AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttarakhand Landslide: ಉತ್ತರಾಖಂಡದ ರುದ್ರಪ್ರಯಾಗದ ಬಳಿ ಭೂಕುಸಿತ, ಹಲವು ಮಂದಿ ಸಿಲುಕಿರುವ ಶಂಕೆ

ಉತ್ತರಾಖಂಡದಲ್ಲಿ ಭಾರಿ ಮಳೆ ಮುಂದುವರೆದಿದ್ದು, ರುದ್ರಪ್ರಯಾಗದಲ್ಲಿ ಭೂಕುಸಿತ ಸಂಭವಿಸಿದೆ, ಮಣ್ಣಿನ ಅವಶೇಷಗಳಡಿ ಹಲವು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Uttarakhand Landslide: ಉತ್ತರಾಖಂಡದ ರುದ್ರಪ್ರಯಾಗದ ಬಳಿ ಭೂಕುಸಿತ, ಹಲವು ಮಂದಿ ಸಿಲುಕಿರುವ ಶಂಕೆ
ಭೂಕುಸಿತ
ನಯನಾ ರಾಜೀವ್
|

Updated on: Aug 04, 2023 | 10:07 AM

Share

ಉತ್ತರಾಖಂಡದಲ್ಲಿ ಭಾರಿ ಮಳೆ ಮುಂದುವರೆದಿದ್ದು, ರುದ್ರಪ್ರಯಾಗದಲ್ಲಿ ಭೂಕುಸಿತ ಸಂಭವಿಸಿದೆ, ಮಣ್ಣಿನ ಅವಶೇಷಗಳಡಿ ಹಲವು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲಾಡಳಿತ ತಂಡ, ವಿಪತ್ತು ನಿರ್ವಹಣಾ ತಂಡ, ಪೊಲೀಸ್ ತಂಡ, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಇತರ ತಂಡಗಳು ಸ್ಥಳದಲ್ಲಿವೆ.

ಎಸ್‌ಪಿ ರುದ್ರಪ್ರಯಾಗ, ಡಾ.ವಿಶಾಖಾ ಮಾತನಾಡಿ, ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದರು. ಭಾರಿ ಮಳೆಯಿಂದಾಗಿ ಅಂಗಡಿಗಳ ಮೇಲೆ ಕಲ್ಲು ಬಂಡೆಗಳು ಬಿದ್ದಿದ್ದು, ಮೂರು ಅಂಗಡಿಗಳು ಹಾನಿಗೀಡಾಗಿವೆ. ಈ ಪ್ರದೇಶದಲ್ಲಿ ಸುಮಾರು 10-12 ಜನ ಇದ್ದರು ಎಂದು ಹೇಳಲಾಗಿದೆ. ಇಲ್ಲಿವರೆಗೆ ಯಾರೊಬ್ಬರೂ ಪತ್ತೆಯಾಗಿಲ್ಲ.

ಮತ್ತಷ್ಟು ಓದಿ: Karnataka Rains: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ಮುಂಗಾರು ಚುರುಕು, ಈ ಪ್ರದೇಶಗಳಲ್ಲಿ ಭಾರಿ ಮಳೆ

ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಗೌರಿಕುಂಡ್ ಬಳಿ ದೊಡ್ಡ ಭೂಕುಸಿತದಿಂದಾಗಿ ನಾಶವಾದ ಅಂಗಡಿಗಳ ಅವಶೇಷಗಳಲ್ಲಿ ಹಲವರು ಹೂತುಹೋಗಿದ್ದಾರೆ ಎಂದು ಶಂಕಿಸಲಾಗಿದೆ.

ಉತ್ತರಾಖಂಡದ 7 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಡೆಹ್ರಾಡೂನ್, ಹರಿದ್ವಾರ, ತೆಹ್ರಿ, ನೈನಿತಾಲ್, ಪೌರಿ, ಉತ್ತರಕಾಶಿ, ಚಮೋಲಿಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ಇದೆ. ಹವಾಮಾನ ಇಲಾಖೆಯು ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆಯನ್ನು ರವಾನಿಸಲು ಸೂಚಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ