ಉತ್ತರಾಖಂಡ: ಕೊಲೆಯಾದ ಯುವತಿಯ ಅಂತ್ಯಸಂಸ್ಕಾರಕ್ಕೆ ಕುಟುಂಬ ನಿರಾಕರಣೆ; ಸರ್ಕಾರದ ಕ್ರಮ ಪ್ರಶ್ನಿಸಿ ಪ್ರತಿಭಟನೆ
ಇದೀಗ ಉಚ್ಛಾಟಿತ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಮತ್ತು ಇತರ ಇಬ್ಬರನ್ನು ಅಪರಾಧಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಇದು ರಾಜ್ಯದಲ್ಲಿ ಭಾರೀ ಪ್ರತಿಭಟನೆಯನ್ನು ಹುಟ್ಟುಹಾಕಿದೆ.
ಉತ್ತರಾಖಂಡದಲ್ಲಿ (Uttarakhand) 19ರ ಹರೆಯದ ರಿಸೆಪ್ಶನಿಸ್ಟ್ ಯುವತಿಯ ಕೊಲೆ ಪ್ರಕರಣದಲ್ಲಿ ಸರ್ಕಾರದ ಕ್ರಮವನ್ನು ಕುಟುಂಬದವರು ಪ್ರಶ್ನಿಸಿದ್ದುತ್ ಆಕೆಯ ದೇಹವನ್ನು ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ. ಅದೇ ವೇಳೆ ಯುವತಿಯ ಸಂಬಂಧಿಕರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಯುವತಿ ಕೆಲಸ ಮಾಡುತ್ತಿದ್ದ ರೆಸಾರ್ಟ್ (Resort) ಅನ್ನು ಕೆಡವಿದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಅವರ ಕುಟುಂಬವು ಬಿಜೆಪಿಯ (BJP)ಹಿರಿಯ ನಾಯಕರೊಬ್ಬರ ಪುತ್ರನನ್ನು ಪ್ರಮುಖ ಆರೋಪಿಯಾಗಿರುವ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಲು ಇದನ್ನು ಮಾಡಲಾಗಿದೆ ಎಂದು ಆರೋಪಿಸಿದೆ. ಅಂತಿಮ ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೆ ಶವವನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ. ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಆಕೆಯ ದೇಹದ ಮೇಲೆ ಗಾಯಗಳಿವೆ ಎಂದು ವರದಿ ಹೇಳಿದೆ. ಇದೀಗ ಅಧಿಕಾರಿಗಳು ಕುಟುಂಬದವರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದು ಮಹಿಳೆಯ ಸಂಬಂಧಿಕರು ಮತ್ತು ಸ್ಥಳೀಯ ನಿವಾಸಿಗಳು ಇಂದು ಶ್ರೀನಗರ-ಕೇದಾರನಾಥ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ ನಡೆದ ಧ್ವಂಸ ಕುರಿತು ಪ್ರತಿಪಕ್ಷವೂ ಪ್ರಶ್ನೆಗಳನ್ನು ಎತ್ತಿದೆ. ಇದು ಯೋಜಿತ ಕೊಲೆ. ಸಾಕ್ಷ್ಯ ನಾಶಪಡಿಸಲು ಇದನ್ನು ಮಾಡಲಾಗಿದೆ ಎಂದು ಜನರು ಶಂಕಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
19 ವರ್ಷದ ಮಹಿಳೆಯನ್ನು ವೇಶ್ಯಾವಾಟಿಕೆಗೆ ತಳ್ಳುವ ಪ್ರಯತ್ನವನ್ನು ವಿರೋಧಿಸಿದ ನಂತರ ಹೋಟೆಲ್ ಮಾಲೀಕ, ಬಿಜೆಪಿ ನಾಯಕನ ಮಗ ಮತ್ತು ಇತರ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ನಿನ್ನೆ ಕಾಲುವೆಯಲ್ಲಿ ಪತ್ತೆಯಾಗಿದೆ.
ಇದೀಗ ಉಚ್ಛಾಟಿತ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಮತ್ತು ಇತರ ಇಬ್ಬರನ್ನು ಅಪರಾಧಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಇದು ರಾಜ್ಯದಲ್ಲಿ ಭಾರೀ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಆರೋಪಿಗಳಿಗೆ ಆಡಳಿತ ಪಕ್ಷದೊಂದಿಗೆ ನಂಟು ಇರುವುದರಿಂದ ಪೊಲೀಸರು ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಎಫ್‌ಐಆರ್ ದಾಖಲು ವಿಳಂಬವನ್ನು ಪ್ರಶ್ನಿಸಿದೆ. ರೆಸಾರ್ಟ್ ಇರುವ ಪ್ರದೇಶ ಸಾಮಾನ್ಯ ಪೊಲೀಸರ ವ್ಯಾಪ್ತಿಗೆ ಬರುವುದಿಲ್ಲ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ಹೇಳಿದ್ದು,ಭೂಕಂದಾಯ ಅಧಿಕಾರಿಗಳು ಎಫ್‌ಐಆರ್ ದಾಖಲಿಸುವ ವ್ಯವಸ್ಥೆ ನಮ್ಮಲ್ಲಿದೆ. ಹಾಗಿ ವಿಳಂಬವಾಯಿತು ಎಂದು ಅವರು ಹೇಳಿದ್ದಾರೆ .
ಆದಾಗ್ಯೂ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ. ಇದು ಅತ್ಯಂತ ಘೋರ ಅಪರಾಧ, ಅಪರಾಧಿ ಯಾರೇ ಆಗಿದ್ದರೂ ಬಿಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
Srinagar, Uttarakhand | A huge crowd of protestors demand justice, blocking the Badrinath-Rishikesh highway in front of the mortuary near the base hospital where #AnkitaBhandari‘s body was taken to; administration attempts to clear the jam. pic.twitter.com/0hSgmR6qlA
— ANI UP/Uttarakhand (@ANINewsUP) September 25, 2022
ಆರೋಪಿಯ ತಂದೆ ವಿನೋದ್ ಆರ್ಯ, ಸಚಿವ ದರ್ಜೆಯ ರಾಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಪದಾಧಿಕಾರಿಯಾಗಿದ್ದ ಅವರ ಸಹೋದರ ಅಂಕಿತ್ ಆರ್ಯ ನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ ಆರ್ಯ, ಪುಲ್ಕಿತ್ ನಮ್ಮೊಂದಿಗೆ ವಾಸಿಸುತ್ತಿಲ್ಲ ಎಂದಿದ್ದಾರೆ.
#WATCH | Rishikesh, Uttarakhand: Women gherao the Police vehicle that was carrying the accused in Ankita Bhandari murder case
The 19-yr-old receptionist went missing a few days ago & her body was found today. 3 accused, incl Pulkit -owner of the resort where she worked- arrested pic.twitter.com/v3IK8zE1xI
— ANI UP/Uttarakhand (@ANINewsUP) September 23, 2022
ಪುಲ್ಕಿತ್ ಆರ್ಯ ಅಲ್ಲದೆ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದ ಫೂಟೇಜ್‌ನಲ್ಲಿ ಯುವತಿ ಕೊನೆಯದಾಗಿ ಮೂವರು ಪುರುಷರೊಂದಿಗೆ ಕಾಣಿಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸ್ಥಳೀಯರು ಆರೋಪಿಗಳನ್ನು ಸಾಗಿಸುತ್ತಿದ್ದ ಪೊಲೀಸ್ ವಾಹನವನ್ನು ಸುತ್ತುವರಿದು ಕಿಟಕಿ ಗಾಜುಗಳನ್ನು ಒಡೆದು ಹಲ್ಲೆ ನಡೆಸಿದ್ದು, ಪೊಲೀಸರು ಆರೋಪಿಗಳನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.