ಉತ್ತರ ಪ್ರದೇಶ: ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ್ದ ತಂದೆ ಮಗನ ಬಂಧನ

|

Updated on: Sep 29, 2023 | 9:18 AM

ಉತ್ತರ ಪ್ರದೇಶದ ಮೊರಾದಾಬಾದ್‌ನ ಮನೆಯೊಂದರಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿದ್ದು, ಆ ಪ್ರದೇಶದಲ್ಲಿ ಕೋಲಾಹಲ ಉಂಟಾಗಿತ್ತು. ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು, ನಂತರ ಪೊಲೀಸರು ಸ್ಥಳಕ್ಕಾಗಮಿಸಿ, ಮನೆಯಲ್ಲಿದ್ದ ಪಾಕಿಸ್ತಾನಿ ಧ್ವಜವನ್ನು ತೆಗೆದುಹಾಕಿದ್ದಾರೆ ಮತ್ತು ಅವರ ಮನೆಯಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ್ದ ರಯೀಸ್ ಮತ್ತು ಅವರ ಮಗ ಸಲ್ಮಾನ್ ಅವರನ್ನು ಬಂಧಿಸಿದ್ದಾರೆ. ಈ ಕೃತ್ಯದ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿಯಲು ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶ: ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ್ದ ತಂದೆ ಮಗನ ಬಂಧನ
ಪಾಕಿಸ್ತಾನದ ಧ್ವಜ
Image Credit source: India TV
Follow us on

ಉತ್ತರ ಪ್ರದೇಶದ ಮೊರಾದಾಬಾದ್‌ನ ಮನೆಯೊಂದರಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿದ್ದು, ಆ ಪ್ರದೇಶದಲ್ಲಿ ಕೋಲಾಹಲ ಉಂಟಾಗಿತ್ತು. ಜನರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು, ನಂತರ ಪೊಲೀಸರು ಸ್ಥಳಕ್ಕಾಗಮಿಸಿ, ಮನೆಯಲ್ಲಿದ್ದ ಪಾಕಿಸ್ತಾನಿ ಧ್ವಜವನ್ನು ತೆಗೆದುಹಾಕಿದ್ದಾರೆ ಮತ್ತು ಅವರ ಮನೆಯಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ್ದ ರಯೀಸ್ ಮತ್ತು ಅವರ ಮಗ ಸಲ್ಮಾನ್ ಅವರನ್ನು ಬಂಧಿಸಿದ್ದಾರೆ. ಈ ಕೃತ್ಯದ ಹಿಂದಿನ ಉದ್ದೇಶವೇನು ಎಂಬುದನ್ನು ತಿಳಿಯಲು ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ.

ಮೊರಾದಾಬಾದ್‌ನ ಭಗತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬುರ್ಹಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಭಗತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬುರ್ಹಾನ್‌ಪುರ ಗ್ರಾಮದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ರಯೀಸ್ ಮತ್ತು ಅವರ ಪುತ್ರ ಸಲ್ಮಾನ್, ಬಿಳಿ ಮತ್ತು ಹಸಿರು ಬಟ್ಟೆಯಿಂದ ಪಾಕಿಸ್ತಾನಿ ಧ್ವಜವನ್ನು ತಯಾರಿಸಿ ಮನೆಯ ಮೇಲ್ಛಾವಣಿಯ ಮೇಲೆ ಹಾಕಿದ್ದರು.

ಈ ಧ್ವಜವನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಲ್ಛಾವಣಿಯ ಮೇಲೆ ಪಾಕಿಸ್ತಾನದ ಧ್ವಜವನ್ನು ಸ್ಥಾಪಿಸಿರುವುದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು ಮತ್ತು ಯಾರೋ ಒಬ್ಬರು ಪಾಕಿಸ್ತಾನಿ ಧ್ವಜದ ವೀಡಿಯೊವನ್ನು ಮಾಡಿದ್ದಾರೆ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ, ನಂತರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತಲುಪಿದರು.

ಮತ್ತಷ್ಟು ಓದಿ: ಟ್ಯಾಂಕರ್​​ ಬಿಟ್ಟು ಟ್ರ್ಯಾಕ್ಟರ್​​ ಏರಿದ ಪಾಕ್​​ ಸೈನಿಕರು! ಸ್ವತಃ ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನೆ: ಜನರಲ್ಲಿ ಭಯ, ಆತಂಕ!

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಮನೆಯಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ, ರಯೀಸ್ ಹಾಗೂ ಆತನ ಪುತ್ರ ಸಲ್ಮಾನ್ ನನ್ನು ಬಂಧಿಸಲಾಯಿತು.

ಈ ಪ್ರಕರಣದಲ್ಲಿ ಅವರ ವಿರುದ್ಧ ಭಗತ್‌ಪುರ ಪೊಲೀಸ್ ಠಾಣೆಯಲ್ಲಿ ಕಲಂ 153 ಎ ಮತ್ತು 153 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇಬ್ಬರೂ ಆರೋಪಿಗಳನ್ನು ಅವರ ಮನೆಯಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾಕಲು ಕಾರಣವನ್ನು ಕೇಳಿದಾಗ ಯಾವುದೇ ಉತ್ತರವನ್ನು ನೀಡಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ