ಉತ್ತರ ಪ್ರದೇಶ: ಶಾಲೆಯಲ್ಲಿ ಇಸ್ಲಾಮಿಕ್​ ಪ್ರಾರ್ಥನೆಗೆ ಪೋಷಕರಿಂದ ವಿರೋಧ

| Updated By: ವಿವೇಕ ಬಿರಾದಾರ

Updated on: Aug 01, 2022 | 3:21 PM

ಶಾಲೆಯಲ್ಲಿ ಮಕ್ಕಳಿಂದ ಇಸ್ಲಾಮಿಕ್ ಪ್ರಾರ್ಥನೆ  ಹೇಳಿಸುತ್ತಿದ್ದಾರೆಂದು ಪೋಷಕರು ವಿರೋಧ ವ್ಯಕ್ತಪಡಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಶಾಲೆಯೊಂದರಲ್ಲಿ ನಡೆದಿದೆ.

ಉತ್ತರ ಪ್ರದೇಶ: ಶಾಲೆಯಲ್ಲಿ ಇಸ್ಲಾಮಿಕ್​ ಪ್ರಾರ್ಥನೆಗೆ ಪೋಷಕರಿಂದ ವಿರೋಧ
ಉತ್ತರ ಪ್ರದೇಶದ ಶಾಲೆಯಲ್ಲಿ ಪ್ರಾರ್ಥನೆ ಹೇಳುತ್ತಿರುವ ಮಕ್ಕಳು
Follow us on

ಉತ್ತರ ಪ್ರದೇಶ: ಶಾಲೆಯಲ್ಲಿ ಮಕ್ಕಳಿಂದ ಇಸ್ಲಾಮಿಕ್ ಪ್ರಾರ್ಥನೆ  ಹೇಳಿಸುತ್ತಿದ್ದಾರೆಂದು ಪೋಷಕರು ವಿರೋಧ ವ್ಯಕ್ತಪಡಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದ (Kanpur) ಶಾಲೆಯೊಂದರಲ್ಲಿ ನಡೆದಿದೆ. ಕಾನ್ಪುರದ ಸಿಸಾಮೌ ಪ್ರದೇಶದ ಫ್ಲೋರೆಟ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಪ್ರಾರ್ಥನೆಯ  (Prayer) ಸಮಯದಲ್ಲಿ ಮಕ್ಕಳಿಗೆ ಇಸ್ಲಾಮಿಕ್​ ಪ್ರಾರ್ಥನೆ ಕಲಿಸಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಯಲ್ಲಿ ಇಸ್ಲಾಮಿಕ್ ಪ್ರಾರ್ಥನೆ ನಡೆಸುತ್ತಿರುವುದಕ್ಕೆ ಪೋಷಕರು ಗಲಾಟೆ ತೆಗೆದಿದ್ದಾರೆ.

ಮಕ್ಕಳು ಪ್ರಾರ್ಥನೆ ಮಾಡದಿದ್ದಕ್ಕೆ ಬೈಯುತ್ತಾರೆ. ಶಾಲೆಯಲ್ಲಿ ಕಲ್ಮಶ ವಾತಾವರಣ ಸೃಷ್ಟಿಸುತ್ತಿದ್ದಾರೆಂದು ಪೋಷಕರು ಕಿಡಿ ಕಾರಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಲೆ ಆಡಳಿತ ಮಂಡಳಿ ಇಸ್ಲಾಮಿಕ್ ಪ್ರಾರ್ಥನೆಯನ್ನು ಪೋಷಕರು ವಿರೋಧಿಸಿದ್ದರಿಂದ ನಾವು ಅದನ್ನ ನಿಲ್ಲಿಸಿ ರಾಷ್ಟ್ರಗೀತೆ ಮಾತ್ರ ಹಾಡಿಸುತ್ತೇವೆ ಎಂದು ಸಮಸ್ಯೆ ಬಗೆಹರಿಸಿದ್ದಾರೆ ಎಂದು ಫ್ಲೋರೆಟ್ಸ್ ಇಂಟರ್‌ನ್ಯಾಶನಲ್ ಸ್ಕೂಲ್​ನಿಂದ ಮಾಹಿತಿ ದೊರೆತಿದೆ.

Published On - 3:19 pm, Mon, 1 August 22