Sign In

By signing in or creating an account, you agree with Associated Broadcasting Company's Terms & Conditions and Privacy Policy.

Cauvery Water Dispute: ಡಾ ರಾಜ್ ಅಭಿನಯದ ಬಬ್ರುವಾಹನ ಹಾಡನ್ನು ರೀಮಿಕ್ಸ್ ಮಾಡಿ, ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ

Cauvery Water Dispute: ಡಾ ರಾಜ್ ಅಭಿನಯದ ಬಬ್ರುವಾಹನ ಹಾಡನ್ನು ರೀಮಿಕ್ಸ್ ಮಾಡಿ, ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ

ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on: Sep 28, 2023 | 1:04 PM

ರಾಜ್ಯದಲ್ಲಿ ನಾನಾ ಕಡೆ ನಾನಾ ಕ್ಷೇತ್ರಗಳಲ್ಲಿ ಈಗ ಕಾವೇರಿ ಕಿಚ್ಚು ಜೋರಾಗಿದೆ. ಈ ಸಂದರ್ಭದಲ್ಲಿ ಕಾವೇರಿ ನೀರಿಗಾಗಿ ಕರ್ನಾಟಕದಲ್ಲಿ ನಡೆದಿರುವ ಅವಿರತ, ಅಖಂಡ ಹೋರಾಟಕ್ಕೆ (Cauvery Water Dispute) ವಿಭಿನ್ನವಾಗಿ ಮೈಸೂರು ಮೂಲದ ವೈದ್ಯರೊಬ್ಬರು (Doctor) ಸಾಥ್ ನೀಡಿದ್ದಾರೆ. ರಾಜ್ ಹಾಡಿನ ಸಾಲುಗಳ ರೀ ಮಿಕ್ಸ್ ಮಾಡಿ (Remix Song) ಗಮನ ಸೆಳೆದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮೈಸೂರು, ಸೆಪ್ಟೆಂಬರ್​ 28 : ರಾಜ್ಯದಲ್ಲಿ ನಾನಾ ಕಡೆ ನಾನಾ ಕ್ಷೇತ್ರಗಳಲ್ಲಿ ಈಗ ಕಾವೇರಿ ಕಿಚ್ಚು ಜೋರಾಗಿದೆ. ಈ ಸಂದರ್ಭದಲ್ಲಿ ಕಾವೇರಿ ನೀರಿಗಾಗಿ ಕರ್ನಾಟಕದಲ್ಲಿ ನಡೆದಿರುವ ಅವಿರತ, ಅಖಂಡ ಹೋರಾಟಕ್ಕೆ (Cauvery Water Dispute) ವಿಭಿನ್ನವಾಗಿ ಮೈಸೂರು ಮೂಲದ ವೈದ್ಯರೊಬ್ಬರು (Doctor) ಸಾಥ್ ನೀಡಿದ್ದಾರೆ.

ಬೆಂಗಳೂರಿನ ಕೆಂಗೇರಿಯಲ್ಲಿ ಮೂಳೆ ಮತ್ತು ಕೀಲು ವೈದ್ಯರಾಗಿರುವ ಡಾ ವೆಂಕಟೇಶ್ ಕೆ ಪಿ ಅವರು ಕೆಚ್ಚೆದೆಯ ಕಾವೇರಿ ಹೋರಾಟಕ್ಕೆ ಬೆಂಬಲಿಸಲು ಈ ವಿನೂತನ ಪ್ರಯತ್ನ ಮಾಡಿದ್ದಾರೆ. ಕನ್ನಡಿಗರ ಆರಾಧ್ಯದೈವ ಡಾ ರಾಜ್ ಕುಮಾರ್​ ಅಭಿನಯದ (Dr Rajkumar) ಬಬ್ರುವಾಹನದ ಹಾಡನ್ನು ರೀಮಿಕ್ಸ್ ಮಾಡಿರುವ ವೈದ್ಯ ವೆಂಕಟೇಶ್ ಕೆ ಪಿ ಅವರು ಕರ್ನಾಟಕ ಬಂದ್ ವಿಚಾರ, ಕಾವೇರಿ ವಿವಾದ, ನ್ಯಾಯಮಂಡಳಿಯ ತೀರ್ಪು ಸೇರಿ ಹಲವು ವಿಚಾರಗಳ ರೀ ಮಿಕ್ಸ್ ಮಾಡಿ, ಪ್ರಸ್ತಾಪ ಮಾಡಿದ್ದಾರೆ. ರಾಜ್ ಹಾಡಿನ ಸಾಲುಗಳ ರೀ ಮಿಕ್ಸ್ ಮಾಡಿ (Remix Song) ಗಮನ ಸೆಳೆದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ