Uttar Pradesh: ಮದುವೆಯ ಮರುದಿನವೇ ನವವಿವಾಹಿತರು ಶವವಾಗಿ ಪತ್ತೆ

|

Updated on: Jun 04, 2023 | 3:13 PM

ಮದುವೆ ದಿನ ರಾತ್ರಿಯೇ ನವ ವಿವಾಹಿತರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್​ನಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಧು-ವರರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದರೂ, ಇಬ್ಬರ ಸಾವಿನಲ್ಲೂ ನಿಗೂಢತೆ ಅಡಗಿದೆ.

Uttar Pradesh: ಮದುವೆಯ ಮರುದಿನವೇ ನವವಿವಾಹಿತರು ಶವವಾಗಿ ಪತ್ತೆ
ಮದುವೆ
Follow us on

ಮದುವೆ ದಿನ ರಾತ್ರಿಯೇ ನವ ವಿವಾಹಿತರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್​ನಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಧು-ವರರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದರೂ, ಇಬ್ಬರ ಸಾವಿನಲ್ಲೂ ನಿಗೂಢತೆ ಅಡಗಿದೆ.
ಇಬ್ಬರಿಗೂ ಒಂದೇ ಸಮಯದಲ್ಲಿ ಹೃದಯಾಘಾತವಾಗಿದೆ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. 22 ವರ್ಷದ ಪ್ರತಾಪ್ ಯಾದವ್ 20 ವರ್ಷದ ಪುಷ್ಪಾ ಎಂಬುವವರನ್ನು ಮೇ 30 ರಂದು ಮದುವೆಯಾಗಿದ್ದರು. ಮದುವೆ ಎಲ್ಲಾ ಕಾರ್ಯಗಳು ಮುಗಿದ ಬಳಿಕ ವಧು-ವರ ಕೋಣೆಗೆ ಹೋಗಿದ್ದರು, ಮರುದಿನ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಪತಿ-ಪತ್ನಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಎಸ್ಪಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.

ಮತ್ತಷ್ಟು ಓದಿ: Raichur News: ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವು; ಕಂಬದ ಮೇಲೆಯೇ ನೇತಾಡಿದ ಮೃತದೇಹ
ನವದಂಪತಿಗಳಾದ ಪ್ರತಾಪ್ ಮತ್ತು ಪುಷ್ಪಾ ಅವರ ಅಂತ್ಯಕ್ರಿಯೆಯನ್ನು ಪ್ರತಾಪ್ ಅವರ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಅದೇ ಚಿತಾಗಾರದಲ್ಲಿ ನೆರವೇರಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:12 pm, Sun, 4 June 23