AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡದಲ್ಲಿ ಮದರಸಾಗಳಿಗೆ ಶುಕ್ರವಾರದ ಬದಲಾಗಿ ಭಾನುವಾರವೇ ವಾರದ ರಜೆ; ಧಾಮಿ ಸರ್ಕಾರ ನಿರ್ಧಾರ

ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯದ ಮದರಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಮದರಸಾಗಳಲ್ಲಿ ವರ್ಷಗಳಿಂದ ಜಾರಿಯಲ್ಲಿದ್ದ ಶುಕ್ರವಾರದ ರಜೆಯನ್ನು ರದ್ದುಗೊಳಿಸಿದೆ. ಇನ್ಮುಂದೆ ರಾಜ್ಯದ ಎಲ್ಲಾ ಮದರಸಾಗಳಿಗೂ ಭಾನುವಾರವೇ ಅಧಿಕೃತ ವಾರದ ರಜೆಯಾಗಿರಲಿದೆ ಎಂದು ಸರ್ಕಾರ ಘೋಷಿಸಿದೆ. ರಾಜ್ಯದ ಸಾಮಾನ್ಯ ಶಾಲೆಗಳು ಹಾಗೂ ಮದರಸಾಗಳ ನಡುವೆ ಶಿಕ್ಷಣ ಮತ್ತು ಆಡಳಿತಾತ್ಮಕ ಏಕರೂಪತೆಯನ್ನು ತರುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉತ್ತರಾಖಂಡ ಮದರಸಾ ಶಿಕ್ಷಣ ಮಂಡಳಿ ತಿಳಿಸಿದೆ. ಇಲ್ಲಿಯವರೆಗೆ ಮದರಸಾಗಳಲ್ಲಿ ಪ್ರತಿ ಶುಕ್ರವಾರ ರಜೆ ನೀಡಲಾಗುತ್ತಿತ್ತು. ಆದರೆ ಹೊಸ ಆದೇಶದ ಪ್ರಕಾರ, ಶುಕ್ರವಾರದ ಬದಲಿಗೆ ರಾಜ್ಯದ ಇತರ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಂತೆ ಮದರಸಾಗಳಿಗೂ ಭಾನುವಾರವೇ ವಾರದ ರಜೆಯಿರಲಿದೆ.

ಉತ್ತರಾಖಂಡದಲ್ಲಿ ಮದರಸಾಗಳಿಗೆ ಶುಕ್ರವಾರದ ಬದಲಾಗಿ ಭಾನುವಾರವೇ ವಾರದ ರಜೆ; ಧಾಮಿ ಸರ್ಕಾರ ನಿರ್ಧಾರ
ಪುಷ್ಕರ್ ಸಿಂಗ್ ಧಾಮಿImage Credit source: PTI
ಸುಷ್ಮಾ ಚಕ್ರೆ
|

Updated on: Oct 21, 2026 | 4:28 PM

Share

ಡೆಹ್ರಾಡೂನ್, ಅಕ್ಟೋಬರ್ 21: ಉತ್ತರಾಖಂಡ ಸರ್ಕಾರವು ರಾಜ್ಯ ಶಿಕ್ಷಣ ಇಲಾಖೆಯಿಂದ ಶಾಲೆಗಳು ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಮದರಸಾಗಳಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ ಶುಕ್ರವಾರದ ಬದಲಿಗೆ ಭಾನುವಾರವೇ ವಾರದ ರಜೆ ನೀಡಲು ನಿರ್ಧರಿಸಿದೆ. ಈ ಹಿಂದೆ ಜುಮಾ ಪ್ರಾರ್ಥನೆಯ ಹಿನ್ನೆಲೆಯಲ್ಲಿ ಮದರಸಾಗಳಿಗೆ ಶುಕ್ರವಾರ ವಾರದ ರಜೆಯನ್ನು ನಿಗದಿಪಡಿಸಲಾಗಿತ್ತು. ಇಂದು ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ” ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ನಮ್ಮ ಸರ್ಕಾರ ನೀತಿ, ನಿಯಮ ಹಾಗೂ ಕಾನೂನುಗಳನ್ನು ರೂಪಿಸಿದೆ. ಈ ನಿಯಮಗಳನ್ನು ಪಾಲಿಸದ ಸಂಸ್ಥೆಗಳಿಗೆ ಇಲ್ಲಿ ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರದ ವಾರದ ರಜೆಯನ್ನು ಬದಲಾಯಿಸುವ ಬಗ್ಗೆ ಮಾತನಾಡಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮದರಸಾಗಳು ಈಗ ಶಿಕ್ಷಣ ಇಲಾಖೆಯಿಂದ ಗುರುತಿಸಲ್ಪಟ್ಟ ಶಾಲೆಗಳಾಗಿರುವುದರಿಂದ, ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸುವ ನಿಯಮಗಳೇ ಇವುಗಳಿಗೂ ಅನ್ವಯಿಸುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್

ಉತ್ತರಾಖಂಡದ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರದ ಅಧ್ಯಕ್ಷ ಸುರ್ಜಿತ್ ಸಿಂಗ್ ಗಾಂಧಿ ಮಾತನಾಡಿ, “ಉತ್ತರಾಖಂಡದ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರವು ರೂಪಿಸಿರುವ ಏಕರೂಪದ ಶಿಕ್ಷಣ ನೀತಿಯು ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ಶಾಲೆಗಳಿಗೆ ಅನ್ವಯಿಸುತ್ತದೆ ಎಂದು ಪುಷ್ಕರ್ ಸಿಂಗ್ ಧಾಮಿ ಸರ್ಕಾರ ಸ್ಪಷ್ಟಪಡಿಸಿದೆ. ನೋಂದಾಯಿತ ಮದರಸಾಗಳು ಈಗ ಶಾಲೆಗಳಾಗಿವೆ. ಆದ್ದರಿಂದ, ಅವು ಶಿಕ್ಷಣ ಇಲಾಖೆ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರವು ನಿಗದಿಪಡಿಸಿದ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಬೇಕು. ಇನ್ಮುಂದೆ ವಾರದ ರಜೆಯು ಶುಕ್ರವಾರದ ಬದಲಿಗೆ ಭಾನುವಾರವೇ ಇರಲಿದೆ” ಎಂದು ತಿಳಿಸಿದರು.

ಅಲ್ಪಸಂಖ್ಯಾತ ಶಿಕ್ಷಣ ಮಂಡಳಿ ಸ್ಥಾಪನೆ:

ಧಾಮಿ ಸರ್ಕಾರವು ಉತ್ತರಾಖಂಡ ಮದರಸಾ ಮಂಡಳಿಯನ್ನು ರದ್ದುಗೊಳಿಸಿ ‘ಅಲ್ಪಸಂಖ್ಯಾತ ಶಿಕ್ಷಣ ಮಂಡಳಿ’ಯನ್ನು ಸ್ಥಾಪಿಸಿದೆ. ಇದರ ವ್ಯಾಪ್ತಿಗೆ ಮುಸ್ಲಿಂ, ಸಿಖ್, ಪಾರ್ಸಿ, ಜೈನ್ ಮತ್ತು ಬೌದ್ಧ ಸಮುದಾಯಗಳಿಗೆ ಸೇರಿದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ತರಲಾಗಿದೆ. ಈ ಹಿಂದೆ ರಾಜ್ಯದ ಅಲ್ಪಸಂಖ್ಯಾತ ಮದರಸಾ ಚೌಕಟ್ಟಿನಡಿಯಲ್ಲಿ 452 ಮಾನ್ಯತೆ ಪಡೆದ ಮದರಸಾಗಳಿದ್ದವು. ಅವುಗಳಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ 76 ಮದರಸಾಗಳಿಗೆ ಪ್ರಾಧಿಕಾರವು ‘ಶಾಲೆಗಳು’ ಎಂದು ಮಾನ್ಯತೆ ನೀಡಿದೆ.

ಇದನ್ನೂ ಓದಿ: ಬಂಗಾಳದಲ್ಲಿ 252 ಅಕ್ರಮ ಮದರಸಾಗಳಿಗೆ ಬೀಗ: ಬಾಂಗ್ಲಾ ಉಗ್ರರ ಆಶ್ರಯ ತಾಣ ಎಂದ ಸಚಿವ ದಿಲೀಪ್ ಘೋಷ್

ರಾಷ್ಟ್ರೀಯ ಪಠ್ಯಕ್ರಮ ಜಾರಿ:

ಈ ಮದರಸಾಗಳಲ್ಲಿ ಸುಮಾರು 30,000 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪಠ್ಯಕ್ರಮವನ್ನು ಜಾರಿಗೆ ತರಲು ಧಾಮಿ ಸರ್ಕಾರ ಒತ್ತು ನೀಡಿದೆ. ಇನ್ನುಳಿದ 114 ಮದರಸಾಗಳ ಅರ್ಜಿಗಳು ಪ್ರಸ್ತುತ ಶಿಕ್ಷಣ ಇಲಾಖೆಯ ಪರಿಶೀಲನೆಯಲ್ಲಿವೆ. ಡೆಹ್ರಾಡೂನ್ ಜಿಲ್ಲೆಯ 41 ಮದರಸಾಗಳಲ್ಲಿ 6, ಹರಿದ್ವಾರ ಜಿಲ್ಲೆಯ 270ರಲ್ಲಿ 44, ನೈನಿತಾಲ್ ಜಿಲ್ಲೆಯ 18ರಲ್ಲಿ 2 ಹಾಗೂ ಉಧಮ್ ಸಿಂಗ್ ನಗರ ಜಿಲ್ಲೆಯ 119 ಮದರಸಾಗಳಲ್ಲಿ 24 ಮದರಸಾಗಳಿಗೆ ಮಾನ್ಯತೆ ನೀಡಲಾಗಿದೆ. ಶಿಕ್ಷಣ ಇಲಾಖೆ ಮತ್ತು ಸಂಬಂಧಪಟ್ಟ ಪ್ರಾಧಿಕಾರದ ಅನುಮತಿಯಿಲ್ಲದೆ ಮದರಸಾಗಳು ಕಾರ್ಯಾಚರಣೆ ನಡೆಸುವಂತಿಲ್ಲ ಹಾಗೂ ಇಂತಹ ಸಂಸ್ಥೆಗಳನ್ನು ಸೀಲ್ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!
ಅರಮನೆಯಿಂದಲೇ ಅಮ್ಮನ ಜೊತೆಗೆ ಆದ್ಯವೀರ್, ಯುಗಾಧ್ಯಕ್ಷ ಪೂಜೆ ವೀಕ್ಷಣೆ
ಅರಮನೆಯಿಂದಲೇ ಅಮ್ಮನ ಜೊತೆಗೆ ಆದ್ಯವೀರ್, ಯುಗಾಧ್ಯಕ್ಷ ಪೂಜೆ ವೀಕ್ಷಣೆ