Uttarakhand Flood: ಭಾರತ- ನೇಪಾಳ ಗಡಿಯಲ್ಲಿ ಮೇಘಸ್ಪೋಟ; ಪ್ರವಾಹಕ್ಕೆ ಸಿಲುಕಿ ಓರ್ವ ಸಾವು, 30 ಮನೆಗಳು ನಾಶ

ಮೇಘಸ್ಫೋಟದಿಂದ ಧಾರ್ಚುಲ ಮಲ್ಲಿ ಮಾರುಕಟ್ಟೆಗೂ ಹಾನಿಯಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಈ ನಡುವೆ ತಲ್ಲ ಗ್ರಾಮದಲ್ಲಿ ಜಲಾವೃತವಾಗಿತ್ತು. ಪಿಥೋರಗಢದಲ್ಲಿ ಕಾಳಿ ನದಿ ಅಪಾಯದ ಮಿತಿ ಮೀರಿದೆ.

Uttarakhand Flood: ಭಾರತ- ನೇಪಾಳ ಗಡಿಯಲ್ಲಿ ಮೇಘಸ್ಪೋಟ; ಪ್ರವಾಹಕ್ಕೆ ಸಿಲುಕಿ ಓರ್ವ ಸಾವು, 30 ಮನೆಗಳು ನಾಶ
ಉತ್ತರಾಖಂಡದಲ್ಲಿ ಪ್ರವಾಹ
Updated By: ಸುಷ್ಮಾ ಚಕ್ರೆ

Updated on: Sep 10, 2022 | 3:20 PM

ಉತ್ತರಾಖಂಡ: ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ಭಾರತ (India) ಮತ್ತು ನೇಪಾಳದ (Nepal) ಗಡಿಗೆ ಸಮೀಪವಿರುವ ಲಾಸ್ಕೊ ನದಿಯಲ್ಲಿ ನಿನ್ನೆ ಮಧ್ಯರಾತ್ರಿ ಮೇಘಸ್ಫೋಟ (Cloudburst) ಸಂಭವಿಸಿದೆ. ಈ ಪ್ರವಾಹದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು 30ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಮೋಡ ಸ್ಫೋಟದ ಘಟನೆಯಲ್ಲಿ ಸುಮಾರು 30 ಮನೆಗಳು ನಾಶವಾಗಿವೆ ಮತ್ತು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಆಶಿಶ್ ಚೌಹಾಣ್ ಎಎನ್‌ಐಗೆ ತಿಳಿಸಿದ್ದಾರೆ.

ಮೇಘಸ್ಫೋಟದಿಂದ ಧಾರ್ಚುಲ ಮಲ್ಲಿ ಮಾರುಕಟ್ಟೆಗೂ ಹಾನಿಯಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಈ ನಡುವೆ ತಲ್ಲ ಗ್ರಾಮದಲ್ಲಿ ಜಲಾವೃತವಾಗಿತ್ತು. ಪಿಥೋರಗಢದಲ್ಲಿ ಕಾಳಿ ನದಿ ಅಪಾಯದ ಮಿತಿ ಮೀರಿದೆ. ಪ್ರವಾಹದಿಂದಾಗಿ ಹಲವು ಮನೆಗಳು ಕೊಚ್ಚಿ ಹೋಗಿದ್ದು, ಕೆಲವು ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಇಂದು ಬೆಳಿಗ್ಗೆ ಕಾಳಿ ನದಿಯಲ್ಲಿ ಬಲವಾದ ಪ್ರವಾಹ ಉಂಟಾಗಿ ಕಟ್ಟಡವೊಂದು ಕುಸಿದು ನೀರಿನಲ್ಲಿ ಮುಳುಗಿದೆ.

ಇದನ್ನೂ ಓದಿ: Karnataka Rain: ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಕೆಲವೆಡೆ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ತಂಡಗಳು ಸ್ಥಳದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿವೆ. ಕಾಳಿ ನದಿಯ ಪ್ರವಾಹದಿಂದ ಉಂಟಾದ ಹಾನಿ ಭಾರತ ಮತ್ತು ನೇಪಾಳ ಎರಡೂ ಹಳ್ಳಿಗಳಲ್ಲಿ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಂತರ ಡೆಹ್ರಾಡೂನ್‌ನ ರಾಯ್‌ಪುರದ ಸರ್ಖೆತ್ ಗ್ರಾಮದಲ್ಲಿ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದ್ದಾರೆ. ಮಳೆ ನೀರಿನಲ್ಲಿ ಅನೇಕ ಆಸ್ತಿಗಳು ಕೊಚ್ಚಿಕೊಂಡು ಹೋಗಿವೆ. ಮಳೆ ನೀರು ಹಲವಾರು ಕಟ್ಟಡಗಳಿಗೆ ಪ್ರವೇಶಿಸಿ ಜನರ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಇದನ್ನೂ ಓದಿ: ವೇದಾವತಿ ನದಿ ಪ್ರವಾಹದಲ್ಲಿ ಸಿಲುಕಿದ ಅರ್ಚಕ ಕುಟುಂಬ: ರಕ್ಷಣೆಗೆ ತೆರಳಿದ್ದ ಬೋಟ್ ಪಲ್ಟಿ

ಸಂತ್ರಸ್ತ ಪ್ರದೇಶಗಳಿಗೆ ತಲುಪುವಂತೆ ಎಲ್ಲಾ ಇಲಾಖೆಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಎಲ್ಲ ಜನರನ್ನು ರಕ್ಷಿಸಲಾಯಿತು. ಕೆಲವರು ಹತ್ತಿರದ ರೆಸಾರ್ಟ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಎಸ್‌ಡಿಆರ್‌ಎಫ್ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Sat, 10 September 22