AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಯ್ಡಾ: ಟೆಲಿಗ್ರಾಮ್ ಸ್ನೇಹಿತನ ಜತೆಗಿನ ಮದುವೆಗೆ ಪೋಷಕರಿಂದ ಆಕ್ಷೇಪ; 2ನೇ ಮಹಡಿಯಿಂದ ಜಿಗಿದ ಮಹಿಳೆ

ಬುಧವಾರ ಮಹಿಳೆಯ ಮನೆಯವರು ಬಾಲಕಿಯ ಫೋನ್ ಕಸಿದುಕೊಂಡಿದ್ದು, ಇದರಿಂದ ಕೋಪಗೊಂಡ ಆಕೆ ಎರಡನೇ ಮಹಡಿಯಲ್ಲಿರುವ ಫ್ಲಾಟ್‌ನಿಂದ ಕೆಳಗೆ ಜಿಗಿದಿದ್ದಾಳೆ. ಆಕೆಗೆ ಗಾಯಗಳಾಗಿದ್ದು, ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಯ್ಡಾ: ಟೆಲಿಗ್ರಾಮ್ ಸ್ನೇಹಿತನ ಜತೆಗಿನ ಮದುವೆಗೆ ಪೋಷಕರಿಂದ ಆಕ್ಷೇಪ; 2ನೇ ಮಹಡಿಯಿಂದ ಜಿಗಿದ ಮಹಿಳೆ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Jul 12, 2023 | 8:18 PM

Share

ನೋಯ್ಡಾ: ಟೆಲಿಗ್ರಾಮ್‌ನಲ್ಲಿ (Telegram) ಪರಿಚಯವಾಗಿ ಸ್ನೇಹ ಬೆಳೆಸಿದ ವ್ಯಕ್ತಿಯೊಂದಿಗೆ ಮದುವೆ ಬೇಡ ಎಂದು ಹೆತ್ತವರು ವಿರೋಧಿಸಿದ್ದಕ್ಕೆ 24 ವರ್ಷದ ಮಹಿಳೆ ನೋಯ್ಡಾದಲ್ಲಿ (Noida)ತನ್ನ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಿಂದ ಜಿಗಿದ ಘಟನೆ ವರದಿ ಆಗಿದೆ. ಗಾಯಗೊಂಡಿರುವ ಈಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಕ್ಟರ್ 121ರ ಅಜ್ನಾರಾ ಹೋಮ್ಸ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಮಹಿಳೆ ಎಂಬಿಎ ವಿದ್ಯಾರ್ಥಿನಿಯಾಗಿದ್ದು, ಆಕೆ ಮದುವೆಯಾಗಲು ಬಯಸಿದ್ದ ವ್ಯಕ್ತಿಗೆ 23 ವರ್ಷ ವಯಸ್ಸು. ಈಕೆ ಪಶ್ಚಿಮ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ನಿವಾಸಿಯಾಗಿದ್ದಾಳೆ.

“ಮಹಿಳೆ ಮತ್ತು ಆಕೆ ಮದುವೆಯಾಗಲು ಬಯಸಿದ ವ್ಯಕ್ತಿ ಟೆಲಿಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಮಹಿಳೆಯ ಕುಟುಂಬ ಸದಸ್ಯರಿಗೆ ಅವರ ಪ್ರೇಮದ ಬಗ್ಗೆ ತಿಳಿದಾಗ, ಅವರು ಈ ಸಂಬಂಧವನ್ನು ವಿರೋಧಿಸಿದರು. ಈ ಮಹಿಳೆಯು ಆಕೆಯ ಪ್ರಿಯಕರನ್ನು ಮದುವೆಯಾಗಲು ಬಯಸುತ್ತಾಳೆ ಆದರೆ ಅವಳ ಕುಟುಂಬ ಸದಸ್ಯರು ಅದನ್ನು ಒಪ್ಪುತ್ತಿಲ್ಲ ಎಂದುಅಧಿಕಾರಿ ಹೇಳಿದ್ದಾರೆ.

ಬುಧವಾರ ಮಹಿಳೆಯ ಮನೆಯವರು ಬಾಲಕಿಯ ಫೋನ್ ಕಸಿದುಕೊಂಡಿದ್ದು, ಇದರಿಂದ ಕೋಪಗೊಂಡ ಆಕೆ ಎರಡನೇ ಮಹಡಿಯಲ್ಲಿರುವ ಫ್ಲಾಟ್‌ನಿಂದ ಕೆಳಗೆ ಜಿಗಿದಿದ್ದಾಳೆ. ಆಕೆಗೆ ಗಾಯಗಳಾಗಿದ್ದು, ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಬ್​​ಜಿ ಮೂಲಕ ನೋಯ್ಡಾ ವ್ಯಕ್ತಿ ಜತೆ ಸ್ನೇಹ; ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕಿಸ್ತಾನದ ಮಹಿಳೆ

ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:15 pm, Wed, 12 July 23