೆ ಸಿದ್ಧತೆ ನಡೆಸಿತು. ಆಹ್ವಾನ ಪತ್ರಿಕೆ ಬಂದ ಕೂಡಲೇ ಸಂಬಂಧಿಕರು ಮನೆಯಲ್ಲಿ ಜಮಾಯಿಸಿದರು. ಯುವಕನಿಗೆ ಅರಿಶಿನ ಮತ್ತು ಎಣ್ಣೆಯನ್ನು ಸಹ ಹಚ್ಚಲಾಯಿತು. ಯುವಕ ಪೇಟ ಕಟ್ಟುವ ಮೂಲಕ ವರನಾದನು. ಕುದುರೆಯಲ್ಲಿ ಅವರು ವಾದ್ಯವೃಂದದೊಂದಿಗೆ 350 ಕಿ.ಮೀ ದೂರದಲ್ಲಿರುವ ಮಂಟಪಕ್ಕೆ ಬಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ವರ, ಭುವನೇಶ್ವರದಲ್ಲಿ ವಧು: ಇಂಡಿಗೋ ವಿಮಾನದಿಂದ ಮದುವೆಗೆ ವಿಘ್ನದ ಆತಂಕ
ಆದರೆ, ಅಲ್ಲಿಗೆ ವಧು ಬರಲೇ ಇಲ್ಲ. ಅವನು ತನ್ನ ವಧುವಿಗೆ ಮದುವೆ ಮನೆಯಿಂದ ಕರೆ ಮಾಡಿದಾಗ, ಅವಳು ಫೋನ್ ಕಟ್ ಮಾಡಿದಳು. ನಂತರ ವಧುವಿನ ಫೋನ್ ಸ್ವಿಚ್ ಆಫ್ ಆಯಿತು. ಹಲವು ಗಂಟೆಗಳ ಕಾಲ ಕಾದರೂ ವರನಿಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದ್ದರಿಂದ ಅವನು ಮದುವೆ ಮೆರವಣಿಗೆಯೊಂದಿಗೆ ಹಿಂತಿರುಗಬೇಕಾಯಿತು.
5 ದಿನಗಳ ಹಿಂದೆ, ವರದಕ್ಷಿಣೆಯಾಗಿ ಕಾರು ಕೊಡಿಸುವುದಾಗಿ ಮಹಿಳೆ ನೀಡಿದ ಭರವಸೆಯ ಮೇರೆಗೆ, ಆ ಯುವಕ ತನ್ನ ಸ್ನೇಹಿತರೊಂದಿಗೆ ಸಹರಾನ್‌ಪುರದ ಶೋ ರೂಂಗೆ ಹೋಗಿದ್ದನು. ಅಲ್ಲಿ ಅವನು ಬ್ರೆಝಾ ಕಾರನ್ನು ಆರಿಸಿಕೊಂಡಿದ್ದ. ಕಾರು ಸಿಕ್ಕರೂ ಆತನಿಗೆ ವಧು ಸಿಗಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ