ಉತ್ತರಾಖಂಡ: ನದಿಗೆ ಕಾರು ಉರುಳಿ, ಕರ್ನಾಟಕದ ಇಬ್ಬರು ಸೇರಿ ಒಟ್ಟು 6 ಮಂದಿ ಸಾವು

ನದಿಗೆ ಕಾರು ಉರುಳಿದ ಪರಿಣಾಮ ಕರ್ನಾಟಕದ ಇಬ್ಬರು ಸೇರಿ ಒಟ್ಟು 6 ಮಂದಿ ಪ್ರಾಣಕಳೆದುಕೊಂಡಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಪಿಥೋರಗಢ ಜಿಲ್ಲೆಯ ಲಖನ್​ಪುರ ಬಳಿ ಘಟನೆ ನಡೆದಿದೆ, ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಳಿ ನದಿಗೆ ಬಿದ್ದ ಪರಿಣಾಮ ಬೆಂಗಳೂರಿನ ಇಬ್ಬರು, ತೆಲಂಗಾಣದ ಇಬ್ಬರು ಹಾಗೂ ಉತ್ತರಾಖಂಡದ ಇಬ್ಬರು ಸಾವನ್ನಪ್ಪಿದ್ದಾರೆ.

ಉತ್ತರಾಖಂಡ: ನದಿಗೆ ಕಾರು ಉರುಳಿ, ಕರ್ನಾಟಕದ ಇಬ್ಬರು ಸೇರಿ ಒಟ್ಟು 6 ಮಂದಿ ಸಾವು
ರಸ್ತೆ-ಸಾಂದರ್ಭಿಕ ಚಿತ್ರ
Image Credit source: India Today

Updated on: Oct 25, 2023 | 7:57 AM

ನದಿಗೆ ಕಾರು ಉರುಳಿದ ಪರಿಣಾಮ ಕರ್ನಾಟಕದ ಇಬ್ಬರು ಸೇರಿ ಒಟ್ಟು 6 ಮಂದಿ ಪ್ರಾಣಕಳೆದುಕೊಂಡಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಪಿಥೋರಗಢ ಜಿಲ್ಲೆಯ ಲಖನ್​ಪುರ ಬಳಿ ಘಟನೆ ನಡೆದಿದೆ, ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಳಿ ನದಿಗೆ ಬಿದ್ದ ಪರಿಣಾಮ ಬೆಂಗಳೂರಿನ ಇಬ್ಬರು, ತೆಲಂಗಾಣದ ಇಬ್ಬರು ಹಾಗೂ ಉತ್ತರಾಖಂಡದ ಇಬ್ಬರು ಸಾವನ್ನಪ್ಪಿದ್ದಾರೆ.

ಕೈಲಾಸ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಪಘಾತದಲ್ಲಿ ಜೀವಹಾನಿಯ ಬಗ್ಗೆ ದುಃಖ ಸಂತಾಪ ವ್ಯಕ್ತಪಡಿಸಿದ್ದಾರೆ.

ಕತ್ತಲೆ ಮತ್ತು ಪ್ರತಿಕೂಲ ಭೌಗೋಳಿಕ ಪರಿಸ್ಥಿತಿಯಿಂದಾಗಿ ಮೃತದೇಹಗಳನ್ನು ಹೊರತೆಗೆಯುವ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ ಎಂದು ಎಸ್ಪಿ ಹೇಳಿದರು. ಇಂದು ಬೆಳಗ್ಗೆಯಿಂದ ಶೋಧ ಕಾರ್ಯ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಇನ್ನೊಂದು ಘಟನೆ ಸರಿಸುಮಾರು ಹತ್ತು ದಿನಗಳ ಹಿಂದೆ ನಡೆದಿತ್ತು, ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಚಕ್ರತಾ ಪ್ರದೇಶದಲ್ಲಿ ಮಾರಣಾಂತಿಕ ಅಪಘಾತ ಸಂಭವಿಸಿತ್ತು.

ಮತ್ತಷ್ಟು ಓದಿ: ಬೆಂಗಳೂರು: ಡಿವೈಡರ್​ಗೆ ಡಿಕ್ಕಿ ಹೊಡೆದ ಕಾರು ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಡಿಕ್ಕಿ, ಒಬ್ಬ ಸಾವು

ಹಿಮಾಚಲ ಪ್ರದೇಶದ ಶಿಮ್ಲಾದ ಟಿಕಾರಿ ಗ್ರಾಮದಿಂದ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿದ ಜೀಪ್ ಅಪಘಾತಕ್ಕೀಡಾಗಿತ್ತು. ಮೂವರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜೀಪ್ ನಿಯಂತ್ರಣ ತಪ್ಪಿ ಮುಖ್ಯರಸ್ತೆಯ ಸುಮಾರು 200 ಮೀಟರ್ ಕೆಳಗೆ ಬಿದ್ದಿದೆ. ಪರಿಣಾಮವಾಗಿ, ಜೀಪ್​ನಲ್ಲಿದ್ದವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಮೃತರನ್ನು ಶಿಮ್ಲಾದ ಟಿಕಾರಿ ಗ್ರಾಮದ ರಾಕೇಶ್ ಕುಮಾರ್ (26), ಸುರ್ಜೀತ್ ಸಿಂಗ್ (35), ಮತ್ತು ಶ್ಯಾಮ್ ಸಿಂಗ್ (48) ಎಂದು ಗುರುತಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ