ವೇದಾವತಿ ನದಿ ಪ್ರವಾಹದಲ್ಲಿ ಸಿಲುಕಿದ ಅರ್ಚಕ ಕುಟುಂಬ: ರಕ್ಷಣೆಗೆ ತೆರಳಿದ್ದ ಬೋಟ್ ಪಲ್ಟಿ

ಮುದೇನೂರು ಬಳಿ ಶನೇಶ್ವರ ದೇಗುಲದ ಆವರಣದಲ್ಲಿದ್ದ ಅರ್ಚಕರ ಕುಟುಂಬದ 6 ಜನರು ಸಿಲುಕಿದ್ದು, ಸಂತ್ರಸ್ತರನ್ನ ರಕ್ಷಿಸಲು ತೆರಳಿದ ವೇಳೆ ಬೋಟ್ ಪಲ್ಟಿಯಾಗಿದೆ. ಬೋಟ್​​ನಲ್ಲಿ ಸಂತ್ರಸ್ತರು ಸೇರಿ 10 ಜನರಿದ್ದರು ಎನ್ನಲಾಗುತ್ತಿದೆ.

ವೇದಾವತಿ ನದಿ ಪ್ರವಾಹದಲ್ಲಿ ಸಿಲುಕಿದ ಅರ್ಚಕ ಕುಟುಂಬ: ರಕ್ಷಣೆಗೆ ತೆರಳಿದ್ದ ಬೋಟ್ ಪಲ್ಟಿ
ರಕ್ಷಣೆಗೆ ತೆರಳಿದ್ದ ಬೋಟ್ ಪಲ್ಟಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Sep 08, 2022 | 1:25 PM

ಬಳ್ಳಾರಿ: ವೇದಾವತಿ ನದಿಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಅರ್ಚಕ ಕುಟುಂಬ ರಕ್ಷಣೆಗೆ ತೆರಳಿದ್ದ ಬೋಟ್ ಪಲ್ಟಿಯಾಗಿರುವಂತಹ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ‌ ರಾರಾವಿ ಬಳಿ ವೇದಾವತಿ ನದಿಯಲ್ಲಿ ನಡೆದಿದೆ. ಮುದೇನೂರು ಬಳಿ ಶನೇಶ್ವರ ದೇಗುಲದ ಆವರಣದಲ್ಲಿದ್ದ ಅರ್ಚಕರ ಕುಟುಂಬದ 6 ಜನರು ಸಿಲುಕಿದ್ದು, ಸಂತ್ರಸ್ತರನ್ನ ರಕ್ಷಿಸಲು ತೆರಳಿದ ವೇಳೆ ಬೋಟ್ ಪಲ್ಟಿಯಾಗಿದೆ. ಬೋಟ್​​ನಲ್ಲಿ ಸಂತ್ರಸ್ತರು ಸೇರಿ 10 ಜನರಿದ್ದರು ಎನ್ನಲಾಗುತ್ತಿದೆ. ಬೋಟ್​ ಪಲ್ಟಿಯಾದ ಹಿನ್ನೆಲೆ ಸಂತ್ರಸ್ತರು ಮತ್ತೆ ದೇಗುಲದಲ್ಲೇ ಆಶ್ರಯ ಪಡೆದಿದ್ದಾರೆ. ರಕ್ಷಣಾ ಕಾರ್ಯ ಸಾಧ್ಯವಾಗದ ಹಿನ್ನಲೆ ಮರಳಿ  ಅರ್ಚಕರ ಕುಟುಂಬ ದೇವಸ್ಥಾನದಲ್ಲಿ‌ ಆಶ್ರಯ ಪಡೆದಿದ್ದಾರೆ.

ರಾರಾವಿ ಸೇತುವೆ ಮೇಲೆ ವಾಹನಗಳ ಓಡಾಟಕ್ಕೆ ನಿರ್ಬಂಧ

ಭಾರಿ ಮಳೆಯಿಂದ ವೇದಾವತಿ ನದಿ ಉಕ್ಕಿ ಹರಿಯುತ್ತಿದೆ. ರಾರಾವಿ ಸೇತುವೆ ಮೇಲೆ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿದ್ದು, ರಾರಾವಿ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಸಂಪರ್ಕ ಕಡಿತವಾಗಿದೆ. ಜಿಲ್ಲೆಯ ಶಿರಗುಪ್ಪ ತಾಲೂಕಿನ ರಾರಾವಿ ಗ್ರಾಮ. ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ಹಾಕಿದ್ದಾರೆ. ವೇದಾವತಿ ಪ್ರವಾಹಕ್ಕೆ 250ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿರುವಂತಹ ಘಟನೆ ಬಸರಕೋಡ್ ಗ್ರಾಮದಲ್ಲಿ ನಡೆದಿದೆ. ಮನೆಗಳು ಜಲಾವೃತ ಹಿನ್ನೆಲೆ ದೇವಸ್ಥಾನದಲ್ಲಿ ಆಶ್ರಯ ಪಡೆಯಲಾಗಿದೆ. 3 ದಿನಗಳಿಂದ ವೇದಾವತಿ ನದಿ ಪ್ರವಾಹ ಹೆಚ್ಚುತ್ತಿದೆ.

ಗ್ರಾಮ ಪಂಚಾಯತ ಸದಸ್ಯರಿಂದ ತೆಪ್ಪದ ಮೂಲಕ ಮನೆ ಮನೆಗೂ ತೆರಳಿ ಆಹಾರ ವಿತರಣೆ ಮಾಡಲಾಗಿದೆ. ಮೂರು ದಿನಗಳಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ್ರು, ಜಿಲ್ಲಾಡಳಿತ ಗಂಜಿ ಕೇಂದ್ರ ತೆರೆದಿಲ್ಲ. ಗ್ರಾಮದ ಸಂತ್ರಸ್ತರಿಗೆ ಗ್ರಾಮ ಪಂಚಾಯತ ಸದಸ್ಯರಿಂದ ಆಹಾರ ವಿತರಣೆ ಮಾಡಲಾಗಿದೆ. ಗ್ರಾಮದ ದೇವಸ್ಥಾನ, ‌ಸಮುದಾಯ ಭವನ, ಶಾಲೆಯಲ್ಲಿ ವಾಸವಾಗಿರುವ ಸಂತ್ರಸ್ತರಿಗೆ ಆಹಾರ ವಿತರಣೆ ಮಾಡಲಾಗಿದೆ.

ಡ್ಯಾಂನಿಂದ ನದಿಗೆ 1.4 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ

ರಾಜ್ಯದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ .ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷದ 4 ಸಾವಿರದ 755 ಕ್ಯೂಸೆಕ್ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಒಳಹರಿವಿನಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್‌ ಇರೋ‌ ಹಿನ್ನಲೆ, ಮಲೆನಾಡು ಸೇರಿದಂತೆ ಅವಳಿ‌ ಜಿಲ್ಲೆಯಲ್ಲಿ ಮಳೆಯ ಜೋರಾಗಿದೆ. 28 ಗೇಟ್​ಗಳ ಮೂಲಕ ಜಲಾಶಯಕ್ಕೆ ನೀರು ಬಿಡುಗಡೆ ಮಾಡಿದ್ದು, 20 ಗೇಟ್ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 1:14 pm, Thu, 8 September 22

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ