ಟ್ಯಾಂಕರ್​​ ಬಿಟ್ಟು ಟ್ರ್ಯಾಕ್ಟರ್​​ ಏರಿದ ಪಾಕ್​​ ಸೈನಿಕರು! ಸ್ವತಃ ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನೆ: ಜನರಲ್ಲಿ ಭಯ, ಆತಂಕ!

ಟ್ಯಾಂಕರ್​​ ಬಿಟ್ಟು ಟ್ರ್ಯಾಕ್ಟರ್​​ ಏರಿದ ಪಾಕ್​​ ಸೈನಿಕರು! ಸ್ವತಃ ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನೆ: ಜನರಲ್ಲಿ ಭಯ, ಆತಂಕ!

ಸಾಧು ಶ್ರೀನಾಥ್​
|

Updated on: Sep 28, 2023 | 11:49 AM

Pakistan Army: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಇದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ದೇಶವನ್ನು ಬಲಪಡಿಸುವ ಸಲುವಾಗಿ, ಪಾಕಿಸ್ತಾನ ಸೇನೆಯು ಕೃಷಿ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ಮಾಧ್ಯಮ ಕಂಪನಿ ನಿಕ್ಕಿ ಏಷ್ಯಾ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸೇನೆಯು 10 ಲಕ್ಷ ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದೆ.

ಪಾಕಿಸ್ತಾನದ ಆರ್ಥಿಕತೆ ಬಿಕ್ಕಟ್ಟಿಗೆ ಸಿಲುಕಿಗೆ ಯಾವುದಫ ಕಾಲವಾಗಿದೆ. ಇದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ತಾಜಾ ಬೆಳವಣಿಗೆಯಲ್ಲಿ ಅಕ್ಷರಶಃ ಇಡೀ ದೇಶವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ಸೇನೆ (Pakistan Army) ಕೃಷಿ ಕ್ಷೇತ್ರಕ್ಕೆ (Agriculture) ಕಾಲಿಟ್ಟಿದೆ. ಮಾಧ್ಯಮ ಸಂಸ್ಥೆ ನಿಕ್ಕಿ ಏಷ್ಯಾ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ 10 ಲಕ್ಷ ಎಕರೆ ಸರ್ಕಾರಿ ಭೂಮಿಯನ್ನು ಸೇನೆ ಸ್ವಾಧೀನಪಡಿಸಿಕೊಳ್ಳಲು ಹೊರಟಿದೆ. ಇಲ್ಲಿ ಗೋಧಿ, ಹತ್ತಿ, ಕಬ್ಬು, ತರಕಾರಿಗಳು ಮತ್ತು ಹಣ್ಣುಗಳನ್ನು (Food) ಸೇನೆ ಬೆಳೆಸುತ್ತದೆ.

ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಇದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ದೇಶವನ್ನು ಬಲಪಡಿಸುವ ಸಲುವಾಗಿ, ಪಾಕಿಸ್ತಾನ ಸೇನೆಯು ಕೃಷಿ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ಮಾಧ್ಯಮ ಕಂಪನಿ ನಿಕ್ಕಿ ಏಷ್ಯಾ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸೇನೆಯು 10 ಲಕ್ಷ ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದೆ. ಇಲ್ಲಿ ಗೋಧಿ, ಹತ್ತಿ, ಕಬ್ಬು, ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಸಲಾಗುತ್ತದೆಯಂತೆ.

ಇವುಗಳ ಮಾರಾಟದಿಂದ ಬರುವ ಲಾಭದಲ್ಲಿ ಶೇ. 20 ರಷ್ಟು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿಡಲಾಗಿದೆ. ಉಳಿದ ಹಣವನ್ನು ಸೇನೆ ಮತ್ತು ರಾಜ್ಯ ಸರ್ಕಾರ ಸಮನಾಗಿ ಹಂಚಿಕೊಳ್ಳಲಿದೆ. ಬಡವರಿಗೆ ಆಹಾರ ಭದ್ರತೆ ಒದಗಿಸಲು ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸೇನೆ ಹೇಳಿಕೊಂಡಿದೆ. ಆದರೆ, ಸೇನೆಯು ಗ್ರಾಮೀಣ ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂಬ ಟೀಕೆಗಳಿವೆ. ದೇಶದಲ್ಲಿ ಸುಮಾರು 25 ಮಿಲಿಯನ್ ಜನರು ಬಡವರು ಮತ್ತು ಭೂರಹಿತರಾಗಿರುವ ಈ ಸಮಯದಲ್ಲಿ, ಒಂದಲ್ಲ, ಎರಡಲ್ಲ, ಹತ್ತು ಲಕ್ಷ ಎಕರೆ ಕೃಷಿ ಭೂಮಿ ಸೇನೆಯ ಕೈಗೆ ಹೋಗುತ್ತದೆ ಎಂಬ ಆತಂಕ ಮನೆ ಮಾಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ